ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹುಚ್ಚು ಸಾಹಸಗಳನ್ನು ಮುಂದುವರಿಸಿರುವ ಅಲ್ಪಮತಿ ಪ್ರವಾಸಿಗರು!
ಹುಚ್ಚು ಸಾಹಸಗಳನ್ನು ಪ್ರದರ್ಶಿಸುವ ಪ್ರವಾಸಿಗರು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದರ ಜೊತೆಗೆ ತಮ್ಮ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸಸುವ ಮೂಲಕ ಇಲ್ಲಿಂದ ಹೋಗುವ ಇತರರಿಗೂ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಇಲ್ಲಿಯ ರಸ್ತೆಗಳು ಕಿರಿದಾಗಿವೆ ಮತ್ತು ಒಂದು ಪಕ್ಕ ಪ್ರಪಾತ. ಮಳೆಯಿಂದ ಕೆಸರಾಗಿರುವ ರಸ್ತೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಯಾರು ಹೊಣೆ?
ಚಿಕ್ಕಮಗಳೂರು, ಮೇ 27: ರಾಜ್ಯದಾದ್ಯಂತ ಮಳೆ ಸುರಿಯುತ್ತಿದೆ ಮತ್ತು ಹವಾಮಾನ ಇಲಾಖೆ (IMD) ಆಯಾ ಜಿಲ್ಲೆಗಳಲ್ಲಿ ಮಳೆ ಸುರಿಯುವ ಪ್ರಮಾಣಕ್ಕೆ ಅನುಗುಣವಾಗಿ ರೆಡ್, ಆರೇಂಜ್ ಮತ್ತು ಯೆಲ್ಲೋ ಅಲರ್ಟ್ಗಳನ್ನು ಘೋಷಿಸಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆ ಹೇಗೆ ಸುರಿಯುತ್ತದೆ ಅಂತ ಕನ್ನಡಿಗರಿಗೆ ಗೊತ್ತಿಲ್ಲದಿಲ್ಲ. ಅದರೆ, ಈ ರಸ್ತೆಯ ಮೂಲಕ ಹಾದುಹೋಗುವ ಪ್ರವಾಸಿಗರಿಗೆ ತಮ್ಮ ಹುಚ್ಚಾಟ ಪ್ರದರ್ಶಿಸಲು ಚಾರ್ಮಾಡಿ ಘಾಟ್ ಪ್ರದೇಶವೇ ಅಗಬೇಕು. ಇಲ್ನೋಡಿ, ನಾಲ್ಕು ಜನ ಸುರಿಯುತ್ತಿರುವ ಮಳೆಯಲ್ಲಿ ಜಾರುವ ಬಂಡೆಗಳ ಮೇಲೆ ಹತ್ತುವ ಇಳಿಯುವ ಸಾಹಸ ಮಾಡುತ್ತಿದ್ದಾರೆ. ಪಕ್ಕದಲ್ಲಿ ಕಲ್ಲುಬಂಡೆಗಳ ಮೂಲಕ ನೀರು ಜಲಪಾತದಂತೆ ಬೀಳುತ್ತಿದೆ. ಕಾಲು ಜಾರಿದರೆ ಏನಾದೀತು ಅಂತ ಹೇಳುವ ಅವಶ್ಯಕತೆಯಿಲ್ಲ, ಆದರೆ ಮತಿಹೀನ ಪ್ರವಾಸಿಗರಿಗೆ ಹೇಳೋರು ಯಾರು?
ಇದನ್ನೂ ಓದಿ: ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟೇರಿಂಗ್ ಕಟ್: ಆಮೇಲೇನಾಯ್ತು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್ನಲ್ಲಿ ಸಿಲಿಕಾನ್ ಸಿಟಿ ಕೂಲ್ ಕೂಲ್

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್

ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
