- Kannada News Photo gallery Rashmika Mandanna Poses In Vijay Devarakonda Home She looks pretty And traditional
ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿ ಫೋಟೋಶೂಟ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ಪ್ರೀತಿ ಇದೆ ಎಂಬುದು ಬಹುತೇಕ ಖಚಿತವಾಗಿದೆ. ಇದಕ್ಕೆ ಸಾಕ್ಷಿಗಳು ಸಿಗುತ್ತಲೇ ಇರುತ್ತವೆ. ಈಗ ರಶ್ಮಿಕಾ ಮಂದಣ್ಣ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋನ ವಿಜಯ್ ದೇವರಕೊಂಡ ಅವರೇ ತೆಗೆದಿದ್ದು ಎಂದು ಹೇಳಲಾಗುತ್ತಿದೆ.
Updated on: May 29, 2025 | 9:53 AM

ರಶ್ಮಿಕಾ ಮಂದಣ್ಣ ಅವರಿಗೆ ಫೋಟೋಶೂಟ್ ಮಾಡಿಸೋದು ಎಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಅವರು ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾರೆ. ಈಗ ಅವರ ಹೊಸ ಫೋಟೋಶೂಟ್ ಸಾಕಷ್ಟು ಗಮನ ಸೆಳೆದಿದೆ. ಇದಕ್ಕೆ ಕಾರಣ ಆಗಿದ್ದು, ವಿಜಯ್ ದೇವರಕೊಂಡ.

ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಮನೆ ಹೊಂದಿದ್ದಾರೆ. ಸಿನಿಮಾ ಕೆಲಸಗಳ ಕಾರಣಕ್ಕೆ ಈ ನಗರಗಳಿಗೆ ಅವರು ತೆರಳಬೇಕಾಗುತ್ತದೆ. ಹೀಗಾಗಿ, ಅವರು ಇಲ್ಲಿ ನಿವಾಸಗಳನ್ನು ಖರೀದಿ ಮಾಡಿದ್ದಾರೆ. ಆದರೆ, ಹೈದರಾಬಾದ್ನಲ್ಲಿ ಅವರು ಎರಡು ಮನೆ ಇದೆ ಎನ್ನಬಹುದು!

ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ಗೆ ತೆರಳಿದಾಗ ವಿಜಯ್ ದೇವರಕೊಂಡ ಮನೆಗೆ ಹೆಚ್ಚು ಭೇಟಿ ನೀಡುತ್ತಾರೆ. ಈಗ ಅವರು ಲಕ್ಷಣವಾಗಿ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿದ್ದು, ಇದು ವಿಜಯ್ ದೇವರಕೊಂಡ ಮನೆ ಎನ್ನಲಾಗುತ್ತಿದೆ.

ಈ ಮೊದಲು ‘ಗೀತ ಗೋಂವಿಂದಂ’ ಚಿತ್ರಕ್ಕೆ ಐದು ವರ್ಷ ಆದಾಗ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ಚಿತ್ರದ ನಿರ್ದೇಶಕ ಪರಶುರಾಮ್ ಪೆಟ್ಲಾ ಫೋಟೋಗೆ ಪೋಸ್ ಕೊಟ್ಟಿದ್ದರು. ಅದು ವಿಜಯ್ ದೇವರಕೊಂಡ ನಿವಾಸ ಆಗಿತ್ತು.

ಈಗ ಅದೇ ಜಾಗದಲ್ಲಿ ರಶ್ಮಿಕಾ ಮಂದಣ್ಣ ಅವರು ಪೋಸ್ ಕೊಟ್ಟಿದ್ದಾರೆ. ಹೀಗಾಗಿ, ಅನೇಕರು ಇದು ವಿಜಯ್ ದೇವರಕೊಂಡ ಮನೆ ಎಂದು ಹೇಳಿದ್ದಾರೆ. ಈ ಫೋಟೋಗಳನ್ನು ತೆಗೆದಿದ್ದು ವಿಜಯ್ ದೇವರಕೊಂಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.




