ಬಿಗ್ ಬಾಸ್ನಿಂದ ಧನರಾಜ್ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರಿಸಿದ ದೋಸ್ತ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಧನರಾಜ್ ಅವರು ಹೊರಗೆ ಬಂದಿದ್ದಾರೆ. ಫಿನಾಲೆಗೆ ಹೋಗಬೇಕು ಎಂಬ ಅವರ ಕನಸು ಭಗ್ನವಾಯಿತು. ಇಷ್ಟು ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದಿದ್ದಕ್ಕೆ ಎಷ್ಟು ಸಂಭಾವನೆ ಸಿಕ್ಕಿದೆ ಎಂದು ಪ್ರಶ್ನೆ ಕೇಳಿದ್ದಕ್ಕೆ ಧನರಾಜ್ ಅವರು ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದಾರೆ.
ನೂರಾರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಠಿಣ ಪೈಪೋಟಿ ನೀಡಿದ ಧನರಾಜ್ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ‘ಬಿಗ್ ಬಾಸ್ ಒಂದು ದೊಡ್ಡ ಅವಕಾಶ. ಜಾಸ್ತಿ ಸಂಭಾವನೆ ಏನಿಲ್ಲ. ಚಿಕ್ಕ ಹಣವನ್ನು ಕೇಳಿದ್ದೇನೆ. ಅದನ್ನು ಅವರು ಕೊಟ್ಟಿದ್ದಾರೆ. ಹಣಕ್ಕಿಂತಲೂ ಹೆಚ್ಚಾಗಿ ಅವಕಾಶಕವೇ ದೊಡ್ಡವು. ಅದಕ್ಕಾಗಿ ನಾವು ಬಿಗ್ ಬಾಸ್ಗೆ ಯಾವಾಗಾಲೂ ಕೃತಜ್ಞರಾಗಿ ಇರುತ್ತೇವೆ’ ಎಂದು ಧನರಾಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos