ಟಾಲಿವುಡ್ಗೆ ಧರ್ಮ ಕೀರ್ತಿರಾಜ್; ಅಪ್ಸರೆಯ ಜೊತೆ ಸಿನಿಮಾ
ಧರ್ಮ ಕೀರ್ತಿರಾಜ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ಅವರ ಅದೃಷ್ಟ ಖುಲಾಯಿಸಿದೆ. ಅವರಿಗೆ ಈಗ ತೆಲುಗಿನಲ್ಲಿ ಸಿನಿಮಾ ಆಫರ್ ಬಂದಿದೆ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಸರಾ ರಾಣಿ ಈ ಚಿತ್ರಕ್ಕೆ ನಾಯಕಿ.
Updated on: Apr 03, 2025 | 11:50 AM

ಧರ್ಮ ಕೀರ್ತಿ ರಾಜ್ ಅವರು ಈಗ ಟಾಲಿವುಡ್ಗೆ ಕಾಲಿಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಇದು ಅವರು ನಟಿಸುತ್ತಿರುವ ಮೊದಲು ತೆಲುಗು ಸಿನಿಮಾ ಅನ್ನೋದು ವಿಶೇಷ. ಅವರಿಗೆ ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ಇದೆ.

ಟಾಲಿವುಡ್ನಲ್ಲಿ ಹಲವು ಬೋಲ್ಡ್ ಪಾತ್ರಗಳನ್ನು ಮಾಡಿದವರು ಅಪ್ಸರಾ ರಾಣಿ. ಅವರು ಈಗ ಸಾಮಾನ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ರೀತಿಯ ಪಾತ್ರಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ಧರ್ಮ ಕೀರ್ತಿರಾಜ್ ಅವರು ಅಪ್ಸರಾ ಜೊತೆ ಪೋಸ್ ಕೊಟ್ಟಿದ್ದಾರೆ. ಧರ್ಮ ಹಾಗೂ ಅಪ್ಸರಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ‘ಬ್ಲಡ್ ರೋಸಸ್’ ಎನ್ನುವ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದೆ. ಟೈಟಲ್ ಮೂಲಕವೇ ಸಿನಿಮಾ ಗಮನ ಸೆಳೆದಿದೆ.

ಅಪ್ಸರಾ ರಾಣಿ ಅವರು 2019ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. 2022ರಲ್ಲಿ ರಿಲೀಸ್ ಆದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಸಿನಿಮಾದಲ್ಲಿ ಅಪ್ಸರಾ ನಟಿಸಿದರು. ಈ ಚಿತ್ರದಲ್ಲಿ ಅವರಿಗೆ ಭರ್ಜರಿ ಬೋಲ್ಡ್ ಪಾತ್ರ ಸಿಕ್ಕಿತ್ತು. ರಾಮ್ ಗೋಪಾಲ್ ವರ್ಮಾ ಜೊತೆ ಇವರಿಗೆ ಒಳ್ಳೆಯ ಒಡನಾಟ ಇದೆ.

ಅಪ್ಸರಾ ರಾಣಿ ಈಗ ಬೋಲ್ಡ್ ದೃಶ್ಯಗಳನ್ನು ಮಾಡದೇ ಇರಲು ನಿರ್ಧರಿಸಿದಂತೆ ಇದೆ. ಅವರು ಸಾಮಾನ್ಯ ಚಿತ್ರಗಳನ್ನು ಒಪ್ಪಿ ನಟಿಸುತ್ತಾ ಇದ್ದಾರೆ. ಅಪ್ಸರಾ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಕನ್ನಡದ ಹೀರೋ ಜೊತೆ ಅವರು ಈಗ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಅನ್ನೋದು ವಿಶೇಷ.
























