SaReGaMaPa Finale: ‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ
SaReGaMaPa Finalist Name: ಸರಿಗಮಪ ಸಂಗೀತ ಕಾರ್ಯಕ್ರಮದ ಫೈನಲ್ ಹಂತಕ್ಕೆ ಆರು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಈ ತಿಂಗಳಲ್ಲಿ ‘ಟಿಕೆಟ್ ಟು ಫಿನಾಲೆ’ ನಡೆದಿತ್ತು. ಈ ಪೈಕಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಇಬ್ಬರಿಗೆ ಇಬ್ಬರಿ ಟಿಕೆಟ್ ಸಿಕ್ಕಿತ್ತು. ಕಳೆದ ವಾರ ನಡೆದ ಸೆಮಿ ಫೈನಲ್ನಲ್ಲಿ ನಾಲ್ಕು ಮಂದಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ.

ಹಲವು ತಿಂಗಳ ಕಾಲ ಎಲ್ಲರನ್ನೂ ರಂಜಿಸಿದ ‘ಸರಿಗಮಪ’ ಶೋ (Saregamapa) ಈಗ ಫಿನಾಲೆ ಹಂತ ತಲುಪಿದೆ. ಸ್ಪರ್ಧಿಗಳ ಮಧ್ಯೆ ಒಳ್ಳೆಯ ಕಾಂಪಿಟೇಷನ್ ಇತ್ತು. ಹಲವು ತಿಂಗಳು ನಡೆದ ಈ ಶೋ ಈಗ ಫಿನಾಲೆ ಹಂತಕ್ಕೆ ಬಂದಿದೆ. ಕಳೆದ ವಾರ (ಮೇ 24 ಹಾಗೂ 25) ಅದ್ದೂರಿಯಾಗಿ ಸೆಮಿ ಫೈನಲ್ ನಡೆದಿದೆ. ಈ ಪೈಕಿ ಆರು ಮಂದಿ ಫೈನಲ್ಗೆ ಆಯ್ಕೆ ಆಗಿದ್ದಾರೆ. ಇವರ ಪೈಕಿ ಫಿನಾಲೆಯಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ವೀಕ್ಷಕರಿಗೆ ಮೂಡಿದೆ. ಇನ್ನೂ ಕೆಲವರು ತಮ್ಮ ನೆಚ್ಚಿನ ಸ್ಪರ್ಧಿಗಳು ಫಿನಾಲೆಗೆ ಆಯ್ಕೆ ಆಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಈ ಬಾರಿ ತೀರ್ಪುಗಾರರ ಸ್ಥಾನದಲ್ಲಿ ಮೂವರು ಜಡ್ಜ್ಗಳು ಇದ್ದರು. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್. ಇವರಲ್ಲದೆ, ಜ್ಯೂರಿ ಸ್ಥಾನದಲ್ಲಿ ಸಂಗೀತ ಕ್ಷೇತ್ರದ ನಿಪುಣರು ಇದ್ದರು. ಇವರೆಲ್ಲರ ಮಾರ್ಗದರ್ಶನದಲ್ಲಿ ಅನೇಕ ಸ್ಪರ್ಧಿಗಳು ವೇದಿಕೆ ಏರಿದ್ದರು. ಈ ಪೈಕಿ ಆರು ಮಂದಿಗೆ ಫೈನಲ್ಗೆ ಏರುವ ಭಾಗ್ಯ ಸಿಕ್ಕಿದೆ. ಈ ತಿಂಗಳಲ್ಲಿ ‘ಟಿಕೆಟ್ ಟು ಫಿನಾಲೆ’ ನಡೆದಿತ್ತು. ಈ ಪೈಕಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ಬಾಳು ಬೆಳಗುಂದಿ, ದ್ಯಾಮೇಶ, ಲಹರಿ, ಭೂಮಿಕಾ, ಮನೋಜ್, ರಶ್ಮಿ ಡಿ, ಕಾರ್ತಿಕ್, ಅಮೋಘ ವರ್ಷ, ಸುಧೀಕ್ಷಾ, ಆಗಮ ಶಾಸ್ತ್ರೀ, ದೀಪಕ್, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ವೇಳೆ ಆರಾಧ್ಯಾ ಹಾಗೂ ಶಿವಾನಿ ಅವರಿಗೆ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು.
ಜೀಕನ್ನಡ ಹಂಚಿಕೊಂಡ ಫಿನಾಲೆ ಸ್ಪರ್ಧಿಗಳು
View this post on Instagram
s
ಮೇ 24 ಹಾಗೂ 25ರಂದು ನಡೆದ ಸೆಮಿ ಫೈನಲ್ನಲ್ಲಿ ರಶ್ಮಿ, ಬಾಳು ಬೆಳಗುಂದಿ, ದ್ಯಾಮೇಶ್ ಹಾಗೂ ಅಮೋಘ ವರ್ಷಗೆ ಫಿನಾಲೆಗೆ ಏರುವ ಅವಕಾಶ ಸಿಕ್ಕಿದೆ. ಈ ಮೂಲಕ ಫಿನಾಲೆಯಲ್ಲಿ ಶಿವಾನಿ, ರಶ್ಮಿ ಡಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಇದ್ದಾರೆ.
ಇದನ್ನೂ ಓದಿ: ‘ಸರಿಗಮಪ’ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಇನ್ನು ವೀಕ್ಷಕರಿಗೆ ನೆಚ್ಚಿನ ಶೋನಲ್ಲಿ ನೆಚ್ಚಿನ ಸ್ಪರ್ಧಿ ಇರುತ್ತಾರೆ. ಅವರು ಆಯ್ಕೆ ಆಗಿಲ್ಲ ಎಂದಾಗ ಬೇಸರ ಆಗೋದು ಸಾಮಾನ್ಯ. ಈ ರೀತಿ ಈ ಮೊದಲು ಕೂಡ ಆಗಿತ್ತು. ಅದೇ ರೀತಿ ಲಹರಿ ಉತ್ತಮವಾಗಿ ಹಾಡಿದ್ದು, ಅವರಿಗೆ ಟಿಕೆಟ್ ಸಿಗಬೇಕು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:07 am, Mon, 26 May 25








