ಇದ್ದಕ್ಕಿದ್ದಂತೆ ಸುರಿದ ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ವಾಶಿಮ್ ಮಾರುಕಟ್ಟೆಯಲ್ಲಿ ಅಕಾಲಿಕ ಮಳೆಯಿಂದ ಕೊಚ್ಚಿಹೋಗುತ್ತಿದ್ದ ನೆಲಗಡಲೆ ಕೊಯ್ಲು ಉಳಿಸಲು ಮಹಾರಾಷ್ಟ್ರದ ಯುವಕ ಹೋರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾವಿರಾರು ಜನರನ್ನು ಭಾವುಕಗೊಳಿಸಿರುವ ಈ ದೃಶ್ಯದಲ್ಲಿ, ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮನೋರಾ ಮಾರುಕಟ್ಟೆ ಸಮಿತಿಯ ರೈತ ಯುವಕ ಅನಿರೀಕ್ಷಿತ ಭಾರೀ ಮಳೆಯಿಂದ ತಾನು ಬೆಳೆದ ನೆಲಗಡಲೆ ಅಥವಾ ಶೇಂಗಾಕಾಯಿಯನ್ನು ಉಳಿಸಲು ಒದ್ದಾಡುವುದನ್ನು ನೋಡಬಹುದು.
ಮುಂಬೈ, ಮೇ 16: ಬಿಸಿಲಿನ ಶಾಖ, ಶೀತ ಮತ್ತು ನಿಯಮಿತ ಕಾಲೋಚಿತ ಮಳೆಯನ್ನು ಸಹಿಸಿಕೊಂಡು ತಮ್ಮ ಬೆಳೆಗಳನ್ನು ಮಾರಲು ಮಾರುಕಟ್ಟೆಗೆ ಬಂದ ರೈತರು ಮಹಾರಾಷ್ಟ್ರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ. ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಆಶಯದೊಂದಿಗೆ ಮಾರುಕಟ್ಟೆಗೆ ಬಂದ ಅವರಿಗೆ ಅನಿರೀಕ್ಷಿತ ಮಳೆಯಿಂದ ಆತಂಕ ಶುರುವಾಗಿದೆ. ತಮ್ಮ ಬೆಳೆಗಳಿಗೆ ಸಾಕಷ್ಟು ಆಶ್ರಯ ಅಥವಾ ರಕ್ಷಣೆ ಲಭ್ಯವಿಲ್ಲದ ಕಾರಣ ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾವನ್ನು ಕಾಪಾಡಿಕೊಳ್ಳಲು ಯುವಕ ಪರದಾಡುವ ವಿಡಿಯೋ ವೈರಲ್ ಆಗಿದೆ.
ಸಾವಿರಾರು ಜನರನ್ನು ಭಾವುಕಗೊಳಿಸಿರುವ ಈ ದೃಶ್ಯದಲ್ಲಿ, ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮನೋರಾ ಮಾರುಕಟ್ಟೆ ಸಮಿತಿಯ ರೈತ ಯುವಕ ಅನಿರೀಕ್ಷಿತ ಭಾರೀ ಮಳೆಯಿಂದ ತಾನು ಬೆಳೆದ ನೆಲಗಡಲೆ ಅಥವಾ ಶೇಂಗಾಕಾಯಿಯನ್ನು ಉಳಿಸಲು ಒದ್ದಾಡುವುದನ್ನು ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ