‘ನಾನು ಯಾರೊಂದಿಗೂ ಓಡಿ ಹೋಗಿಲ್ಲ, ಶ್ರೀಧರ್ ನಾಯಕ್ಗೆ ಏಡ್ಸ್ ಬಂದಿತ್ತು’; ಪತ್ನಿ ಜ್ಯೋತಿ ನೇರ ಮಾತು
ಶ್ರೀಧರ್ ನಾಯಕ್ ಅವರ ನಿಧನದ ಬಳಿಕ ಅವರ ಪತ್ನಿ ಜ್ಯೋತಿ ಅವರ ಹಳೆಯ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಅವರು ಶ್ರೀಧರ್ ಅವರಿಗೆ ಏಡ್ಸ್ ಮತ್ತು ಕ್ಯಾನ್ಸರ್ ಇತ್ತು ಎಂದು ಹೇಳಿದ್ದಾರೆ. ಅವರ ಮದುವೆಯ ಜೀವನದಲ್ಲಿನ ಸಮಸ್ಯೆಗಳು ಮತ್ತು ಶ್ರೀಧರ್ ಅವರ ವರ್ತನೆಯ ಬಗ್ಗೆಯೂ ಮಾತನಾಡಿದ್ದಾರೆ. ತಾವು ಯಾರೊಂದಿಗೂ ಓಡಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀಧರ್ ನಾಯಕ್ (Shridhar Naik) ಅವರು ನಿಧನ ಹೊಂದಿದ್ದಾರೆ. ಅವರ ಸಾವಿನ ವಿಚಾರ ಸಾಕಷ್ಟು ದುಃಖ ಮೂಡಿಸಿದೆ. ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಸೂತಕದ ಛಾಯೆ ಮೂಡಿದೆ. ಕಲಾವಿದನಾಗಿ, ನಟನಾ ತರಬೇತುದಾರನಾಗಿ ಶ್ರೀಧರ್ ಇಷ್ಟ ಆಗಿದ್ದರು. ಆದರೆ, ಅವರ ಕುಟುಂಬದಲ್ಲಿ ಸಾಕಷ್ಟು ಒಡಕು ಇತ್ತು. ಈ ಬಗ್ಗೆ ಶ್ರೀಧರ್ ಪತ್ನಿಯದ್ದು ಎನ್ನಲಾದ ಹಳೆಯ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಅವರು ಪತಿಗೆ ಏಡ್ಸ್ ಇತ್ತು ಎಂಬುದನ್ನು ರಿವೀಲ್ ಮಾಡಿದ್ದರು.
ಜ್ಯೋತಿ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಮೊದಲು ಶ್ರೀಧರ್ ಪತ್ನಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜ್ಯೋತಿ ಈ ಆಡಿಯೋ ಹರಿಬಿಟ್ಟಿದ್ದರು ಎನ್ನಲಾಗಿದೆ. ‘ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು’ ಎಂದು ಮಾತು ಆರಂಭಿಸಿದ್ದಾರೆ.
‘ಒಂದೇ ತಿಂಗಳಿಗೆ ಶ್ರೀಧರ್ ಬದಲಾದ. ರಿಸ್ಟ್ರಿಕ್ಷನ್ ಹಾಕಲು ಆರಂಭಿಸಿದ. ಇದೆಲ್ಲವೂ ಅಬ್ನಾರ್ಮಲ್ ಆಗಿತ್ತು. 11 ವರ್ಷಗಳ ಹಿಂದಿನ ಮಾತನ್ನು ಈಗ ಹೇಳಲು ಸಾಧ್ಯವಿಲ್ಲ. ಅವನು ನನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡೆ. ಆದರೆ, ಪ್ರೀತಿಸಿಲ್ಲ. ಇದನ್ನು ಅವನೇ ಒಂದು ದಿನ ಹೇಳಿದ್ದ. ಹೀಗೆಲ್ಲ ಆಯ್ತಾ ಎಂದು ಹೇಳಿದರೆ ಯಾರೂ ನಂಬಲ್ಲ. ಅವನು ಸಾಕಷ್ಟು ಬಾರಿ ಹೊಡೆದಿದ್ದಾನೆ. ಆದರೆ, ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದಿದ್ದಾರೆ ಜ್ಯೋತಿ.
ಜ್ಯೋತಿ ಅವರದ್ದ ಎನ್ನಲಾದ ಆಡಿಯೋ
‘ನಾನು ಯಾರ ಜೊತೆಯೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಟ್ರ್ಯಾಜಿಡಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಆದರೆ, ನಡೆದಿದೆ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ. ಅವನಿಗೆ ಎಚ್ಐವಿ ಬಂದಿದೆ. ಅಲ್ಲದೆ, ಕ್ಯಾನ್ಸರ್ ಕೂಡ ಬಂದಿದೆ’ ಎಂಬ ಮಾತನ್ನು ಅವರು ಆಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸುರದ್ರೂಪಿ ಶ್ರೀಧರ್ ಕೊನೆಯ ದಿನಗಳು ಹೇಗಿದ್ದವು ನೋಡಿ; ವೈರಿಗಳಿಗೂ ಹೀಗಾಗಬಾರದು
‘ತುಂಬಾ ವೈದ್ಯರ ಬಳಿ ಕೇಳಿದ್ದೆ. ಅದಕ್ಕೆ ಏನಾದರೂ ಔಷಧ ಇದೆಯೇ? ಕ್ಯೂರ್ ಮಾಡಬಹುದೇ ಎಂದು ಕೇಳಿದ್ದೆ. ಆಗಲ್ಲ ಎಂದರು. ಅವನಿಗೆ ಸಿಕ್ಕಾಪಟ್ಟೆ ಅಹಂಕಾರ ಇತ್ತು. ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ. ಇದಕ್ಕೆ ಅವನೇ ಕಾರಣ. ನನ್ನ ಕಾರಣಕ್ಕೆ ಏಡ್ಸ್ ಬಂದಿಲ್ಲ’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:17 pm, Tue, 27 May 25








