- Kannada News Photo gallery Sreeleela's Tulabhar Ceremony: her throwback Birthday Celebrations photos goes viral
Sreeleela Birthday: ತುಲಾಭಾರ ಮಾಡಿಸಿದ ನಟಿ ಶ್ರೀಲೀಲಾ; ಕಾರಣ ಏನು?
Sreeleela Birthday : ಶ್ರೀಲೀಲಾ ಅವರು ಇತ್ತೀಚೆಗೆ ತಮ್ಮ ತುಲಾಭಾರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಜನ್ಮದಿನದ ಆಚರಣೆಯ ಭಾಗವಾಗಿದೆ. ಬಾಲಿವುಡ್‌ನಿಂದ ಅವರಿಗೆ ಉತ್ತಮ ಅವಕಾಶಗಳು ಬರುತ್ತಿವೆ. 'ಜೂನಿಯರ್' ಮತ್ತು 'ಆಶಿಕಿ 3' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
Updated on:Jun 02, 2025 | 9:40 AM

ನಟಿ ಶ್ರೀಲೀಲಾ ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿ ಇದ್ದಾರೆ. ಬಾಲಿವುಡ್ನಿಂದಲೂ ಅವರಿಗೆ ಭರ್ಜರಿ ಆಫರ್ಗಳು ಬರುತ್ತಿವೆ. ಹೀಗಿರುವಾಗಲೇ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ಗಮನ ಸೆಳೆದಿವೆ. ಅವರು ತುಲಾಭಾರ ಮಾಡಿಸಿದ್ದಾರೆ.

ಶ್ರೀಲೀಲಾಗೆ ಜೂನ್ 14 ಜನ್ಮದಿನ. ಇದಕ್ಕೆ ಕೌಂಟ್ಡೌನ್ ಶುರುವಾಗಿದೆ. ಅಂದರೆ ಸಂಪೂರ್ಣ ಜೂನ್ ಅವರ ಬರ್ತ್ಡೇ ಸಂಭ್ರಮದಲ್ಲಿ ಕಳೆಯಲಿದೆ. ಈ ಮೊದಲು ಜನ್ಮದಿನವನ್ನು ಯಾವ ರೀತಿಯಲ್ಲಿ ಆಚರಿಸಲಾಗುತ್ತಿತ್ತು ಎಂಬುದಕ್ಕೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಲೀಲಾ ಮನೆಯಲ್ಲಿ ಈ ಮೊದಲು ಬರ್ತ್ಡೇಗೆ ತುಲಾಭಾರ ಮಾಡಿಸಲಾಗಿತ್ತು. ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ತುಲಾಭಾರದ ಐಡಿಯಾ ಅವರ ತಾಯಿಯದ್ದಾಗಿತ್ತಂತೆ. ಈ ಫೋಟೋಗಳು ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ.

ತುಲಾಭಾರ ಎಂಬುದು ಒಂದು ಪ್ರಾಚೀನ ಭಾರತೀಯ ಸಂಪ್ರದಾಯ. ಇದರಲ್ಲಿ ಒಬ್ಬ ವ್ಯಕ್ತಿಯನ್ನು ತಕ್ಕಡಿಯ ಒಂದು ಭಾಗದಲ್ಲಿ ಇಡಲಾಗುತ್ತದೆ. ಮತ್ತೊಂದು ಭಾಗದಲ್ಲಿ ಅವರಿಷ್ಟದ ವಸ್ತು (ತೆಂಗು, ಹಣ್ಣು, ಧಾನ್ಯ ಅಥವಾ ಇತರ ವಸ್ತು) ಇಡಲಾಗುತ್ತದೆ. ವ್ಯಕ್ತಿಯ ತೂಕಕ್ಕೆ ಸಮನಾದ ಆ ದ್ರವ್ಯವನ್ನು ಕಾಣಿಕೆಯಾಗಿ ನೀಡಲಾಗುತ್ತದೆ.

ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕಿರೀಟಿ ನಟನೆಯ ‘ಜೂನಿಯರ್’ ಚಿತ್ರಕ್ಕೆ ಅವರೇ ನಾಯಕಿ. ಶೀಘ್ರವೇ ಈ ಚಿತ್ರ ಬಿಡುಗಡೆ ಕಾಣಲಿದೆ. ‘ಆಶಿಕಿ 3’ ಚಿತ್ರಕ್ಕೂ ಅವರು ಹೀರೋಯಿನ್. ಇದಲ್ಲದೆ, ಇನ್ನೂ ಕೆಲವು ಸಿನಿಮಾಗಳು ಅವರ ಬಳಿ ಇವೆ.
Published On - 8:45 am, Mon, 2 June 25




