AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಎಂಬಿ ಪಾಟೀಲ್ ಹಿಂದೆ ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಸಚಿವ ಎಂಬಿ ಪಾಟೀಲ್ ಹಿಂದೆ ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2025 | 10:35 AM

Share

ಜನಪ್ರತಿನಿಧಿಗಳು ಉತ್ತಮ ಕೆಲಸ ಮಾಡಿದಾಗ ಹೊಗಳಬೇಕು ಮತ್ತು ಅಭಿನದಿಸಬೇಕು, ಹಿಂದೆ ಕರ್ನಾಟಕ ಸರ್ಕಾರವು ಸಿದ್ದೇಶ್ವರ ಸಹಕಾರಿ ಸಂಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದಾಗ ಅದನ್ನು ಎಂಬಿ ಪಾಟೀಲ್ ಅವರು ತಪ್ಪಿಸಿದ್ದರು ಎಂದು ಬಸನಗೌಡ ಯತ್ನಾಳ್ ಹೇಳಿದರು. ಇವರಿಬ್ಬರ ಗೆಳೆತನದ ಬಗ್ಗೆ ಮಾಜಿ ಶಾಸಕ ವಿಜುಗೌಡ ಪಾಟೀಲ್ ಅಕ್ಷೇಪನೆ ಎತ್ತಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಜಯಪುರ, ಮೇ 22: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ನಡುವೆ ಉತ್ತಮ ಸ್ನೇಹವಿರುವಂತಿದೆ. ಇವರಿಬ್ಬರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದ ಸಂದರ್ಭಗಳು ವಿರಳ. ನಿನ್ನೆ ವಿಜಯಪುರದ ಸಿದ್ದೇಶ್ವರ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯತ್ನಾಳ್, ಸಚಿವ ಪಾಟೀಲ್​ರನ್ನು ಮನಸಾರೆ ಹೊಗಳಿದರು. ಅವರನ್ನು ಆಧುನಿಕ ಭಗೀರಥ ಎಂದು ಗೌರವಿಸಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ, ಹಿಂದೆ ನೀರಾವರಿ ಸಚಿವರಾಗಿದ್ದಾಗ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ, ವಿಜಯಪುರ ನಗರದ ಅಭಿವೃದ್ಧಿಗೂ ಅವರ ಕಾಣಿಕೆ ದೊಡ್ಡದು ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ: ಶಿವಕುಮಾರ್ ಸಿಎಂ ಮತ್ತು ವಿಜಯೇಂದ್ರ ಡಿಸಿಎಂ ಅಂತ ಇಬ್ಬರ ನಡುವೆ ಡೀಲ್ ಆಗಿತ್ತು: ಬಸನಗೌಡ ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ