ಶೂಟಿಂಗ್ ವೇಳೆ ದರ್ಶನ್ ಡೆಡಿಕೇಷನ್ ಎಂಥದ್ದು? ವಿವರಿಸಿದ ಸಾಧು ಕೋಕಿಲ
ಸಾಧು ಕೋಕಿಲ ಅವರು ಜೀ ಕನ್ನಡದಲ್ಲಿ "ಸುಂಟರಗಾಳಿ" ಚಿತ್ರದ ಹಾಡಿನ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅವರು ಚಾಮುಂಡಿ ಬೆಟ್ಟದಲ್ಲಿ ಸಂಜೆಯಿಂದ ರಾತ್ರಿಯವರೆಗೆ ಒಂದೇ ದೃಶ್ಯಕ್ಕಾಗಿ ಕುಳಿತಿದ್ದರು ಎಂದು ಹೇಳಿದ್ದಾರೆ. ಈ ದೃಶ್ಯಕ್ಕಾಗಿ ಯಾವುದೇ ಗ್ರಾಫಿಕ್ಸ್ ಬಳಸಿಲ್ಲ ಎಂಬುದು ವಿಶೇಷ. ಸಾಧು ಕೋಕಿಲ ಅವರು ದರ್ಶನ್ ಅವರೊಂದಿಗೆ ಹೊಂದಿರುವ ಆತ್ಮೀಯ ಸಂಬಂಧವನ್ನು ಕೂಡಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ದರ್ಶನ್ ಅವರು ಸಿನಿಮಾ ಮಾಡೋದರಲ್ಲಿ ಸಖತ್ ಪರ್ಫೆಕ್ಟ್. ಪ್ರತಿ ದೃಶ್ಯಗಳು ಹೀಗೆಯೇ ಬರಬೇಕು ಎಂದರೆ ಹಾಗೆಯೇ ಬರಬೇಕು ಎಂದು ಆಶಿಸುತ್ತಾರೆ. ಇದಕ್ಕೆ ಹೊಸ ಉದಾಹರಣೆ ಒಂದು ಸಿಕ್ಕಿದೆ. ಜೀ ಕನ್ನಡ ವೇದಿಕೆ ಮೇಲೆ ದರ್ಶನ್ ನಟನೆಯ ಸಿನಿಮಾ ಹಾಡನ್ನು ಹಾಡಲಾಯಿತು. ಈ ವೇಳೆ ಹಾಡಿನ ಹಿನ್ನೆಲೆ ಮತ್ತು ಹಾಡಿನ ಕಥೆ ಏನು ಎಂಬುದನ್ನು ಸಾಧು ಕೋಕಿಲ ಅವರು ವಿವರಿಸಿದರು.
ಹಾವೇರಿಯ ಬಾಳು ಬೆಳಗುಂದಿ ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಏರಿದರು. ಅವರು ದರ್ಶನ್ ಹಾಗೂ ರಕ್ಷಿತಾ ಅವರು ನಟಿಸಿದ ‘ಸುಂಟರಗಾಳಿ’ ಚಿತ್ರದ ‘ನೀನ್ ನನ್ನಟ್ಟಿ ಬೆಳ್ಕಂಗಿದ್ದೆ ನಂಜು’ ಹಾಡನ್ನು ಹಾಡಿದರು. ಈ ಹಾಡು ಆ ಸಮಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಈ ಹಾಡಿನ ಒಂದು ದೃಶ್ಯದ ಬಗ್ಗೆ ಸಾಧು ಕೋಕಿಲ ಮಾತನಾಡಿದ್ದಾರೆ. ಈ ಚಿತ್ರಕ್ಕೆ ಸಾಧು ಕೋಕಿಲ ಅವರೇ ಸಂಗೀತ ಮಾಡಿದ್ದರು.
ಬೆಟ್ಟದ ಮೇಲೆ ಕುಳಿತು ಇರುವ ದೃಶ್ಯ ಇದಾಗಿದೆ. ನೋಡುತ್ತಾ ಇದ್ದಂತೆ ಸಂಜೆ ಎಂಬುದು ರಾತ್ರಿ ಆಗುತ್ತದೆ. ಈ ದೃಶ್ಯಕ್ಕೆ ‘ಹಗಲೋಡುತ್ತೆ ರಾತ್ರಿ ಬಂತಂದ್ ಅಂಜಿ, ರಾತ್ರೆ ಮುಗ್ದೋದ್ರೆ ಹಗಲೇ ಅಲ್ವ ನಂಜಿ’ ಎಂಬ ಸಾಲು ಬರುತ್ತದೆ. ಈ ಸಾಲುಗಳ ಹಿನ್ನೆಲೆ ವಿವರಿಸಿದ್ದಾರೆ ಶೂಟ್ ಮಾಡಲಾಯಿತು ಎಂಬುದನ್ನು ಸಾಧು ಕೋಕಿಲ ವಿವರಿಸಿದ್ದಾರೆ.
View this post on Instagram
‘ಇದಕ್ಕೆ ನಾನೇ ಕೊರಿಯೋಗ್ರಾಫರ್. ಇದಕ್ಕೆ ಡ್ಯಾನ್ಸ್ ಮಾಸ್ಟರ್ ಇಲ್ಲ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದರ್ಶನ್ನ ಸಂಜೆ ನಾಲ್ಕು ಗಂಟೆಗೆ ಕಟ್ಟೆ ಮೇಲೆ ಕೂರಿಸಲಾಯಿತು. ಹಗಲೋಡುತ್ತೆ ರಾತ್ರಿ ಬಂತಂದ್ ಅಂಜಿ ಎಂಬುದನ್ನು ಅಷ್ಟೇ ಹಾಡಿಸಿದೆವು. ರಾತ್ರಿ, 7 ಗಂಟೆವರೆಗೂ ಹಾಗೆಯೇ ಕುಳಿತಿದ್ದರು. ಅಲ್ಲಿವರೆಗೆ ಶಾಟ್ ಓಡ್ತಾನೆ ಇತ್ತು. ಕತ್ತಲಾಗೋದನ್ನು ಗ್ರಾಫಿಕ್ಸ್ನಲ್ಲಿ ಮಾಡಿಲ್ಲ’ ಎಂದರು ಸಾಧು ಕೋಕಿಲ. ಈ ಮೂಲಕ ಹಾಡಿನ ಹಿನ್ನೆಲೆ ಏನು ಎಂಬುದನ್ನು ಅವರು ವಿವರಿಸಿದರು.
ಇದನ್ನೂ ಓದಿ: ‘ಉಪೇಂದ್ರ ಇಲ್ಲ ಅಂದ್ರೆ ನಾನಿಲ್ಲ’; ಅವಾರ್ಡ್ ಪಡೆದು ಗುರುವ ನೆನೆದ ಸಾಧು ಕೋಕಿಲ
ಸಾಧು ಕೋಕಿಲ ಅವರು ದೊಡ್ಡ ದರ್ಶನ್ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾಗ ಅವರನ್ನು ಭೇಟಿ ಮಾಡಲು ತೆರಳಿದ್ದರು. ಮೊದಲ ಬಾರಿ ಭೇಟಿ ಸಾಧ್ಯ ಆಗಿರಲಿಲ್ಲ. ಆ ಬಳಿಕ ಮರುವಾರ ಮತ್ತೆ ಬಂದು ದರ್ಶನ್ನ ಭೇಟಿ ಮಾಡಿಯೇ ತೆರಳಿದ್ದರು ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.