AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB Recruitment 2026: ರೈಲ್ವೆಯಲ್ಲಿ ನೇಮಕಾತಿ; 4,098 ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆಯು 4098 ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ RRB ನೇಮಕಾತಿ ಅಧಿಸೂಚನೆ (CGL 04/2026) ಬಿಡುಗಡೆ ಮಾಡಿದೆ. ಎಂಜಿನಿಯರಿಂಗ್ ಡಿಪ್ಲೊಮಾ/ಪದವೀಧರರು 18-33 ವರ್ಷದವರು ಆಗಸ್ಟ್ 14 ರಿಂದ ಸೆಪ್ಟೆಂಬರ್ 16, 2026 ರೊಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯು CBT ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಆಧರಿಸಿದೆ. ಮಾಸಿಕ 35,400 ರೂ. ಆರಂಭಿಕ ವೇತನ ಸಿಗಲಿದೆ.

RRB Recruitment 2026: ರೈಲ್ವೆಯಲ್ಲಿ ನೇಮಕಾತಿ; 4,098 ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ
ಭಾರತೀಯ ರೈಲ್ವೆಯಲ್ಲಿ ನೇಮಕಾತಿ Image Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 06, 2026 | 3:10 PM

Share

ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದೇಶಾದ್ಯಂತ ಇರುವ ಎಲ್ಲಾ ರೈಲ್ವೆ ವಲಯಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಮಂಡಳಿ (RRB) ಇತ್ತೀಚೆಗೆ ಕೇಂದ್ರೀಕೃತ ಉದ್ಯೋಗ ಕಿರು ಅಧಿಸೂಚನೆಯನ್ನು (CGL 04/2026) ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 4,098 ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ಹಾಗೂ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಅರ್ಹತೆ, ವಯೋಮಿತಿ ಮತ್ತು ವೇತನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ, ಬಿ.ಇ/ಬಿ.ಟೆಕ್ ಪದವಿ ಅಥವಾ ಬಿ.ಎಸ್ಸಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು 18 ರಿಂದ 33 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಇತರ ಭತ್ಯೆಗಳ ಜೊತೆಗೆ ತಿಂಗಳಿಗೆ 35,400ರೂ. ಆರಂಭಿಕ ಮೂಲ ವೇತನ ದೊರೆಯಲಿದೆ. ಹುದ್ದೆಗಳ ಪ್ರಾದೇಶಿಕವಾರು ವಿವರ, ಶೈಕ್ಷಣಿಕ ಅರ್ಹತೆಗಳು ಹಾಗೂ ಪಠ್ಯಕ್ರಮದ ಕುರಿತು ಪೂರ್ಣ ಅಧಿಸೂಚನೆ ಬಂದ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಹಂತ-1 ಮತ್ತು ಹಂತ-2 ರ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು (CBT), ಮೂಲ ಪ್ರಮಾಣಪತ್ರಗಳ ಪರಿಶೀಲನೆ ಹಾಗೂ ರೈಲ್ವೆ ವೈದ್ಯಕೀಯ (Medical Examination) ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ವಿವರವಾದ ಪೂರ್ಣ ಅಧಿಸೂಚನೆ ಬಿಡುಗಡೆ ದಿನಾಂಕ: 13 ಆಗಸ್ಟ್ 2026
  • ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ: 14 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಸೆಪ್ಟೆಂಬರ್ 2026
  • CBT-1 ಲಿಖಿತ ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ಘೋಷಿಸಲಾಗುವುದು

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಕಾರ್ಯಾಚರಣೆ ಮುಂದುವರಿಕೆ
ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಕಾರ್ಯಾಚರಣೆ ಮುಂದುವರಿಕೆ
ರಾಯಚೂರು: ಕೊಳೆತ ತರಕಾರಿ ಅಡುಗೆ, ಸ್ಯಾನಿಟರಿ ಪ್ಯಾಡ್ ಕೊರತೆ
ರಾಯಚೂರು: ಕೊಳೆತ ತರಕಾರಿ ಅಡುಗೆ, ಸ್ಯಾನಿಟರಿ ಪ್ಯಾಡ್ ಕೊರತೆ
ಸಿದ್ದರಾಮಯ್ಯ ಪಟ್ಟಿಯಲ್ಲಿ ಮಹದೇವಪ್ಪ ಹೆಸರಿದ್ದರೂ ಸ್ಥಾನ ತಪ್ಪಿದೆ: ಯತೀಂದ್ರ
ಸಿದ್ದರಾಮಯ್ಯ ಪಟ್ಟಿಯಲ್ಲಿ ಮಹದೇವಪ್ಪ ಹೆಸರಿದ್ದರೂ ಸ್ಥಾನ ತಪ್ಪಿದೆ: ಯತೀಂದ್ರ
ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳ: ಶಾಕಿಂಗ್​​ ಮಾಹಿತಿ ಬಹಿರಂಗ
ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳ: ಶಾಕಿಂಗ್​​ ಮಾಹಿತಿ ಬಹಿರಂಗ
‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ತನುಷ್ ಶಿವಣ್ಣ
‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ತನುಷ್ ಶಿವಣ್ಣ
ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!
ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!
ಸಿದ್ದರಾಮಯ್ಯ ಮೇಲೆ ಮುನಿಸುಕೊಂಡ ಅಹಿಂದ ಶಾಸಕರು
ಸಿದ್ದರಾಮಯ್ಯ ಮೇಲೆ ಮುನಿಸುಕೊಂಡ ಅಹಿಂದ ಶಾಸಕರು
ತೋಟದ ಮನೆಗೆ ನುಗ್ಗಿದ ವಿಷಕಾರಿ ಕೊಳಕು ಮಂಡಲ ಹಾವು
ತೋಟದ ಮನೆಗೆ ನುಗ್ಗಿದ ವಿಷಕಾರಿ ಕೊಳಕು ಮಂಡಲ ಹಾವು
ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ಚಾಕು ಹಿಡಿದು ನುಗ್ಗಿದ ಆಗಂತುಕರು
ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ಚಾಕು ಹಿಡಿದು ನುಗ್ಗಿದ ಆಗಂತುಕರು