AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್’ ಸಿನಿಮಾಗೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದು ಯಾಕೆ? ಕಾರಣ ತಿಳಿಸಿದ ನಾಗಾರ್ಜುನ

ಬಾಲಿವುಡ್ ಸಿನಿಮಾಗಳಿಗಿಂತಲೂ ದಕ್ಷಿಣ ಭಾರತದ ಸಿನಿಮಾಗಳನ್ನು ಉತ್ತರ ಭಾರತದ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ‘ಕೆಜಿಎಫ್’, ‘ಕೆಜಿಎಫ್: ಚಾಪ್ಟರ್ 2’, ‘ಪುಷ್ಪ’, ‘ಪುಷ್ಪ 2’, ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳೇ ಈ ಮಾತಿಗೆ ಬೆಸ್ಟ್ ಉದಾಹರಣೆ. ಈ ಬಗ್ಗೆ ನಾಗಾರ್ಜುನ ಅವರು ‘ವೇವ್ಸ್ ಸಮಿಟ್​’ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಕೆಜಿಎಫ್’ ಸಿನಿಮಾಗೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದು ಯಾಕೆ? ಕಾರಣ ತಿಳಿಸಿದ ನಾಗಾರ್ಜುನ
Kgf Chapter 2
ಮದನ್​ ಕುಮಾರ್​
|

Updated on: May 02, 2025 | 7:21 PM

Share

ಮೇ 1ರಿಂದ ಮೇ 4ರ ತನಕ ಮುಂಬೈನಲ್ಲಿ ವರ್ಲ್ಡ್​ ಆಡಿಯೋ ವಿಶ್ಯುವಲ್ ಎಂಟರ್​ಟೇನ್ಮೆಂಟ್​ ಸಮಿಟ್ (Waves Summit) ನಡೆಯುತ್ತಿದೆ. ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಮನರಂಜನಾ ಜಗತ್ತಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಈ ಶೃಂಗಸಭೆಯಲ್ಲಿ ಚರ್ಚೆ ಆಗುತ್ತಿದೆ. ಟಾಲಿವುಡ್ ನಟ ನಾಗಾರ್ಜುನ (Nagarjuna) ಅವರು ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಯಶಸ್ಸು ಕಂಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಅದಕ್ಕೆ ‘ಕೆಜಿಎಫ್’ (KGF), ‘ಪುಷ್ಪ’, ‘ಬಾಹುಬಲಿ’ ಸಿನಿಮಾಗಳನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ.

ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದರು. ಹಿಂದಿ ಮಾರುಕಟ್ಟೆಯಲ್ಲಿ ‘ಕೆಜಿಎಫ್ 2’ ಸಿನಿಮಾ 435.33 ಕೋಟಿ ರೂಪಾಯಿ ಗಳಿಸಿತು. ಯಶ್ ಅವರಿಗೆ ಸಖತ್ ಜನಪ್ರಿಯತೆ ತಂದುಕೊಟ್ಟಿತು. ಈ ರೀತಿಯ ಸೌತ್ ಸಿನಿಮಾಗಳ ಯಶಸ್ಸಿನ ಬಗ್ಗೆ ನಾಗಾರ್ಜುನ ಅವರು ವರ್ಲ್ಡ್​ ಆಡಿಯೋ ವಿಶ್ಯುವಲ್ ಎಂಟರ್​ಟೇನ್ಮೆಂಟ್​ ಸಮಿಟ್​ನಲ್ಲಿ ಮಾತನಾಡಿದರು.

‘ಪುಷ್ಪ ಸಿನಿಮಾ ತೆಲುಗಿಗಿಂತಲೂ ಹೆಚ್ಚಾಗಿ ಉತ್ತರ ಭಾರತದಲ್ಲಿ ಹೆಚ್ಚು ಹಣ ಗಳಿಸಿತು. ಅದಕ್ಕೂ ಮೊದಲೇ ನಾವು ತೆಲುಗು ಸಿನಿಮಾದಲ್ಲಿ ಅಂತಹ ಕಥೆಗಳನ್ನು ನೋಡಿದ್ದೆವು. ಆದರೆ ಬಿಹಾರ, ಉತ್ತರ ಪ್ರದೇಶ, ಪಂಜಾಬ್ ಮುಂತಾದ ಕಡೆಗಳಲ್ಲಿ ಜನರು ತಮ್ಮ ಹೀರೋಗಳನ್ನು ಪುಷ್ಪ ರೀತಿ, ರಾಕಿ ಭಾಯ್ ರೀತಿ, ಬಾಹುಬಲಿ ರೀತಿ ನೋಡಲು ಬಯಸಿದ್ದರು. ಭಾರತದ ಜನರಿಗೆ ಪ್ರತಿದಿನ ಒಂದೇ ರೀತಿಯ ಬದುಕನ್ನು ಜೀವಿಸುವುದು ಕಷ್ಟ. ಅವರು ಒತ್ತಡದಿಂದ ಹೊರಗೆ ಬರಲು ಸಿನಿಮಾ ನೋಡುತ್ತಾರೆ. ಅಲ್ಲಿ ಅವರು ಮ್ಯಾಜಿಕ್ ನೋಡಲು ಬಯಸುತ್ತಾರೆ’ ಎಂದು ನಾಗಾರ್ಜುನ ಹೇಳಿದ್ದಾರೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಇದನ್ನೂ ಓದಿ: ವೇವ್ಸ್ ಸಮಿಟ್​ನಲ್ಲಿ ಚಿತ್ರರಂಗದ ದಿಗ್ಗಜರ ಅಂಚೆ ಚೀಟಿ ಬಿಡುಗಡೆ; ಮೋದಿಗೆ ನಾಗಾರ್ಜುನ ಧನ್ಯವಾದ

‘ಮೂಲ ವಿಷಯಗಳನ್ನು ಇಟ್ಟುಕೊಂಡು, ಭಾರತದ ಶೈಲಿಯಲ್ಲೇ ನೈಜ ಬದುಕಿಗಿಂತ ದೊಡ್ಡದಾಗಿ ಕಥೆಯನ್ನು ಹೇಳುವುದು ಎಂದರೆ ಹೀಗೆಯೇ.. ಅದಕ್ಕಾಗಿಯೇ ಸಿನಿಮಾಗಳು ಸಕ್ಸಸ್ ಆಗಿವೆ. ಬಾಹುಬಲಿ ಒಂದು ತೆಲುಗು ಸಿನಿಮಾ ಎಂದುಕೊಂಡೇ ರಾಜಮೌಳಿ ಅವರು ಫ್ರೇಮ್ ಟು ಫ್ರೇಮ್ ನಿರ್ದೇಶನ ಮಾಡಿದರು. ತಮ್ಮ ಭಾಷೆ ಮತ್ತು ಮೂಲದ ಬಗ್ಗೆ ಅವರಿಗೆ ಹೆಮ್ಮೆ ಇದೆ. ಅದನ್ನು ಇಡೀ ಜಗತ್ತಿನ ಪ್ರೇಕ್ಷಕರು ಇಷ್ಟಪಟ್ಟರು’ ಎಂದಿದ್ದಾರೆ ನಾಗಾರ್ಜುನ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ