ಸಾಯಿ ಪಲ್ಲವಿ ಧ್ವನಿ ಅದೆಷ್ಟು ಕ್ಯೂಟ್; ಅವರ ಹಾಡು ಕೇಳಿ
ಸಾಯಿ ಪಲ್ಲವಿ ಅವರ ಸರಳತೆ ಮತ್ತು ಅಭಿನಯ ಪ್ರತಿಭೆ ಜನರನ್ನು ಆಕರ್ಷಿಸುತ್ತದೆ. ‘ಪ್ರೇಮಂ’ ಚಿತ್ರದ ಮೂಲಕ ಖ್ಯಾತಿ ಪಡೆದ ಅವರು, ಇತ್ತೀಚೆಗೆ ವೈರಲ್ ಆದ ಹಾಡಿನ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ಅಭಿನಯಿಸುತ್ತಿರುವ ಸಾಯಿ ಪಲ್ಲವಿ ಅವರ ಭವಿಷ್ಯದ ಚಿತ್ರಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಸಾಯಿ ಪಲ್ಲವಿ (Sai Pallavi) ಅವರು ಉತ್ತಮ ನಟಿ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ನಟಿ ಸಾಯಿ ಪಲ್ಲವಿ ಅವರು ಅನೇಕರಿಗೆ ಇಷ್ಟ. ಅನೇಕ ಹೀರೋಯಿನ್ಗಳು ತುಂಡುಡುಗೆ ಹಾಕಿ, ಸಾಕಷ್ಟು ಮೇಕಪ್ ಮಾಡಿ ಗ್ಲಾಮರ್ ಅವತಾರ ತೋರಿಸಿದರೂ ಜನರು ಅವರನ್ನು ಇಷ್ಟಪಡೋದಿಲ್ಲ. ಆದರೆ, ಸಾಯಿ ಪಲ್ಲವಿ ಅವರು ಸರಳ ಲುಕ್ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾರೆ. ಅವರು ಹಾಡಿದ ಒಂದು ಹಾಡು ಎಲ್ಲರಿಗೂ ಇಷ್ಟ ಆಗುವಂಥದ್ದು.
ಸಾಯಿ ಪಲ್ಲವಿ ಅವರ ಬದುಕು ಬದಲಿಸಿದ್ದು ‘ಪ್ರೇಮಂ’ ಸಿನಿಮಾ. ಈ ಚಿತ್ರ 2015ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬಿಡುಗಡೆ ಕಂಡು 10 ವರ್ಷಗಳು ಕಳೆದಿವೆ. ಈ ಚಿತ್ರದಲ್ಲಿ ಮಲರ್ ಟೀಚರ್ ಆಗಿದ್ದರು. ಈ ಪಾತ್ರದ ಮೂಲಕ ಅವರು ಎಲ್ಲರಿಗೂ ಇಷ್ಟ ಆದರು. ಸಿಂಪಲ್ ಲುಕ್ನಲ್ಲಿ ಅವರು ಜನಮನ ಗೆದ್ದರು. ಸಾಯಿ ಪಲ್ಲವಿ ಅವರ ಅದೃಷ್ಟ ಬದಲಾಯಿತು.
ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ ಅವರ ಬಳಿ ಸಂದರ್ಶಕಿ ಹಾಡು ಹೇಳುವಂತೆ ಕೋರಿಕೊಂಡರು. ನಾನು ಭಜನೆಯನ್ನು ಮಾತ್ರ ಹಾಡೋದು ಎಂದು ಹೇಳಿದರು. ತೊಂದರೆ ಇಲ್ಲ ಹಾಡಿ ಎಂದು ಸಂದರ್ಶಕಿ ಕೋರಿಕೊಂಡರು. ಈ ವೇಳೆ ಅವರು ಸುಮಧುರವಾಗಿ ಹಾಡಿ ಗಮನ ಸೆಳೆದರು. ಅವರ ಧ್ವನಿ ಎಲ್ಲರಿಗೂ ಇಷ್ಟ ಆಗಿದೆ. ಈ ವಿಡಿಯೋನ ವೈರಲ್ ಮಾಡಲಾಗುತ್ತಿದೆ.
View this post on Instagram
ಸಾಯಿ ಪಲ್ಲವಿ ಅವರು ಉತ್ತಮ ಡ್ಯಾನ್ಸರ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಉತ್ತಮ ಹಾಡುಗಾರ್ತಿ ಎಂಬುದು ಅನೇಕರಿಗೆ ಗೊತ್ತಿರಲಿಲ್ಲ. ಅನೇಕರು ರಿಪೀಟ್ ಆಗಿ ಈ ಹಾಡನ್ನು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ. ಸಾಯಿ ಪಲ್ಲವಿ ಸೌಂದರ್ಯದಷ್ಟೇ ಅವರ ಧ್ವನಿಯೂ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ನಿತ್ಯಾ ಮೆನನ್ ಅದೆಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನೋಡಿ
ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಸರಳ ಲುಕ್ನಲ್ಲಿ ಸಾಯಿ ಪಲ್ಲವಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಫೋಟೋ ರಿವೀಲ್ ಆಗಲಿ ಎಂಬುದು ಫ್ಯಾನ್ಸ್ ಬಯಕೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಕನ್ನಡದ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.