ಶಿವಕುಮಾರ್ ಸಿಎಂ ಮತ್ತು ವಿಜಯೇಂದ್ರ ಡಿಸಿಎಂ ಅಂತ ಇಬ್ಬರ ನಡುವೆ ಡೀಲ್ ಆಗಿತ್ತು: ಬಸನಗೌಡ ಯತ್ನಾಳ್
ನಾನು ಶಾಶ್ವತವಾಗಿ ಬಿಜೆಪಿ ಹೊರಬಿದ್ದಿಲ್ಲ ಎಂದು ಹೇಳುವ ಬಸನಗೌಡ ಯತ್ನಾಳ್ ಕಾಂಗ್ರೆಸ್ ಪಕ್ಷವನ್ನು ಸತ್ತರೂ ಸೇರಲ್ಲ ಎಂದು ಹೇಳುತ್ತಾರೆ. ಆ ಪಕ್ಷದಲ್ಲಿ ಹಿಂದೂಗಳೇ ಇಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಓಲೈಸುವುದಷ್ಟೇ ಕಾಂಗ್ರೆಸ್ ನಾಯಕರ ಕೆಲಸ, ಬೇಕಾದರೆ ಒಂದು ಹೊಸ ಪಕ್ಷ ಕಟ್ಟಿ ನನ್ನ ಸಾಮರ್ಥ್ಯ ಏನು ಅಂತ ತೋರಿಸುವೆ, ಆದರೆ ಕಾಂಗ್ರೆಸ್ ಮಾತ್ರ ಸೇರಲಾರೆ ಎಂದು ಯತ್ನಾಳ್ ಹೇಳುತ್ತಾರೆ.
ದಾವಣಗೆರೆ, ಮೇ 16: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಒಂದು ಡೀಲ್ ನಡೆದಿತ್ತು, ಶಿವಕುಮಾರ್ ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಉಪ ಮುಖ್ಯಮಂತ್ರಿ-ಹಾಗಂತ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಾರೆ! ಇವರು ಹೇಳೋದೇ ನಿಜವಾದರೆ ರಾಜ್ಯದಲ್ಲಿ ವಿರೋಧ ಪಕ್ಷ ಯಾರು? ಯತ್ನಾಳ್ ಪ್ರಕಾರ ಶಿವಕುಮಾರ್ ಸಿಎಂ ಮತ್ತು ವಿಜಯೇಂದ್ರ ಡಿಸಿಎಂ ಅದರೆ, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರೂ ಜೊತೆಗೂಡಿದಂತೆಯೇ, ಹೌದು ತಾನೇ? ಹಾಗೊಂದು ವೇಳೆ ಆದರೆ, ಬಸನಗೌಡ ಯತ್ನಾಳ್ ಮಾತ್ರ ವಿರೋಧ ಪಕ್ಷ; ವನ್ ಮ್ಯಾನ್ ಆರ್ಮಿ! ನಮ್ಮ ರಾಜ್ಯದ ಅತಿದೊಡ್ಡ ಹಿಟ್ ಅಂಡ್ ರನ್ ಆಸಾಮಿ ಅಂದರೆ ಯತ್ನಾಳ್ ಇರಬೇಕು. ಅವರ ಮಾಡುವ ಅರೋಪಗಳಿಗೆ ಸಾಕ್ಷಿ ಇರಲ್ಲ, ದಾಖಲೆ ಇರಲ್ಲ.
ಇದನ್ನೂ ಓದಿ: ಬಸನಗೌಡ ಯತ್ನಾಳ್ ಮಾಧ್ಯಮದೆದುರು ಪ್ರತ್ಯಕ್ಷರಾದರೂ ಶಿವಾನಂದ ಪಾಟೀಲ್ರ ಸವಾಲು ಸ್ವೀಕರಿಸಲಿಲ್ಲ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್: ಸಿಎಂ ಶಾಂತಿ ಭಾಷಣ

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ

ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ

ಇಂದೋರ್ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
