AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಸಚಿವರ ಕ್ಷೇತ್ರದಲ್ಲೇ ಶೌಚಾಲಯ, ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!

ಸಾರಿಗೆ ಸಚಿವರ ಕ್ಷೇತ್ರದಲ್ಲೇ ಶೌಚಾಲಯ, ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!

ಪ್ರಸನ್ನ ಹೆಗಡೆ
|

Updated on: Jul 24, 2026 | 2:02 PM

Share

ಆರ್.ಟಿ. ನಗರದ ದೇವಗೌಡ ರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ಸಂಪೂರ್ಣ ಅಧ್ವಾನದ ಹಾದಿ ಹಿಡಿದಿದೆ. ಇದು ಹೆಸರಿಗೆ ಮಾತ್ರ ಬಸ್ ನಿಲ್ದಾಣವಾಗಿದ್ದು, ವಾಸ್ತವದಲ್ಲಿ ಶೌಚಾಲಯ, ಗೋದಾಮು, ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಮುರಿದ ಆಸನಗಳು, ಛಾವಣಿ ಹಾಗೂ ಸ್ವಚ್ಛತೆಯ ಕೊರತೆಯಿಂದ ಪ್ರಯಾಣಿಕರು ಇದನ್ನು ಬಳಸಲು ಭಯಪಡುತ್ತಿದ್ದಾರೆ. ಸಾರಿಗೆ ಸಚಿವರ ಕ್ಷೇತ್ರದಲ್ಲೇ ಈ ದುಸ್ಥಿತಿ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, ಜುಲೈ 24: ಆರ್.ಟಿ. ನಗರದ ದೇವಗೌಡ ರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಗೆ ಸೇವೆ ನೀಡುವ ಬದಲು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಬಸ್​​ ಸ್ಟ್ಯಾಂಡ್​​​ ಶೌಚಾಲಯ, ಗೋದಾಮಾಗಿ ಮಾರ್ಪಟ್ಟಿದ್ದು, ರಾತ್ರಿ ಕುಡುಕರ ಅಡ್ಡೆಯಾಗಿದೆ. ನಿರ್ವಹಣೆ ಇಲ್ಲದ ಕಾರಣ ನಿಲ್ದಾಣದ ಆಸನಗಳು, ಚಾವಣಿಗಳು ಸಂಪೂರ್ಣವಾಗಿ ಮುರಿದು ಬಿದ್ದಿವೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದ್ದು, ದುರದೃಷ್ಟವಶಾತ್ ಈ ಬಸ್ ನಿಲ್ದಾಣ ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇದ್ದರೂ ಇದರ ದುಸ್ಥಿತಿ ಅವರ ಗಮನಕ್ಕೆ ಬಂದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us