AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ

ರಶ್ಮಿಕಾ ಮಂದಣ್ಣ ನಟಿಸಿರುವ ತಮಿಳು ಚಿತ್ರ 'ಕುಬೇರ'ದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಡಿ-ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಮತ್ತು ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಣ ಮತ್ತು ಶ್ರೀಮಂತ ವ್ಯಕ್ತಿಯ ಕಥೆಯನ್ನು ಚಿತ್ರ ಹೇಳುತ್ತದೆ. ಟೀಸರ್ ಹಾಡಿನ ರೂಪದಲ್ಲಿದೆ. ಜೂನ್ 20 ರಂದು ಚಿತ್ರ ತೆರೆಗೆ ಬರಲಿದೆ.

‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ
ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: May 26, 2025 | 7:41 AM

Share

ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಹುತೇಕ ಸಿನಿಮಾಗಳಲ್ಲಿ ಗ್ಲಾಮರ್ ಅವತಾರದಲ್ಲಿ ಮಿಂಚಿದ್ದಾರೆ. ನಿರ್ದೇಶಕರು ಕೂಡ ಅವರನ್ನು ಹಾಗೆಯೇ ತೋರಿಸಲು ಇಷ್ಟಪಡುತ್ತಾರೆ. ಈಗ ಅವರ ನಟನೆಯ ತಮಿಳು ಸಿನಿಮಾ ‘ಕುಬೇರ’ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನಟಿ ರಶ್ಮಿಕಾ ಅವರು ಈ ಚಿತ್ರದಲ್ಲಿ ಪಕ್ಕಾ ಡಿ ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಿಡಲ್​ ಕ್ಲಾಸ್ ಹುಡುಗಿಯಾಗಿ ಇಷ್ಟ ಆಗುತ್ತಾರೆ. ತೆಲುಗಿನ ನಾಗಾರ್ಜುನ, ತಮಿಳಿನ ಧನುಷ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

‘ಕುಬೇರ’ ಸಿನಿಮಾ ಹೆಸರಿಗೆ ತಕ್ಕಂತೆ ಹಣದ ಬಗ್ಗೆ, ಶ್ರೀಮಂತ ವ್ಯಕ್ತಿ ಬಗ್ಗೆ ಹೇಳುತ್ತಿರೋ ಕಥೆ. ಇದಕ್ಕೆ ಟೀಸರ್​ನಲ್ಲಿ ಹಿಂಟ್ ಸಿಕ್ಕಿದೆ. ನಟ ಧನುಷ್ ಅವರು ಈ ಚಿತ್ರದಲ್ಲಿ ಬೀದಿ ಬದಿ ಆಯ್ದು ತಿನ್ನುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ, ಹೊಲಸು ಬಟ್ಟೆ.. ಟೀಸರ್ ಉದ್ದಕ್ಕೂ ಅವರು ಬಹುತೇಕ ಹೀಗೆಯೇ ಕಾಣಿಸುತ್ತಾರೆ. ಟೀಸರ್​ನಲ್ಲಿ ಕಥೆಯ ಬಗ್ಗೆ ಹಿಂಟ್ ಸಿಕ್ಕಿದೆಯಾದರೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ
Image
‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ
Image
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Image
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಟೀಸರ್ ಹಾಡಿನ ರೂಪದಲ್ಲಿ ಮೂಡಿ ಬಂದಿದೆ. ಅಂದರೆ, ದೃಶ್ಯಗಳನ್ನು ಪೋಣಿಸಲಾಗಿದ್ದು, ಇದಕ್ಕೆ ಹಾಡನ್ನು ಹಾಕಲಾಗಿದೆ. ‘ನಂದು ನಂದು ನಂದೇ ಈ ಲೋಕವಯ್ಯ..’ ಈ ಹಾಡು ಗಮನ ಸೆಳೆದಿದೆ. ಇದರಲ್ಲಿ ಮನುಷ್ಯನಿಗೆ ಹಣದ ಹಪಹಪಿ ಎಷ್ಟಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಸಿನಿಮಾದ ಸಾರಾಂಶ ಇದೇ ಎಂಬುದು ಸ್ಪಷ್ಟವಾಗಿದೆ.

ನಟಿ ರಶ್ಮಿಕಾ ಮಂದಣ್ಣ ಅವರು ಪಕ್ಕಾ ಮಿಡಲ್ ಕ್ಲಾಸ್​ ಹುಡುಗಿಯಾಗಿ ಮಿಂಚಿದ್ದು, ಗ್ಲಾಮರ್ ಅವತಾರ ಮಾಯವಾಗಿದೆ. ಈ ಟೀಸರ್ ಮೂಲಕ ಅವರು ಭಿನ್ನ ಅವತಾರ ತಾಳಿದ್ದಾರೆ. ಈ ಸಿನಿಮಾ ಜೂನ್ 20ರಂದು ತೆರೆಗೆ ಬರಲಿದೆ. ರಶ್ಮಿಕಾ ಅವರ ಪಾತ್ರಕ್ಕೆ ಎಷ್ಟು ತೂಕವಿದೆ ಎಂಬುದು ಸಿನಿಮಾ ನೋಡಿದ ಬಳಿಕವೇ ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಮಾದಕ ನೋಟದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ಫೋಟೋ ನೋಡಿ ಫ್ಯಾನ್ಸ್ ಸುಸ್ತು

ನಾಗಾರ್ಜುನ ಅವರು ಶ್ರೀಮಂತ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಜಿಮ್ ಸರ್ಬ್ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಫಿದಾ’ ರೀತಿಯ ಚಿತ್ರಗಳನ್ನು ನೀಡಿದ ಶೇಖರ್ ಕಮ್ಮುಲಾ ಅವರು ‘ಕುಬೇರ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳಿನ ಸಿನಿಮಾ ಇದಾಗಿದ್ದು, ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.