ಮದ್ದೂರು ಬಳಿ ಕೆಎಸ್ಸಾರ್ಟಿಟಿಸಿ ಬಸ್ಸು ಪಲ್ಟಿ, 33 ಜನರಿಗೆ ಗಾಯ
ಪಲ್ಟಿಯಾದ ಬಸ್ಸನ್ನು ಕ್ರೇನ್ ನೆರವಿನಿಂದ ಚಕ್ರಗಳ ಮೇಲೆ ನಿಲ್ಲಿಸುವುದು ದೃಶ್ಯಗಳಲ್ಲಿ ನೋಡಬಹುದು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಪ್ರಾಣಾಪಾಯ ಸಂಭವಿಸದಿರುವುದು ಅದೃಷ್ಟವೇ ಸರಿ. ಅದರೆ ಕೆಎಸ್ಸಾರ್ಟಿಟಿಸಿ ಸ್ವಾಮ್ಯದ ಬಸ್ಸುಗಳು ಹೆಚ್ಚು ಅಪಘಾತಗಳಿಕ್ಕೀಡಾಗುತ್ತಿರೋದು ಚಿಂತಾಜನಕ ಸಂಗತಿಯಾಗಿದೆ.
ಮಂಡ್ಯ: ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ರುದ್ರಾಕ್ಷಿಪುರ ಗ್ರಾಮದ ಬಳಿ ದುರ್ಘಟನೆಗೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ 33 ಗಾಯಗೊಂಡಿದ್ದಾರೆ. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ಸು ಡಿವೈಡರ್ಗೆ ಗುದ್ದಿ ಪಲ್ಟಿಯಾಗಿದೆ. ಗಾಯಗೊಂಡವರನ್ನು ಮದ್ದೂರು ಸರ್ಕಾರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಸಂಚರಿಸಲಿವೆ ಬಿಎಂಟಿಸಿಯ 320 ಎಲೆಕ್ಟ್ರಿಕ್ ಎಸಿ ಬಸ್ಸುಗಳು
Published on: Jan 20, 2025 02:56 PM
Latest Videos