‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದವರು. ಅವರಿಗೆ ಇತ್ತೀಚೆಗೆ ಕ್ಯಾನ್ಸರ್ ಆಯಿತು. ಇದರಿಂದ ಅವರು ಸಾಕಷ್ಟು ಅನುಭವಿಸಬೇಕಾಗಿ ಬಂತು. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಅವರು ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟ ಹೇಗಿದೆ ಎಂದು ವಿವರಿಸಿದ್ದಾರೆ.
ಸುದೀಪ್ ಅವರಿಗೆ ಶಿವಣ್ಣನ ಕಂಡರೆ ವಿಶೇಷ ಗೌರವ. ಶಿವರಾಜ್ಕುಮಾರ್ಗೆ (Shivarajkumar) ಕ್ಯಾನ್ಸರ್ ಆಗಿದೆ ಎಂದಾಗ ಸುದೀಪ್ ಆತಂಕಗೊಂಡಿದ್ದರು. ಶಿವಣ್ಣ ಅಮೆರಿಕಕ್ಕೆ ತೆರಳುವ ಮೊದಲು ಮನೆಗೆ ಭೇಟಿ ನೀಡಿ ಸುದೀಪ್ ಅವರು ಧೈರ್ಯ ತುಂಬಿದ್ದರು. ಈಗ ಅವರಿಟ್ಟಿರೋ ಪ್ರೀತಿ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ‘ಸುದೀಪ್ಗೆ ನನ್ನ ಮೇಲೆ ಪ್ರೀತಿ ಇದೆ. ಗೀತಕ್ಕನ ಮೇಲೆ ವಿಶೇಷ ಗೌರವ ಇದೆ. ಕೆಲವು ಸಣ್ಣ-ಪುಟ್ಟ ಮನಸ್ತಾಪ ಆಗುತ್ತದೆ. ಆದರೆ, ವೈರತ್ವ ಬೆಳೆದಿಲ್ಲ. ನನಗೆ ಸಿನಿಮಾ ಡೈರೆಕ್ಷನ್ ಮಾಡ್ತೀನಿ ಅಂತಿದ್ರು. ಆದರೆ, ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ದಿ ವಿಲನ್ ಮಾಡಿದೆವು. ಕೆಸಿಸಿನಲ್ಲಿ ಒಟ್ಟಿಗೆ ಆಡಿದೆವು. ಮನೆಗೆ ಬಂದಾಗ ಖುಷಿಯಿಂದ ಮಾತನಾಡುತ್ತಾರೆ. ನೋಡೋಕೆ ಬಂದಾಗ ಭಾವುಕರಾದರು’ ಎಂದಿದ್ದಾರೆ ಶಿವರಾಜ್ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.