ಒಮನ್ನಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ಸುತ್ತಾಟ; ಅಭಿಮಾನಿಗಳ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ಸುತ್ತಾಟ ಮಾಡುತ್ತಾ ಇದ್ದಾರೆ. ಇದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಈಗ ಅವರು ವಿಜಯ್ ಜೊತೆ ಒಮನ್ಗೆ ತೆರಳಿದ್ದಾರೆ. ಅಲ್ಲಿ ಇಬ್ಬರೂ ಬರ್ತ್ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Updated on:Apr 07, 2025 | 9:06 AM

ರಶ್ಮಿಕಾ ಮಂದಣ್ಣ ಅವರು ಒಮನ್ನಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದು ಗೊತ್ತೇ ಇದೆ. ಆದರೆ, ಯಾರ ಜೊತೆ ಅವರು ಒಮನ್ ತೆರಳಿದ್ದಾರೆ ಎಂಬ ವಿಚಾರ ಗೊತ್ತಾಗಿರಲಿಲ್ಲ. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಫೋಟೋ ಬ್ಯಾಕ್ಗ್ರೌಂಡ್ನಲ್ಲಿರೋ ಬಾವುಟ ಇದಕ್ಕೆ ಸಾಕ್ಷಿ ಒದಗಿಸಿದೆ.

ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿರೋ ಒಂದು ಫೋಟೋದಲ್ಲಿ ಹಿಂಭಾಗದಲ್ಲಿ ಕೆಂಪು ಬಣ್ಣದ ಬಾವುಟವನ್ನು ಹಾಕಲಾಗಿದೆ. ಅದು ಬ್ಯಾಕ್ಗ್ರೌಂಡ್ನಲ್ಲಿ ಕಾಣಿಸಿದೆ. ಇಷ್ಟೇ ಆಗಿದ್ದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಅವರಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ವಿಜಯ್ ದೇವರಕೊಂಡ ಹಾಕಿರೋ ಫೋಟೋದಲ್ಲೂ ಇದೇ ಬಾವುಟ ಕಾಣಿಸಿದೆ. ಹೀಗಾಗಿ, ಇಬ್ಬರೂ ಒಮನ್ನಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎನ್ನುವ ವಿಚಾರ ಖಚಿತವಾಗಿದೆ. ಇವರ ಮಧ್ಯೆ ಪ್ರೀತಿ ಇರೋ ವಿಚಚಾರ ಖಚಿತವಾಗಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ವಿಜಯ್ ದೇವರಕೊಂಡ ಅವರು ಸಿನಿಮಾಗಾಗಿ ಕುದುರೆ ಓಡಿಸೋದನ್ನು ಕಲಿತಿದ್ದಾರೆ. ಹೀಗಾಗಿ, ಒಮನ್ನಲ್ಲಿ ಸಿಕ್ಕ ಕುದುರೆ ಮೇಲೆ ಕುಳಿತು ಅವರು ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ವಿಜಯ್ ದೇವರಕೊಂಡ ಅವರು ಸೋಶೀಯಲ್ ಮೀಡಿಯಾದ್ದಲ್ಲಿ ಹಂಚಿಕೊಂಡಿದ್ದಾರೆ.

ಏಪ್ರಿಲ್ 5 ರಶ್ಮಿಕಾ ಜನ್ಮದಿನ. ಅವರು 29ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಅವರು ಒಂದು ದಿನಗಳ ಅಂತರದಲ್ಲಿ ವಿದೇಶಕ್ಕೆ ತೆರಳಿದ್ದರು. ಈಗ ಫೋಟೋಗಳನ್ನು ಹಂಚಿಕೊಂಡು ಇವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ. ಆದರೆ, ಅದು ಸದ್ಯಕ್ಕೆ ನೆರವೇರುವ ಸೂಚನೆ ಇಲ್ಲ. ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಈಗ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ವಿವಾಹ ಆದರೆ ಬೇಡಿಕೆ ಕಡಿಮೆ ಆಗುತ್ತದೆ ಎನ್ನುವ ಭಯ ಅವರದ್ದು.
Published On - 8:38 am, Mon, 7 April 25
























