ತಾಯಿಗಾಗಿ ವಿಶೇಷ ಹಾಡು ಬರೆದ ಬಾಳು ಬೆಳಗುಂದಿ; ಕೇಳಿ ಜಡ್ಜ್ಗಳೇ ಭಾವುಕ
ಸರಿಗಮಪ ಕಾರ್ಯಕ್ರಮದಲ್ಲಿ ಬಾಳು ಬೆಳಗುಂದಿ ಅವರು ತಮ್ಮ ತಾಯಿಯ ಬಗ್ಗೆ ಬರೆದ ಭಾವುಕ ಹಾಡನ್ನು ಹಾಡಿದ್ದು ಜಡ್ಜ್‌ಗಳನ್ನು ಭಾವುಕರನ್ನಾಗಿಸಿತು. ಕುರಿ ಕಾಯುವ ಕೆಲಸ ಮಾಡಿದ್ದ ಅವರು 8 ಲಕ್ಷ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ. ತಮ್ಮ ಸಂಗೀತ ಪ್ರತಿಭೆಯ ಮೂಲಕ ಜನರ ಮನಗೆದ್ದಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸರಿಗಮಪ’ ಶೋ ಅನೇಕ ಕಲಾವಿದರಿಗೆ ವೇದಿಕೆ ಆಗಿದೆ. ಈ ಶೋನ ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ. ಈ ವೇದಿಕೆ ಮೂಲಕ ಅನೇಕ ಉತ್ತರ ಕರ್ನಾಟಕ ಪ್ರತಿಭೆಗಳು ಬೆಳಕಿಗೆ ಬಂದಿವೆ. ಈ ಪೈಕಿ ಹನುಮಂತ ಮೊದಲಾದವರು ಇದ್ದಾರೆ. ಈಗ ಈ ಸಾಲಿಗೆ ಬಾಳು ಬೆಳಗುಂದಿ ಕೂಡ ಸೇರ್ಪಡೆ ಆಗಿದ್ದಾರೆ. ಮೊದಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಅವರು ಈಗ ಮತ್ತಷ್ಟು ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.
ಬಾಳು ಬೆಳಗುಂದಿ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 8 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಹಾಡುಗಳನ್ನು ಹಾಡುವುದರ ಜೊತೆಗೆ ವಿಶೇಷ ಹಾಡುಗಳನ್ನು ಕೂಡ ಬರೆಯುತ್ತಾರೆ. ಇದು ಅವರ ಸ್ಪೆಷಾಲಿಟಿ. ಅವರು ಕಟ್ಟುವ ಹಾಡಿಗೆ ಅನೇಕರು ಇಷ್ಟ ಆಗಿದೆ. ಈಗ ಬಾಳು ಬೆಳಗುಂದಿ ಅವರು ತಾಯಿ ಬಗ್ಗೆ ಬರೆದ ಹಾಡನ್ನು ‘ಸರಿಗಮಪ’ ಜಡ್ಜ್ಗಳು ಇಷ್ಟಪಟ್ಟಿದ್ದಾರೆ.
ಬಾಳು ಬೆಳಗುಂದಿ ಅವರ ಜೊತೆ ವಿಜಯ್ ಪ್ರಕಾಶ್ ಮಾತನಾಡಿದರು. ತಾಯಿ ಬಗ್ಗೆ ಹಾಡನ್ನು ಬರೆಯಲಾಗಿದೆಯೇ ಎಂದು ಅವರಿಗೆ ಕೇಳಲಾಯಿತು. ಈ ವೇಳೆ ಹೌದು ಎನ್ನುವ ಉತ್ತರ ಬಾಳು ಬೆಳಗುಂದಿ ಕಡೆಯಿಂದ ಬಂತು. ಅಲ್ಲದೆ, ಸುಮಧುರವಾಗಿ ಅವರು ಹಾಡನ್ನು ಹಾಡಿದರು.
View this post on Instagram
‘ಎರಡು ಮೂರು ವರ್ಷಗಳ ಹಿಂದೆ ಹಾಡೊಂದನ್ನು ಬರೆದೆ. ನನ್ನ ತಾಯಿಯನ್ನು ನೋಡಿ ಬರೆದ ಹಾಡು ಇದು. ನಾವು ಎಷ್ಟೇ ನೋವು ಕೊಟ್ಟರೂ ಅವರು ನನಗೆ ನೋವು ಕೊಟ್ಟಿಲ್ಲ. ಈ ವಿಷಯವನ್ನು ಆಧರಿಸಿ ಬರೆದ ಹಾಡು ಇದು’ ಎಂದು ಬಾಳು ಬೆಳಗುಂದಿ ಅವರು ವಿವರಿಸಿದರು.
ಇದನ್ನೂ ಓದಿ: ಶೂಟಿಂಗ್ ವೇಳೆ ದರ್ಶನ್ ಡೆಡಿಕೇಷನ್ ಎಂಥದ್ದು? ವಿವರಿಸಿದ ಸಾಧು ಕೋಕಿಲ
ಬಾಳು ಬೆಳಗುಂದಿ ಹಾಡಿದ ಹಾಡಿನಿಂದ ಜಡ್ಜ್ಗಳು ಭಾವುಕರಾದರು. ಅವರು ಚಪ್ಪಾಳೆ ತಟ್ಟಿದರು. ಇದರ ಸಂಪೂರ್ಣ ಎಪಿಸೋಡ್ ಶನಿವಾರ (ಫೆಬ್ರವರಿ 22) ಹಾಗೂ ಭಾನುವಾರ (ಫೆಬ್ರವರಿ 23) ಪ್ರಸಾರ ಕಾಣಲಿದೆ. ಬಾಳು ಬೆಳಗುಂದಿ ಅವರು ಹುಟ್ಟಿದ್ದು ಹಾವೇರಿಯಲ್ಲಿ. ಅವರು ಕುರಿ ಕಾಯುವ ಕೆಲಸ ಮಾಡಿದವರು. ಈಗ ಹಾಡಿನ ಮೂಲಕ ಕರ್ನಾಟಕದ ಜನತೆಗೆ ಇಷ್ಟ ಆಗುತ್ತಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.