ಚಾರ್ಮಾಡಿ ಘಾಟ್ನಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ: ರೊಚ್ಚಿಗೆದ್ದ ಸಲಗದ ವಿಡಿಯೋ ವೈರಲ್
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆಗಳು ಕಾಣಸಿಕ್ಕ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಈ ಬಾರಿ ವಿಚಿತ್ರ ವಿದ್ಯಮಾನ ಘಟಿಸಿದೆ. ಪ್ರಯಾಣಿಕರು ಕಾಡಾನೆ ಜತೆ ಸೆಲ್ಫೀ ತೆಗೆಯಲು ಮುಂದಾದಾಗ ಅದು ರೊಚ್ಚಿಗೆದ್ದಿದೆ. ಒಂಟಿ ಸಲಗ ರೊಚ್ಚಿಗೆದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿ ನೀಡಲಾಗಿದೆ.
ಮಂಗಳೂರು, ಮೇ 22: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯ ನಾಲ್ಕನೇ ತಿರುವಿನಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಪ್ರಯಾಣಿಕರು ಸೆಲ್ಫೀ ಕ್ಲಿಕ್ಕಿಸುವುದಕ್ಕಾಗಿ ಅದರತ್ತ ಧಾವಿಸಿದ್ದಾರೆ. ವ್ಯಕ್ತಿಯೊಬ್ಬರು ಸೆಲ್ಫೀಗಾಗಿ ಸಮೀಪ ಬರುತ್ತಿದ್ದಂತೆಯೇ ಕಾಡಾನೆ ರೊಚ್ಚಿಗೆದ್ದಿದೆ. ರಸ್ತೆಯಲ್ಲಿ ಕಾಡಾನೆ ನಿಂತಿದ್ದರಿಂದ ಘಾಟ್ ರಸ್ತೆಯಲ್ಲಿ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಸದ್ಯ, ಕಾಡಾನೆ ಜತೆ ವ್ಯಕ್ತಿಯೊಬ್ಬರು ಸೆಲ್ಫೀ ತೆಗೆಯುತ್ತಿರುವ ಹಾಗೂ ಅಷ್ಟರಲ್ಲಿ ಆನೆ ರೊಚ್ಚಿಗೆದ್ದ ವಿಡಿಯೋ ವೈರಲ್ ಆಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: May 22, 2025 10:30 AM
Latest Videos
