Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್‌ನಲ್ಲಿ ಶತಕ ಪೂರೈಸಿದ ಮೊಹಮ್ಮದ್ ಸಿರಾಜ್

Mohammad Siraj's IPL 2025 Dominance: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದ ಬಳಿಕ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಅದ್ಭುತವಾಗಿದೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಅವರು ಐಪಿಎಲ್​ನಲ್ಲಿ 100 ವಿಕೆಟ್​ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಪವರ್ ಪ್ಲೇಯಲ್ಲಿ ಅವರ ವಿನಾಶಕಾರಿ ಬೌಲಿಂಗ್ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಮುಂಬೈ, ಆರ್‌ಸಿಬಿ ಮತ್ತು ಸನ್‌ರೈಸರ್ಸ್ ವಿರುದ್ಧ ಅವರ ಅದ್ಭುತ ಪ್ರದರ್ಶನ ಗಮನ ಸೆಳೆದಿದೆ.

ಪೃಥ್ವಿಶಂಕರ
|

Updated on: Apr 06, 2025 | 8:36 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದ ಬಳಿಕ ಮೊಹಮ್ಮದ್ ಸಿರಾಜ್ ಅವರ ಆಟದ ಶೈಲಿಯೇ ಬದಲಾಗಿದೆ. ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಸಿರಾಜ್, ಭಾರಿ ಅನಾಹುತವನ್ನೇ ಸೃಷ್ಟಿಸಿದ್ದಾರೆ. ಮೊದಲು ಮುಂಬೈ ವಿರುದ್ಧ, ನಂತರ ಆರ್‌ಸಿಬಿ ವಿರುದ್ಧ ಮತ್ತು ಈಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿರಾಜ್ ತಮ್ಮ ಮ್ಯಾಜಿಕ್ ಪ್ರದರ್ಶಿಸಿದ್ದಾರೆ.

1 / 5
ಈ ಸೀಸನ್​ನಲ್ಲಿ ಅದರಲ್ಲೂ ಪವರ್‌ಪ್ಲೇನಲ್ಲಿ ವಿನಾಶಕಾರಿ ಬೌಲಿಂಗ್ ಮಾಡುತ್ತಿರುವ ಸಿರಾಜ್, ಇದೀಗ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧವೂ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಹೈದರಾಬಾದ್‌ ತಂಡದ ಇಬ್ಬರು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗಟ್ಟುವಲ್ಲಿ ಸಿರಾಜ್​ ಯಶಸ್ವಿಯಾಗಿದ್ದಾರೆ.

2 / 5
ಸನ್‌ರೈಸರ್ಸ್ ಹೈದರಾಬಾದ್ ತಂಡದ ಇಬ್ಬರು ಸ್ಫೋಟಕ ಬ್ಯಾಟರ್​ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದ ಸಿರಾಜ್ ಐಪಿಎಲ್‌ನಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಇದೀಗ ಸಿರಾಜ್ ಐಪಿಎಲ್ ಇತಿಹಾಸದಲ್ಲಿ 100 ವಿಕೆಟ್ ಪಡೆದ 26 ನೇ ಬೌಲರ್ ಮತ್ತು 12 ನೇ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

3 / 5
ಅಲ್ಲದೆ ಪವರ್‌ಪ್ಲೇ ಹೆಚ್ಚು ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವ ಸಿರಾಜ್, ಐಪಿಎಲ್ 2022 ರಿಂದ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪವರ್‌ಪ್ಲೇನಲ್ಲಿ ಸಿರಾಜ್ ಇದುವರೆಗೆ ಒಟ್ಟು 24 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 5
ಕಳೆದ ಸೀಸನ್​ಗೆ ಹೊಲಿಸಿದರೆ, ಈ ಸೀಸನ್‌ನಲ್ಲಿ ಮಾರಕ ಬೌಲಿಂಗ್ ಪ್ರದರ್ಶಿಸುತ್ತಿರುವ ಮೊಹಮ್ಮದ್ ಸಿರಾಜ್ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಸಿರಾಜ್ ಈ ಸೀಸನ್‌ನಲ್ಲಿ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳ ಪವರ್‌ಪ್ಲೇನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5 / 5
Follow us