‘ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’; ಅನುಶ್ರೀಗೆ ನೇರವಾಗಿ ಹೇಳಿದ ಮನೋಜ್ ಭಾರ್ಗವ್
ಆ್ಯಂಕರ್ ಅನುಶ್ರೀ ಅವರು ಜೀ ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಾರೆ. ಅವರು ‘ಸರಿಗಮಪ ಸೀಸನ್ 21’ರ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಈಗ ಮನೋಜ್ ಭಾರ್ಗವ ಅವರು ಸರಿಗಮಪ ವೇದಿಕೆ ಮೇಲೆ ಅನುಶ್ರೀಗೆ ಒಂದು ಮಾತು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಆ್ಯಂಕರ್ ಅನುಶ್ರೀ (Anchor Anushree) ಅವರು ‘ಸರಿಗಮಪ’ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಪ್ರತಿ ಬಾರಿಯೂ ಅವರ ಆ್ಯಂಕರಿಂಗ್ ಗಮನ ಸೆಳೆಯುತ್ತದೆ. ಇತ್ತೀಚೆಗೆ ‘ಸರಿಗಮಪ ಸೀಶನ್ 21’ರ ಸೆಮಿಫೈನಲ್ ನಡೆಯಿತು. ವೇದಿಕೆಯಿಂದ ಸ್ಪರ್ಧಿ ಮನೋಜ್ ಭಾರ್ಗವ್ ಹೊರ ಹೋದರು. ಈ ವೇಳೆ ಅವರು ಅನುಶ್ರೀ ಬಳಿ ‘ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದರು. ಮನೋಜ್ ಭಾರ್ಗವ್ಗೆ ಇಷ್ಟು ದಿನ ಅನುಶ್ರೀ ಜೊತೆ ಒಳ್ಳೆಯ ಒಡನಾಟ ಇತ್ತು. ತಾಯಿ ಸ್ಥಾನದಲ್ಲಿ ನಿಂತು ಅನುಶ್ರೀ ಅವರು ಮನೋಜ್ ಭಾರ್ಗವ್ಗೆ ಮಾರ್ಗದರ್ಶನ ನೀಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

