‘ಎಷ್ಟೇ ಟ್ರಾಫಿಕ್ ಆದರೂ ಬೆಂಗಳೂರೇ ಬೆಸ್ಟ್’; ಕಾರಣ ವಿವರಿಸಿದ ನಿತ್ಯಾ ಮೆನನ್
ನಿತ್ಯಾ ಮೆನನ್ ಅವರು ಬೆಂಗಳೂರಿನ ಬಗ್ಗೆ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸೌಂದರ್ಯ ಮತ್ತು ವಾತಾವರಣವನ್ನು ಹೊಗಳಿದ ಅವರು, ಇಲ್ಲಿಯೇ ನೆಲೆಸಿರುವುದರ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಬೆಂಗಳೂರು ತಮ್ಮ ಹೃದಯಕ್ಕೆ ಹತ್ತಿರವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನವರಾಗಿದ್ದುಕೊಂಡೇ ಬೆಂಗಳೂರಿಗೆ ಬೈದವರು ಅನೇಕರು ಇದ್ದಾರೆ. ಅನೇಕ ಸೆಲೆಬ್ರಿಟಿಗಳು ಬೆಂಗಳೂರಿನ ಬಗ್ಗೆ ಅಪಸ್ವರ ತೆಗೆದ ಉದಾಹರಣೆ ಇದೆ. ಆದರೆ, ಕೆಲವರಿಗೆ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ ಎಂದೇ ಹೇಳಬಹುದು. ಅದರಲ್ಲಿ ನಿತ್ಯಾ ಮೆನನ್ ಕೂಡ ಒಬ್ಬರು. ಬೆಂಗಳೂರಿನವರೇ ಆದರ ಅವರಿಗೆ ಈ ನಗರದ ಬಗ್ಗೆ ವಿಶೇಷ ಪ್ರೀತಿ ಇದೆ ಎಂದು ಹೇಳಬಹುದು. ಅದಕ್ಕೆ ಹೊಸ ಉದಾಹರಣೆ ಒಂದು ಸಿಕ್ಕಿದೆ. ಅವರು ಬೆಂಗಳೂರು ನಗರವನ್ನು ಮನಸಾರೆ ಹೊಗಳಿದ್ದಾರೆ. ಇದೇ ನಗರದಲ್ಲಿ ತಾವು ಉಳಿದುಕೊಳ್ಳೋದು ಎಂದು ಹೇಳಿಕೊಂಡಿದ್ದಾರೆ.
ನಿತ್ಯಾ ಮೆನನ್ ಅವರು ಕರ್ನಾಕದವರು. ಅವರಿಗೆ ಕರ್ನಾಟಕದ ಬಗ್ಗೆ ಹಾಗೂ ಇಲ್ಲಿನ ಭಾಷೆಯ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಪ್ರೀತಿಯನ್ನು ಅವರು ಅನೇಕ ಬಾರಿ ಹೊಗಳಿದ್ದಾರೆ. ಅವರು ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ. ಅವರಿಗೆ ಬರೆಯಲು ಹಾಗೂ ಓದಲು ಬರುವ ಏಕೈಕ ಭಾಷೆ ಎಂದರೆ ಅದು ಕನ್ನಡ. ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ಬೆಂಗಳೂರಿನ ಕುರಿತು, ಇಲ್ಲಿನ ವಾತಾವರಣದ ಕುರಿತು ಹಾಗೂ ಅವರ ಬಗ್ಗೆ ಇರುವ ತಮ್ಮ ಪ್ರೀತಿಯ ಬಗ್ಗೆ ಅವರು ಬಾಯ್ತುಂಬ ಹೊಗಳಿದ್ದಾರೆ.
View this post on Instagram
‘ಬೆಂಗಳೂರನ್ನು ನಾನು ಪ್ರೀತಿಸುತ್ತೇನೆ. ನೀವು ಕೇರಳದವರ ಎಂದು ಕೇಳಿದಾಗ ಇಲ್ಲ ನಾನು ಬೆಂಗಳೂರಿನವಳು ಎಂದು ಹೆಮ್ಮೆಯಿಂದ ಹೇಳುತ್ತೇನೆ. 90ರ ದಶಕದಲ್ಲಿ ಸುಂದರವಾದ ಊರಾಗಿತ್ತು. ಇಷ್ಟೆಲ್ಲ ಟ್ರಾಫಿಕ್ ಇರಲಿಲ್ಲ. ನಿಜವಾಗಲೂ ಗಾರ್ಡನ್ ಸಿಟಿ ಆಗಿತ್ತು. ಬೆಂಗಳೂರನ್ನು ಬಿಟ್ಟು ಬೇರೆ ಎಲ್ಲೂ ಉಳಿದುಕೊಳ್ಳಲು ಸಾಧ್ಯವಿಲ್ಲ. ಎಷ್ಟೇ ಜನರು ಇದ್ದರೂ ಬೆಂಗಳೂರಿನದ್ದೇ ಉತ್ತಮ ವಾತಾವರಣ. ಈ ನಗರವೇ ಬೆಸ್ಟ್’ ಎಂದು ಅವರು ಬೆಂಗಳೂರನ್ನು ಬಾಯ್ತುಂಬ ಹೊಗಳಿದ್ದಾರೆ.
ಇದನ್ನೂ ಓದಿ: ನಿತ್ಯಾ ಮೆನನ್ ವರ್ತನೆ ಬಗ್ಗೆ ತೀವ್ರ ಟೀಕೆ, ಅಂಥಹದ್ದೇನು ಮಾಡಿದರು ನಟಿ?
ನಿತ್ಯಾ ಮೆನನ್ ಅವರು ಅನೇಕ ಮಲಾಯಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ, ಮಲಾಯಳಂ ಭಾಷೆಯನ್ನು ಅವರು ಮಾತನಾಡ ಬಲ್ಲರು. ಈ ಕಾರಣಕ್ಕೆ ಅವರು ಮಲಯಾಳಂ ನಟಿ ಎಂದು ಅನೇಕರು ಭಾವಿಸಿದ್ದು ಇದೆ. ಆದರೆ, ಇದು ಸುಳ್ಳು. ಅವರು ಕನ್ನಡದವರು. ಇದನ್ನು ಕೂಡ ಹೇಳಿದ್ದರು. ‘ನಾನು ಕನ್ನಡತಿ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು. ನಿತ್ಯಾ ಮೆನನ್ ಅವರಿಗೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ ಅನ್ನೋದು ವಿಶೇಷ. ಇತ್ತೀಚೆಗೆ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



