AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯಾ ಮೆನನ್ ಅದೆಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನೋಡಿ

ನಿತ್ಯಾ ಮೆನನ್ ಅವರ ಜನ್ಮದಿನದಂದು, ಅವರ ಕನ್ನಡದೊಂದಿಗಿನ ಸಂಬಂಧ, ಅವರ ನಿಜವಾದ ಹೆಸರು ಮತ್ತು ಅವರ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ. ಬೆಂಗಳೂರಿನಲ್ಲಿ ಜನಿಸಿದ ನಿತ್ಯಾ ಅವರು ಕನ್ನಡವನ್ನು ಅತ್ಯಂತ ಸುಂದರವಾಗಿ ಮಾತನಾಡುತ್ತಾರೆ. ಅವರ ಕನ್ನಡ ಪ್ರೀತಿ ಅಪಾರ. ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕೆಂಬುದು ಅಭಿಮಾನಿಗಳ ಆಸೆ.

ನಿತ್ಯಾ ಮೆನನ್ ಅದೆಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನೋಡಿ
ನಿತ್ಯಾ ಮೆನನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 08, 2025 | 8:04 AM

ನಿತ್ಯಾ ಮೆನನ್ (Nithya Menen) ಅವರು ದಕ್ಷಿಣ ಭಾರತದ ಖ್ಯಾತ ನಟಿ. ಅವರು ಹಿಂದಿಯಲ್ಲೂ ಸಿನಿಮಾ ಮಾಡಿದ್ದಾರೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ. ಇಂದು (ಏಪ್ರಿಲ್ 8) ಅವರಿಗೆ ಜನ್ಮದಿನ.  ನಿತ್ಯಾ ಮೆನನ್ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಾ ಇದೆ. ನಿತ್ಯಾ ಮೆನನ್ ಅವರು ಸುಂದರವಾಗಿ ಕನ್ನಡ ಮಾತನಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ವಿಡಿಯೋಗಳು ವೈರಲ್ ಆದ ಉದಾಹರಣೆ ಇದೆ. ಆ ಬಗ್ಗೆ ಇಂದು ನೋಡೋಣ. ಅವರ ನಿಜವಾದ ಹೆಸರಿನ ಬಗ್ಗೆಯೂ ತಿಳಿಯೋಣ.

ನಿತ್ಯಾ ಮೆನನ್ ಹುಟ್ಟಿದ್ದು ಬೆಂಗಳೂರಿನಲ್ಲೇ. ಅವರು 1990ರ ಏಪ್ರಿಲ್ 8ರಂದು ಜನಿಸಿದರು. ಮೌಂಟ್ ಕಾರ್ಮೆಲ್ ಕಾಲೇಜ್​ನಲ್ಲಿ ಅವರು ಶಿಕ್ಷಣ ಪಡೆದರು. ನಿತ್ಯಾ ಮೆನನ್ ಅವರಿಗೆ ಬರೆಯಲು ಹಾಗೂ ಓದಲು ಬರುವ ಭಾಷೆ ಎಂದರೆ ಅದು ಕನ್ನಡ. ಅವರನ್ನು ಅನೇಕರು ಕನ್ನಡದವರು ಎಂದು ಪರಿಗಣಿಸುವುದೇ ಇಲ್ಲ ಎಂಬುದೇ ಬೇಸರ.

ಇದನ್ನೂ ಓದಿ
Image
ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡೋ ಇನ್​ಫ್ಲ್ಯುಯೆನ್ಸ್​ರಗಳಿಗೆ ನೋಟಿಸ್
Image
‘ಕೊಳಕು ಅಂಟದ ಬಿಳಿ ಹಾಳೆ’; ಧನುಗೆ ಪತ್ರ ಬರೆದು ವಿಶ್ ತಿಳಿಸಿದ ತ್ರಿವಿಕ್ರಂ
Image
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
Image
ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್; ರವಿಚಂದ್ರನ್ ಬೇಸರ

ನಿತ್ಯಾ ಮೆನನ್ ಅವರಿಗೆ ಕನ್ನಡ ಬರೋದಿಲ್ಲ  ಎಂದು ಭಾವಿಸಿದವರೇ ಹೆಚ್ಚು. ಆದರೆ, ಅವರು ತಮ್ಮ ಸ್ಪಷ್ಟ ಕನ್ನಡದಿಂದ ಎಲ್ಲರಿಗೂ ಇಷ್ಟ ಆಗುತ್ತಾರೆ. ಇನ್ನು ನಿತ್ಯಾ ಅವರ ಸರ್​ ನೇಮ್ ಬಗ್ಗೆಯೂ ಒಂದು ಅಚ್ಚರಿಯ ವಿಚಾರ ಇದೆ. ಅವರ ಹೆಸರು ಎನ್ಎಸ್ ನಿತ್ಯಾ ಎಂದು ಇತ್ತು. ಅದು ಬೇಡ ಎಂದು ಬೇರೆ ಇಡಬೇಕು ಎಂದುಕೊಂಡರು. ಅವರೇ ನ್ಯುಮರಲಾಜಿ ಕಲಿತರು. ಅದರ ಪ್ರಕಾರ MENE ಎಂದು ಅವರು ಮಾಡಿಕೊಂಡರಂತೆ. ಆದರೆ, ಈಗ ಎಲ್ಲರೂ ಮೆನನ್ ಎನ್ನುತ್ತಾರೆ. ಮೆನನ್ ಎಂಬುದನ್ನೇ ಅವರು ಫೈನಲ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಎಷ್ಟೇ ಟ್ರಾಫಿಕ್ ಆದರೂ ಬೆಂಗಳೂರೇ ಬೆಸ್ಟ್’; ಕಾರಣ ವಿವರಿಸಿದ ನಿತ್ಯಾ ಮೆನನ್

ನಿತ್ಯಾ ಮೆನನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ಕನ್ನಡದಲ್ಲೂ ಸಿನಿಮಾಗಳನ್ನು ಮಾಡಿದ್ದಾರೆ. ತಮಿಳಿನ ‘ತಿರುಚಿತ್ರಂಬಲಂ’ ಸಿನಿಮಾದ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಅವರು ಇತ್ತೀಚೆಗೆ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ‘ಕೋಟಿಗೊಬ್ಬ 2’ ಸಿನಿಮಾದಲ್ಲಿ ಅವರು ಸುದೀಪ್​ ಅವರಿಗೆ ಜೊತೆಯಾಗಿದ್ದರು. ಅವರು ಮತ್ತೆ ಕನ್ನಡ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಆದರೆ, ಅದು ಸಾಧ್ಯವಾಗಿಲ್ಲ. ಅವರು ಸದ್ಯ ‘ಇಡ್ಲಿ ಕಡಾಯಿ’ ಹಾಗೂ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Tue, 8 April 25

ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ