ಖ್ಯಾತ ನಟಿಗೆ ಎರಡು ಮದುವೆ ಮತ್ತು ಸಂಸಾರದ ದುರಂತ ಅಂತ್ಯ, ಈಗ ಲಿವ್-ಇನ್ ರಿಲೇಶನ್ಶಿಪ್
ಪ್ರಸಿದ್ಧ ಮಲಯಾಳಂ ನಟಿ ಅಂಜು ಅರವಿಂದ್ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ಎರಡು ವಿಫಲ ಮದುವೆಗಳ ನಂತರ, ಅವರು ಐದು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿ ಸಂತೋಷದಿಂದ ಇದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ನೃತ್ಯ ಅಕಾಡೆಮಿಯನ್ನು ನಡೆಸುತ್ತಿರುವ ಅವರು, ತಮ್ಮ ಸಂಗಾತಿ ಸಂಜಯ್ ಅಂಬಾಲ ಪರಂಬತ್ ಜೊತೆಗಿನ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ.

ದಕ್ಷಿಣದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಇವರು, ಮೋಹನ್ಲಾಲ್ (Mohanlal), ಮಮ್ಮೂಟ್ಟಿ, ರಜನಿಕಾಂತ್ ಜೊತೆ ತೆರೆ ಹಂಚಿಕೊಂಡರು. ಅವರೇ ಅಂಜು ಅರವಿಂದ್. ಅವರು ಮಲಯಾಳಂ ನಟಿ. ಸದ್ಯ ಬೆಂಗಳೂರಿನಲ್ಲಿ ಇದ್ದಾರೆ. ಅವರು ಡ್ಯಾನ್ಸರ್ ಕೂಡ ಹೌದು. ಅಂಜು ಅವರು ಇತ್ತೀಚೆಗೆ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರು. ಅವರ ವೈಯಕ್ತಿಕ ಜೀವನದ ವಿಚಾರಗಳನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ.
ಅಂಜು ಅವರು ಎರಡು ಬಾರಿ ಮದುವೆ ಆದರು. ಆದರೆ, ಎರಡೂ ಮದುವೆ ದುರಂತ ಅಂತ್ಯ ಕಂಡಿತು. ಮೊದಲ ಪತಿ ವಿಚ್ಛೇದನ ಪಡೆದರೆ ಎರಡನೇ ಪತಿ ನಿಧನ ಹೊಂದಿದರು. ಈಗ ಅವರು ಕಳೆದ ಐದು ವರ್ಷಗಳಿಂದ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ಇದ್ದಾರೆ ಮತ್ತು ಈಗ ಅವರು ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.
‘ನನ್ನ ಮೊದಲ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತು. ನನಗೆ ಎರಡನೇ ಮದುವೆಯಾಯಿತು, ಆದರೆ ನನ್ನ ಪತಿ ತೀರಿಕೊಂಡರು. ನಾನು ಪ್ರಸ್ತುತ ಲಿವ್-ಇನ್ ಸಂಬಂಧದಲ್ಲಿದ್ದೇನೆ. ನನ್ನ ಸಂಗಾತಿಯ ಹೆಸರು ಸಂಜಯ್ ಅಂಬಾಲ ಪರಂಬತ್. ಕಳೆದ ಐದು ವರ್ಷಗಳಿಂದ ನಾವು ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನೃತ್ಯ ಶಿಕ್ಷಕಿಯಾಗಿ ನನಗೆ ಸ್ಥಾನ ನೀಡಿದರು. ನಾನು 8 ನೇ ತರಗತಿಯಲ್ಲಿದ್ದಾಗ ಸಂಜಯ್ ನನ್ನ ಮೊದಲ ಕ್ರಶ್ ಆಗಿದ್ದರು. ನಮ್ಮ ಕಥೆಯನ್ನು ಚಲನಚಿತ್ರವಾಗಿ ಮಾಡಬಹುದು’ ಎಂದು ಹೇಳಿಕೊಂಡರು.
ಇದನ್ನೂ ಓದಿ: ಮಗನಿಗಾಗಿ ಒಂದಾದ ಧನುಷ್, ಐಶ್ವರ್ಯಾ ರಜನಿಕಾಂತ್; ಫೋಟೋ ವೈರಲ್
‘ನಾವಿಬ್ಬರೂ ಒಟ್ಟಿಗೆ ನೋಡಿದ 96 ಸಿನಿಮಾ (ಸಿ ಪ್ರೇಮ್ ಕುಮಾರ್ ನಿರ್ದೇಶನದ ಮತ್ತು ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ನಟನೆಯ ಚಿತ್ರ) ತುಂಬಾ ಇಷ್ಟವಾಯಿತು. ಆ ಸಿನಿಮಾ ನೋಡಿದಾಗ ನನ್ನ ಶಾಲಾ ದಿನಗಳು ನೆನಪಾದವು. ಸಂಜಯ್ ಕೂಡ ಒಬ್ಬ ಡ್ಯಾನ್ಸರ್. ಅವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈಗ ನಿವೃತ್ತರಾಗಿದ್ದಾರೆ. ನಾವು ಮೊದಲು ಭೇಟಿಯಾದದ್ದು ನೃತ್ಯ ತರಗತಿಯಲ್ಲಿ. ಆಗ ಮೊಬೈಲ್ ಫೋನ್‌ಗಳು ಇರಲಿಲ್ಲ. ಹೀಗಾಗಿ, ನಾವು ಬೇರೆ ಬೇರೆಯಾದೆವು. ಆದರೆ ಕೊನೆಗೆ ನಾವು ಪರಸ್ಪರ ದಾರಿ ಕಂಡುಕೊಂಡೆವು. ಬೆಂಗಳೂರಿನಲ್ಲಿರುವ ನನ್ನ ನೃತ್ಯ ಅಕಾಡೆಮಿಗೆ ಅವರೇ ಹೆಸರಿಟ್ಟರು. ಇದನ್ನು ಅಂಜು ಅರವಿಂದ್ ಅಕಾಡೆಮಿ ಆಫ್ ಡ್ಯಾನ್ಸ್ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ ಅವರು. ಈ ನಟಿ ಕನ್ನಡದಲ್ಲೂ ಕೆಲ ಸಿನಿಮಾ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







