ಸಾಯಿ ಪಲ್ಲವಿ ತುಂಡುಡುಗೆ ಹಾಕಲ್ಲ ಏಕೆ? ಕಾರಣವಾಗಿತ್ತು ಆ ಘಟನೆ
Sai Pallavi: ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ಸಾಯಿ ಪಲ್ಲವಿ. ಅವರ ನಟನೆ, ನೃತ್ಯ ಪ್ರತಿಭೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸಾಯಿ ಪಲ್ಲವಿಯ ವಿಶೇಷತೆಯೆಂದರೆ ಯಾವುದೇ ಸಿನಿಮಾದಲ್ಲಿ ಅವರು ತುಂಡುಡುಗೆ ತೊಡುವುದಿಲ್ಲ. ಅದಕ್ಕೆ ಕಾರಣವನ್ನು ಅವರೇ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ದಕ್ಷಿಣದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ‘ರಾಮಾಯಣ’ (Ramayana) ಸಿನಿಮಾದಿಂದ ಅವರ ಜರ್ನಿ ಬಾಲಿವುಡ್ನಲ್ಲೂ (Bollywood) ಆರಂಭ ಆಗಿದೆ ಅನ್ನೋದು ಅನೇಕರಿಗೆ ಗೊತ್ತಿದೆ. ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಸಿನಿಮಾಗಳ ಆಯ್ಕೆ ಎನ್ನಬಹುದು. ಸಾಯಿ ಪಲ್ಲವಿ ಎಂದಿಗೂ ದೇಹ ಕಾಣುವ ರೀತಿ ಬಟ್ಟೆ ಹಾಕುವುದಿಲ್ಲ. ಸಾಂಪ್ರದಾಯಿಕ ಉಡುಗೆಯಲ್ಲಿ ಅವರು ಮಿಂಚುತ್ತಾರೆ. ಇದಕ್ಕೆ ಕಾರಣವೂ ಇದೆ. ಅವರ ಜೀವನದಲ್ಲಿ ನಡೆದ ಒಂದು ಘಟನೆಯೇ ಇದಕ್ಕೆ ಕಾರಣವಂತೆ.
ಸಿನಿಮಾಗಳಲ್ಲಿ ಕಿಸ್ ದೃಶ್ಯ, ಸಣ್ಣ ಬಟ್ಟೆ ಹಾಕೋದು ಕಾಮನ್. ಹಾಗಿದ್ದರೆ ಮಾತ್ರ ಹೀರೋಯಿನ್ ಆಗೋಕೆ ಸಾಧ್ಯ ಎಂಬುದು ಅನೇಕರ ನಂಬಿಕೆ. ಸಾಯಿ ಪಲ್ಲವಿ ಇದಕ್ಕಿಂತ ಭಿನ್ನವಾದವರು. ಅವರು ಇದೆರಡನ್ನೂ ಮಾಡೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಮೇಕಪ್ ಕೂಡ ಮಾಡುವುದಿಲ್ಲ. ಹಳೆಯ ಸಂದರ್ಶನ ಒಂದರಲ್ಲಿ ಬಟ್ಟೆ ಬಗ್ಗೆ ಅವರು ಹೇಳಿಕೊಂಡಿದ್ದರು.
ಸಾಯಿ ಪಲ್ಲವಿ ಅವರು ಆಗ ಜಾರ್ಜಿಯಾದಲ್ಲಿ ವಿದ್ಯಾರ್ಥಿನಿ ಆಗಿದ್ದರು. ಆಗ ಟಾಂಗೋ ಡ್ಯಾನ್ಸ್ ಮಾಡಲು ಶಾರ್ಟ್ ಡ್ರೆಸ್ ಹಾಕಿಕೊಳ್ಳಬೇಕಿತ್ತು. ಇದನ್ನು ಹಾಕಲು ಅವರು ಪಾಲಕರಿಂದ ಒಪ್ಪಿಗೆ ಕೂಡ ಪಡೆದರು. ಅವರು ಸಣ್ಣ ಬಟ್ಟೆ ಹಾಕಿ ಡ್ಯಾನ್ಸ್ ಕೂಡ ಮಾಡಿದರು. ಆದರೆ, ಎಲ್ಲರೂ ಅವರ ಪರ್ಫಾರ್ಮೆನ್ಸ್ ನೋಡೋದನ್ನು ಬಿಟ್ಟು ಬಟ್ಟೆ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿದರು.
ಇದನ್ನೂ ಓದಿ:‘ಯಲ್ಲಮ್ಮ’ ಸಿನಿಮಾದಿಂದ ಹೊರನಡೆದ ಸಾಯಿ ಪಲ್ಲವಿ, ಕಾರಣವೇನು?
‘ಜನರು ವಿಡಿಯೋನ ಪಾಸ್ ಮಾಡಿ ನನ್ನ ಬಟ್ಟೆ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿದರು. ನನಗೆ ಅದು ಹಿತಕರ ಅನಿಸಲೇ ಇಲ್ಲ. ಅಂದಿನಿಂದ ನಾನು ಆ ರೀತಿ ಬಟ್ಟೆ ಧರಿಸಲೇ ಇಲ್ಲ’ ಎಂದು ಅವರು ಹೇಳಿದ್ದಾರೆ. ಸಾಯಿ ಪಲ್ಲವಿ ಅವರು ಸಿನಿಮಾ ಒಪ್ಪಿಕೊಳ್ಳುವಾಗಲೂ ತಮಗೆ ಹೊಂದಾಣಿಕೆ ಆಗೋ ಪಾತ್ರವನ್ನು ಮಾತ್ರ ಆಯ್ಕೆ ಮಾಡುತ್ತಾರೆ. ‘ಆ ಘಟನೆ ಬಳಿಕ ನಾನು ಬಟ್ಟೆಗಳ ಆಯ್ಕೆಯಲ್ಲಿ ಚ್ಯೂಸಿ ಆದೆ. ಏನನ್ನೋ ಮಾಡಿ ನಂತರ ಅದರ ಬಗ್ಗೆ ಬೇಸರ ಆಗೋದು ಬೇಡ. ನಮ್ಮ ಬಟ್ಟೆ ನೋಡಿ ವ್ಯಕ್ತಿಯ ಕ್ಯಾರೆಕ್ಟರ್ ಅಳೆಯಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ಸಾಯಿ ಪಲ್ಲವಿ ನಟನೆಯ ‘ಅಮರನ್’ ಹಾಗೂ ‘ತಂಡೇಲ್’ ಚಿತ್ರಗಳು ಗೆದ್ದು ಬೀಗಿವೆ. ಇದರಿಂದ ಸಾಯಿ ಪಲ್ಲವಿಗೆ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ಸಿಕ್ಕಿದೆ. ಸಾಯಿ ಪಲ್ಲವಿ ಅವರು ಸದ್ಯ ಹಿಂದಿಯ ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ರಾಮನ ಪಾತ್ರ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ