‘ಕೊಳಕು ಅಂಟದ ಬಿಳಿ ಹಾಳೆ ನೀನು’; ಧನರಾಜ್ಗೆ ಕೈಯಲ್ಲೇ ಪತ್ರ ಬರೆದು ಬರ್ತ್ಡೇ ವಿಶ್ ತಿಳಿಸಿದ ತ್ರಿವಿಕ್ರಂ
ಬಿಗ್ ಬಾಸ್ ಕನ್ನಡದಿಂದ ಧನರಾಜ್ ಮತ್ತು ತ್ರಿವಿಕ್ರಂ ಅವರ ನಡುವೆ ಬೆಳೆದ ಅದ್ಭುತ ಬಾಂಧವ್ಯ ಇಂದಿಗೂ ಮುಂದುವರೆದಿದೆ. ಧನರಾಜ್ ಅವರ ಜನ್ಮದಿನದಂದು, ತ್ರಿವಿಕ್ರಂ ಅವರು ಕೈಬರಹದ ಪತ್ರದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪತ್ರದಲ್ಲಿ ಅವರು ಬಿಗ್ ಬಾಸ್ ಮನೆಯಲ್ಲಿನ ಅನುಭವಗಳು ಹಾಗೂ ಧನರಾಜ್ ಅವರ ವ್ಯಕ್ತಿತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಧನರಾಜ್ ಆಚಾರ್ (Dhanaraj Achar) ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆ ಬಾಂಧವ್ಯ ಬೆಳೆಯೋಕೆ ಕಾರಣ ಆಗಿದ್ದು ಬಿಗ್ ಬಾಸ್ ಜರ್ನಿ. ಇವರ ಮಧ್ಯೆ ಒಳ್ಳೆಯ ನಂಟು ಮೂಡಿದೆ. ಈ ಗೆಳೆತನ ಕೇವಲ ಬಿಗ್ ಬಾಸ್ಗೆ ಮಾತ್ರ ಸೀಮಿತವಾಗಿಲ್ಲ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಇಬ್ಬರೂ ಒಳ್ಳೆಯ ಒಡನಾಟ ಮುಂದುವರಿಸಿದ್ದಾರೆ. ಇವರು ಆಗಾಗ ಭೇಟಿ ಆಗುತ್ತಾರೆ. ಈಗ ಧನರಾಜ್ ಅವರ ಜನ್ಮದಿನದ ಪ್ರಯುಕ್ತ ತ್ರಿವಿಕ್ರಂ ಅವರು ಕೈಯಲ್ಲೇ ಪತ್ರ ಬರೆದು ವಿಶ್ ತಿಳಿಸಿದ್ದಾರೆ. ಅದನ್ನು ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ.
ಧನರಾಜ್ ಅವರಿಗೆ ಏಪ್ರಿಲ್ 7 ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ಅವರ ಆಪ್ತ ಬಳಗದವರು ವಿಶ್ ಮಾಡಿದ್ದಾರೆ. ಧನರಾಜ್ ಅವರು ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು. ಅವರಿಗೆ ಬಿಗ್ ಬಾಸ್ನಿಂದ ಮತ್ತಷ್ಟು ಜನಪ್ರಿಯತೆ ಸಿಕ್ಕಿದೆ. ಧನರಾಜ್ ಈಗ ವಿವಿಧ ರೀತಿಯ ವಿಡಿಯೋಗಳನ್ನು ಮಾಡಿಕೊಂಡಿದ್ದಾರೆ. ಅವರಿಗೆ ತ್ರಿವಿಕ್ರಂ ಮಾಡಿದ ವಿಶ್ ಗಮನ ಸೆಳೆದಿದೆ.
‘ಹೇ ಮಂಗಳೂರು ಹುಲಿ, ಧನು ಅಲಿಯಾಸ್ ಧನರಾಜ್. ಏನು ಹೇಳಲಿ ನಿನ್ನ ಬಗ್ಗೆ? ಬಿಗ್ ಬಾಸ್ ಮನೇನೇ ಟ್ರೋಲ್ ಮಾಡಿದವನು. ನಾನು ಅಂದುಕೊಂಡ ಗಾದೆ ಸುಳ್ಳು ಮಾಡಿದವನು. ಮೂರ್ತಿನೂ ದೊಡ್ಡದು, ಕೀರ್ತಿನೂ ದೊಡ್ಡದು. ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ನೋಡಿ ಯಾರಲೇ ಇವನು (ನಿರ್ಲಕ್ಷ್ಯದಿಂದ) ಎನ್ನುತ್ತಿದ್ದವರೆಲ್ಲ, ಯಾರಲೇ ಇವನು (ಅಚ್ಚರಿಯಿಂದ) ಎಂದು ಹೇಳುವಂತೆ ಮಾಡಿದವನು’ ಎಂದಿದ್ದಾರೆ ತ್ರಿವಿಕ್ರಂ.
‘ನೀನು ನಿನ್ನನ್ನು ಜಿಂಕೆಗೆ ಯಾಕೆ ಹೋಲಿಕೆ ಮಾಡಿಕೊಳ್ಳುತ್ತಿದ್ದೆ ಅನ್ನೋದು ಗೊತ್ತಿರಲಿಲ್ಲ. ಆದರೆ, ಅದನ್ನು ಫ್ಯಾಮಿಲಿ ರೌಂಡ್ನಲ್ಲಿ ನೋಡಿದಾಗ ಗೊತ್ತಾಯ್ತು. ಪುತ್ತೂರಲ್ಲಿ ಜಿಂಕೆ ಬಿಡಾರವೇ ಇದೆ. ಮನಸ್ಸಿಂದ, ವಯಸ್ಸಲ್ಲಿ, ಕ್ಯಾರೆಕ್ಟರ್ನಲ್ಲಿ ದೊಡ್ಡವನು, ಮನಸ್ಸಿಂದ ಇನ್ನೂ ದೊಡ್ಡವನು. ಎಲ್ಲರ ಎದುರು ಚಿಕ್ಕವನಂತೆ ಇದ್ದು ಎಲ್ಲರ ಮನಸ್ಸು ಗೆದ್ದಿದೀಯಾ’ ಎಂದಿದ್ದಾರೆ ತ್ರಿವಿಕ್ರಂ.
ಇದನ್ನೂ ಓದಿ: ‘ಹೀಗೆ ಇರಲಿ ಇಬ್ಬರ ಸ್ನೇಹ’; ಹನುಮಂತ-ಧನರಾಜ್ ಗೆಳೆತನಕ್ಕೆ ಐಶ್ವರ್ಯಾ ಹಾರೈಕೆ
‘ಸಿಂಪಲ್ ಆಗಿ ಎಂಟ್ರಿ ಕೊಟ್ಟೆ, ಎಕ್ಸಿಟ್ ಮಾತ್ರ ಸೂಪರ್. ಕೊಳಕು ಅಂಟದ ಬಿಳಿ ಹಾಳೆ ನೀನು. ದೇವರ ಮಗ ನೀನು. ನಿಮ್ಮ (ಹನುಮಂತ) ಗೆಳೆತನದ ಮೂಲಕ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಒಂದು ಮಾಡಿದೀಯಾ. ನೀನು ಇರೋ ಕಡೆ ನಗುವಿಗೆ ಬರಗಾಲ ಇಲ್ಲ. ನಿನ್ನಿಂದ ಕಲಿತಿದ್ದು, ಕಲಿಬೇಕಿರೋದು ತುಂಬಾ ಇದೆ. ನೀನು ಕನ್ನಡ ಚಿತ್ರರಂಗದ ಬೇಡಿಕೆಯ ನಟ ಆಗ್ತೀಯಾ’ ಎಂದಿದ್ದಾರೆ ಅವರು.
View this post on Instagram
‘ಈ ಭಾಂದವ್ಯನ ಪಡೆದಿರೋದಕ್ಕೆ ನಾನು ನಿಜಕ್ಕೂ ಪುಣ್ಯ ಮಾಡಿದ್ದೆ ಮಾಸ್ಟರ್.. ಈ ಪತ್ರ ನನ್ನ ಹುಟುಹಬ್ಬಕ್ಕೆ ಸಿಕ್ಕ ತುಂಬಾ ತುಂಬಾ ವಿಶೇಷ ಪತ್ರ. ಹೃದಯದಿಂದ ಬರೆದ ಪತ್ರ ನನ್ನ ಹೃದಯ ತಲುಪಿತು ಮಾಸ್ಟರ್. ನಿಮ್ಮ ಬರವಣಿಗೆ ಅದು ಮನಸ್ಸಿನ ಮೆರವಣಿಗೆ.. ಭಾಂದವ್ಯ ಇದ್ದೂ ಜೀವನ ಪೂರ್ತಿ ಹೀಗೆ ಇರುವ ಲವ್ ಯು ಮಾಸ್ಟರ್’ ಎಂದು ಧನರಾಜ್ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:08 am, Tue, 8 April 25