ಅಖಿಲ್ ಅಕ್ಕಿನೇನಿಗೆ ಇದು ಎರಡನೇ ಮದುವೆ? ಇಲ್ಲಿದೆ ಅಸಲಿ ವಿಚಾರ
ಅಖಿಲ್ ಅಕ್ಕಿನೇನಿ ಅವರು ಝೈನಾಬ್ ರಾವ್ಜಿ ಅವರನ್ನು ವಿವಾಹವಾದರು. ನಾಗಾರ್ಜುನ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಖಿಲ್‌ರ ಹಿಂದಿನ ಶ್ರಿಯಾ ಭೂಪಾಲ್ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಈ ಮದುವೆಯಾಗಿದೆ. ಝೈನಾಬ್ ಒಬ್ಬ ಕಲಾವಿದೆ ಮತ್ತು ಉದ್ಯಮಿಯ ಪುತ್ರಿ.

ನಾಗಾರ್ಜುನ (Nagarjuna) ಮತ್ತು ಅಮಲಾ ಅಕ್ಕಿನೇನಿ ಅವರ ಪುತ್ರ ಅಖಿಲ್ ಅಕ್ಕಿನೇನಿ ಇತ್ತೀಚೆಗೆ ವಿವಾಹವಾದರು. ಅವರು ತಮ್ಮ ಗೆಳತಿ ಝೈನಾಬ್ ರಾವ್ಜಿ ಅವರನ್ನು ವಿವಾಹವಾದರು ಮತ್ತು ನಾಗಾರ್ಜುನ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಖಿಲ್ ಹಾಗೂ ಝೈನಾಬ್ ಹಲವು ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಇದಕ್ಕೂ ಮೊದಲು ಅಖಿಲ್ಗೆ ಒಂದು ನಿಶ್ಚಿತಾರ್ಥ ಆಗಿತ್ತು ಮತ್ತು ಅದು ಮುರಿದು ಬಿತ್ತು. ಆ ಬಗ್ಗೆ ಇಲ್ಲಿದೆ ವಿವರ.
‘ನಮ್ಮ ಮಗ ಝೈನಾಬ್ ರಾವ್ಜಿ ಅವರನ್ನು ವಿವಾಹವಾದರು ಎಂದು ಘೋಷಿಸಲು ನಮಗೆ ಮತ್ತು ನನಗೆ ತುಂಬಾ ಸಂತೋಷವಾಗಿದೆ. ವಿವಾಹ ಸಮಾರಂಭವು ಬೆಳಗಿನ ಜಾವ 3.35 ಕ್ಕೆ ನಡೆಯಿತು. ವಿವಾಹದ ವಿಧಿವಿಧಾನಗಳನ್ನು ನಮ್ಮ ಸ್ವಂತ ಮನೆಯಲ್ಲಿಯೇ ನಡೆಸಲಾಯಿತು’ ಎಂದು ನಾಗಾರ್ಜುನ ಬರೆದಿದ್ದಾರೆ.
‘ಪ್ರೀತಿ, ನಗು ಮತ್ತು ನಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ಈ ಸುಂದರ ಕನಸು ನನಸಾಗುವುದನ್ನು ನಾವು ನೋಡಿದ್ದೇವೆ’ ಎಂದು ಅವರು ಹೇಳಿದರು. ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಎರಡನೇ ಪತ್ನಿ ಅಮಲಾ ಅಕ್ಕಿನೇನಿ ಅವರ ಮಗ ಅಖಿಲ್. ನಾಗ್ ಚೈತನ್ಯ ಅವರ ಮಲಸಹೋದರ.
ಅಖಿಲ್ ಈ ಹಿಂದೆ 2016ರಲ್ಲಿ ಶ್ರಿಯಾ ಭೂಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ 2017 ರಲ್ಲಿ ಮದುವೆಯಾಗಬೇಕಿತ್ತು. ಆದರೆ, ಮದುವೆಗೆ ಮುನ್ನವೇ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಹೀಗಾಗಿ, ಅವರು ವಿವಾಹ ಆಗಲಿಲ್ಲ. ಅವರು ಸುಮಾರು 9 ವರ್ಷಗಳ ಬಳಿಕ ಈಗ ಬೇರೆ ಹುಡುಗಿ ಜೊತೆ ಮದುವೆ ಆದರು.
ಝೈನಾಬ್ ಕೈಗಾರಿಕೋದ್ಯಮಿ ಜುಲ್ಫಿ ರಾವದ್ಜಿಯವರ ಪುತ್ರಿ. ಜುಲ್ಫಿ ನಿರ್ಮಾಣ ವ್ಯವಹಾರದಲ್ಲಿ ದೊಡ್ಡ ಹೆಸರು. ಝೈನಾಬ್ ಸ್ವತಃ ಒಬ್ಬ ಕಲಾವಿದೆ ಮತ್ತು ಭಾರತ, ದುಬೈ ಮತ್ತು ಲಂಡನ್ – ಈ ಮೂರು ದೇಶಗಳಲ್ಲಿ ವಾಸಿಸಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್’ ಸಿನಿಮಾಗೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದು ಯಾಕೆ? ಕಾರಣ ತಿಳಿಸಿದ ನಾಗಾರ್ಜುನ
ಇನ್ನು ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ನಾಗಾರ್ಜುನ ಹಾಗೂ ನಾಗ ಚೈತನ್ಯ ಕೂಡ ಎರಡನೇ ಮದುವೆ ಆಗಿದ್ದಾರೆ. ನಾಗಾರ್ಜುನ ಅವರು ಲಕ್ಷ್ಮೀ ದಗ್ಗುಬಾಟಿಯನ್ನು ವಿವಾಹ ಆದರು. ಈ ಮದುವೆ 1984ರಲ್ಲಿ ನಡೆಯಿತು ಮತ್ತು 90ರಲ್ಲಿ ಇವರು ದೂರ ಆದರು. 1992ರಲ್ಲಿ ಅಮಲಾ ಜೊತೆ ಮದುವೆ ನಡೆಯಿತು. ಇನ್ನು ನಾಗ ಚೈತನ್ಯ ಅವರು ಈ ಮೊದಲು ಸಮಂತಾ ಅವರನ್ನು ವಿವಾಹ ಆದರು. ಆ ಬಳಿಕ ದೂರ ಆದರು. ಆ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆ ಮದುವೆ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







