AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse: ಇಂದು ಕೇತುಗ್ರಸ್ತ ಚಂದ್ರಗ್ರಹಣ; ಗ್ರಹಣ ಪ್ರಾರಂಭದ ನಿಖರ ಸಮಯ ಹಾಗೂ ವಿಧಿವಿಧಾನಗಳ ಮಾಹಿತಿ ಇಲ್ಲಿದೆ

ಸನಾತನ ಸಂಸ್ಕೃತಿಯಲ್ಲಿ ಗ್ರಹಣಕ್ಕೆ ಮಹತ್ವವಿದೆ. ಗ್ರಸ್ತೋದಯ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸಲಿದ್ದು, ಸೂತಕ ನಿಯಮಗಳು ಅನ್ವಯಿಸುತ್ತವೆ. ಇದರ ಸ್ಪರ್ಶ, ಮಧ್ಯಮ, ಮತ್ತು ಮೋಕ್ಷ ಕಾಲಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಗ್ರಹಣ ಕಾಲದಲ್ಲಿ ದೇವಾಲಯಗಳ ಮುಚ್ಚುವಿಕೆ, ಆಹಾರ ಸೇವನೆ, ಸ್ನಾನ, ಮಂತ್ರ ಜಪಗಳಂತಹ ಆಚರಣೆಗಳನ್ನು ಪಾಲಿಸಬೇಕು. ವಿಶೇಷವಾಗಿ, ಗ್ರಹಣ ದೋಷ ನಿವಾರಣೆಗೆ ಇರುವ ಪರಿಹಾರ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

Lunar Eclipse: ಇಂದು ಕೇತುಗ್ರಸ್ತ ಚಂದ್ರಗ್ರಹಣ; ಗ್ರಹಣ ಪ್ರಾರಂಭದ ನಿಖರ ಸಮಯ ಹಾಗೂ ವಿಧಿವಿಧಾನಗಳ ಮಾಹಿತಿ ಇಲ್ಲಿದೆ
ಕೇತುಗ್ರಸ್ತ ಚಂದ್ರಗ್ರಹಣ
ಅಕ್ಷತಾ ವರ್ಕಾಡಿ
|

Updated on:Mar 03, 2026 | 10:01 AM

Share

ನಮ್ಮ ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇಂದು (ಮಾ.03) ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುತ್ತದೆ. ಗ್ರಸ್ತೋದಯ ಎಂದರೆ ಸೂರ್ಯ ಅಸ್ತಮಿಸುವಾಗ ಮತ್ತು ಚಂದ್ರ ಉದಯಿಸುವಾಗ ಗ್ರಹಣ ಸಂಭವಿಸುವುದು. ಈ ಗ್ರಹಣದ ವಿಶೇಷಗಳು, ಆಚರಣೆಗಳು, ವಿಧಿವಿಧಾನಗಳು ಮತ್ತು ರಾಶಿಗಳ ಮೇಲಿನ ಪ್ರಭಾವಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿರುವ ಮಾಹಿತಿ ಇಲ್ಲಿದೆ.

ಈ ಚಂದ್ರಗ್ರಹಣವು ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ಸಂಭವಿಸುತ್ತಿದೆ. ಹುಣ್ಣಿಮೆಯು ನೆನ್ನೆ ಸಂಜೆ 5 ಗಂಟೆ 55 ನಿಮಿಷಕ್ಕೆ ಪ್ರಾರಂಭವಾಗಿ, ಇಂದು ಸಂಜೆ 4 ಗಂಟೆ 24 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಸೂತಕ ಮತ್ತು ಆಚಾರ-ವಿಚಾರಗಳು ಅನ್ವಯಿಸುತ್ತವೆ.

ಗ್ರಹಣದ ಪ್ರಮುಖ ಸಮಯಗಳು:

  • ಸ್ಪರ್ಶ ಕಾಲ: ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ. ಈ ಗ್ರಹಣವು ಭರಣಿ ನಕ್ಷತ್ರದ ಎರಡನೆಯ ಪಾದದಲ್ಲಿ ಸಂಭವಿಸುತ್ತದೆ. ಆದರೆ ಭಾರತದಲ್ಲಿ ಗ್ರಹಣ ಸ್ಪರ್ಶ ಕಾಲದಲ್ಲಿ ಚಂದ್ರ ಗೋಚರ ಇರುವುದಿಲ್ಲ.
  • ಮಧ್ಯಮ ಕಾಲ: ಸಂಜೆ 4 ಗಂಟೆ 29 ನಿಮಿಷ
  • ಮೋಕ್ಷ ಕಾಲ: ಸಂಜೆ 6 ಗಂಟೆ 19 ನಿಮಿಷಕ್ಕೆ

ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ವಿಧಿವಿಧಾನಗಳು:

ಗ್ರಹಣದ ಅವಧಿಯಲ್ಲಿ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಅನಗತ್ಯ ಪ್ರಯಾಣ ಮಾಡುವುದು ಅಷ್ಟು ಶುಭಕರವಲ್ಲ. ಗ್ರಹಣ ಪ್ರಾರಂಭವಾಗುವ ಮೊದಲೇ ಆಹಾರ ಸೇವಿಸಬೇಕು. ಕೆಲವರು ಗ್ರಹಣಕ್ಕೂ ಮೊದಲು ಸ್ನಾನ ಮಾಡುತ್ತಾರೆ, ಆದರೆ ಗ್ರಹಣ ನಂತರ ಎಲ್ಲರೂ ಕಡ್ಡಾಯವಾಗಿ ಸ್ನಾನ ಮಾಡಬೇಕು. ಗ್ರಹಣದ ಮೊದಲು ದರ್ಬೆ ಮತ್ತು ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳ ಮೇಲೆ ಇಡುವುದು ಸಾಂಪ್ರದಾಯಿಕ ಪದ್ಧತಿ. ವೃದ್ಧರು, ಅಶಕ್ತರು, ರೋಗಿಗಳು, ಪುಟ್ಟ ಮಕ್ಕಳು ಮತ್ತು ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಸಂಚಾರ ಮಾಡದಿರುವುದು ಒಳ್ಳೆಯದು. ಗ್ರಹಣ ಕಾಲದಲ್ಲಿ ಮಂತ್ರ-ಜಪಗಳನ್ನು ಮಾಡುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಗ್ರಹಣದ ದೋಷ ನಿವಾರಣೆಗೆ ವಿಶೇಷ ಪದ್ಧತಿ:

ಗ್ರಹಣ ಸ್ಪರ್ಶ ಕಾಲದಲ್ಲಿ ಬಾಳೆ ಎಲೆ ಅಥವಾ ವೀಳ್ಯದೆಲೆಯ ಮೇಲೆ ಒಂದು ಚಮಚ ಮೊಸರನ್ನ ಅಥವಾ ಹಾಲು ಮಿಶ್ರಿತ ಅನ್ನವನ್ನು ಇಟ್ಟು, ಮನೆಯ ಮುಂಬಾಗಿಲಿನ ಮುಂದೆ ನೆಲವನ್ನು ಶುದ್ಧಿ ಮಾಡಿ, ಆ ಎಲೆಯನ್ನು ಅಲ್ಲಿ ಇರಿಸಿ, ಅದರ ಮೇಲೆ ಒಂದು ಮುಚ್ಚಳವನ್ನು ಮುಚ್ಚಿ ಬಾಗಿಲನ್ನು ಮುಚ್ಚಿದರೆ, ಆ ಮನೆಗೆ ಗ್ರಹಣದ ಯಾವುದೇ ಕಂಟಕಗಳು ಅಥವಾ ದೋಷಗಳು ಬರುವುದಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 am, Tue, 3 March 26

Follow Us
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ