ಟಾಸ್ಕ್​ನಲ್ಲಿ ತಪ್ಪು ಮಾಡಿದ್ದಕ್ಕೆ ಧನರಾಜ್ ಎಲಿಮಿನೇಟ್ ಆದ್ರಾ? ಸುದೀಪ್ ಹೇಳಿದ ಕಾರಣ ಬೇರೆ

ಬಿಗ್ ಬಾಸ್ ಟ್ರೋಫಿ ಗೆಲ್ಲುವ ಆಸೆ ಹೊಂದಿದ್ದ ಧನರಾಜ್ ಅವರು ಕೊನೇ ಹಂತದಲ್ಲಿ ಎಲಿಮಿನೇಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರು ಟಿವಿ9 ಜೊತೆ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಎಲಿಮಿನೇಷನ್​ಗೆ ಪ್ರಮುಖ ಕಾರಣ ಏನಾಗಿರಬಹುದು ಎಂಬ ಕುರಿತು ಅವರು ವಿಶ್ಲೇಷಣೆ ಮಾಡಿದ್ದಾರೆ.

ಟಾಸ್ಕ್​ನಲ್ಲಿ ತಪ್ಪು ಮಾಡಿದ್ದಕ್ಕೆ ಧನರಾಜ್ ಎಲಿಮಿನೇಟ್ ಆದ್ರಾ? ಸುದೀಪ್ ಹೇಳಿದ ಕಾರಣ ಬೇರೆ
Dhanraj Achar, Kichcha Sudeep
Follow us
Mangala RR
| Updated By: ಮದನ್​ ಕುಮಾರ್​

Updated on: Jan 20, 2025 | 9:12 PM

ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಫೇಮಸ್ ಆದವರು ಧನರಾಜ್ ಆಚಾರ್​. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಅವರು ಗಮನಾರ್ಹವಾಗಿ ಪೈಪೋಟಿ ನೀಡಿದರು. ನೂರಾರು ದಿನಗಳ ಕಾಲ ಎಲ್ಲರಿಗೂ ಪೈಪೋಟಿ ನೀಡಿ ಫಿನಾಲೆಯ ಸಮೀಪಕ್ಕೆ ಬಂದಿದ್ದರು. ಆದರೆ ಫಿನಾಲೆ ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಏನು ಇರಬಹುದು? ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಅದಕ್ಕೆ ಈಗ ಸ್ವತಃ ಧನರಾಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಧನರಾಜ್ ಅವರು ಕಳೆದ ವಾರ ಟಾಸ್ಕ್ ಆಡುವಾಗ ಗ್ರೇ ಏರಿಯಾ ಹುಡುಕಿಕೊಂಡಿದ್ದರು. ಆ ಮೂಲಕ ಅವರು ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಿದ್ದರು. ಆದರೆ ಅದನ್ನು ಬಿಗ್ ಬಾಸ್ ಖಂಡಿಸಿದರು. ಹಾಗಾಗಿ ಅವರ ಅಂಕಗಳನ್ನು ರದ್ದು ಮಾಡಲಾಯಿತು. ಇಮ್ಯುನಿಟಿ ಹಿಂಪಡೆಯಲಾಯಿತು. ಈ ಕಾರಣದಿಂದಲೇ ತಮ್ಮನ್ನು ಎಲಿಮಿನೇಟ್ ಮಾಡಿರಬಹುದು ಎಂಬ ಅನುಮಾನ ಸ್ವತಃ ಧನರಾಜ್ ಅವರಿಗೂ ಇತ್ತು.

ಆದರೆ ಗ್ರೇ ಏರಿಯಾದ ಕಾರಣವನ್ನು ನೀಡಿ ಧನರಾಜ್ ಅವರನ್ನು ಎಲಿಮಿನೇಟ್ ಮಾಡಿಲ್ಲ. ಎಲಿಮಿನೇಷನ್​ಗೆ ನಿಜವಾದ ಕಾರಣ ಏನು ಎಂಬುದನ್ನು ತಮಗೆ ಸುದೀಪ್ ವಿವರಿಸಿದರು ಎಂದು ಧನರಾಜ್​ ಹೇಳಿದ್ದಾರೆ. ‘ಇಡೀ ಸೀಸನ್​ನ ಇಷ್ಟು ವಾರಗಳ ಆಟವನ್ನು ಪರಿಗಣಿಸಿ, ವೋಟಿಂಗ್​ನಲ್ಲಿ ಈ ರೀತಿ ಆಗಿದೆ ಅಂತ ಸುದೀಪ್ ಸರ್ ನನಗೆ ಹೇಳಿದರು’ ಎಂದಿದ್ದಾರೆ ಧನರಾಜ್.

ಇದನ್ನೂ ಓದಿ: ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರಿಸಿದ ದೋಸ್ತ

ಬಿಗ್ ಬಾಸ್ ಮನೆಗೆ ಧನರಾಜ್ ಅವರ ಇಡೀ ಕುಟುಂಬ ಬಂದಿತ್ತು. 33 ಮಂದಿ ಬಂದು ಧನರಾಜ್​ಗೆ ಹುಮ್ಮಸ್ಸು ತುಂಬಿದ್ದರು. ಆ ಕ್ಷಣವನ್ನು ಕೊನೆ ತನಕ ನೆನಪು ಇಟ್ಟುಕೊಳ್ಳುವುದಾಗಿ ಧನರಾಜ್ ಹೇಳಿದ್ದಾರೆ. ಈಗ ಫಿನಾಲೆ ವಾರದಲ್ಲಿ ರಜತ್, ತ್ರಿವಿಕಮ್, ಮೋಕ್ಷಿತಾ ಪೈ, ಉಗ್ರಂ ಮಂಜು, ಹನುಮಂತ ಹಾಗೂ ಭವ್ಯಾ ಗೌಡ ಅವರು ಸ್ಪರ್ಧಿಗಳಾಗಿದ್ದಾರೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. ‘ನನ್ನ ದೋಸ್ತ ಹನುಮಂತ ಗೆಲ್ಲಬೇಕು. ಅವನೇ ಗೆಲ್ಲುತ್ತಾನೆ’ ಎಂದು ಧನರಾಜ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ