ಹನುಮಂತ-ಬಾಳು ಬೆಳಗುಂದಿ ಭೇಟಿ; ಎರಡು ದೇಸಿ ಪ್ರತಿಭೆಗಳ ಸಮಾಗಮ
ಹನುಮಂತ ಲಮಾಣಿ ಅವರು ‘ಸರಿಗಮಪ’ ವೇದಿಕೆ ಮೂಲಕ ಗಮನ ಸೆಳೆದವರು. ಅವರು ಉತ್ತರ ಕರ್ನಾಟಕ ಪ್ರತಿಭೆ. ಅವರು ಬಿಗ್ ಬಾಸ್ ಗೆದ್ದು ಭೇಷ್ ಎನಿಸಿಕೊಂಡಿದ್ದಾರೆ. ಅದೇ ರೀತಿ ಬಾಳು ಬೆಳಗುಂದಿ ಕೂಡ ‘ಸರಿಗಮಪ’ ವೇದಿಕೆ ಏರಿದ್ದಾರೆ. ಇವರಿಬ್ಬರ ಸಮಾಗಮ ಆಗಿದೆ ಅನ್ನೋದು ವಿಶೇಷ.
Updated on: Apr 03, 2025 | 8:44 AM

ಹನುಮಂತ ಲಮಾಣಿ ಹಾಗೂ ಬಾಳು ಬೆಳಗುಂದಿ ಅವರು ಒಂದೆಡೆ ಸೇರಿದ್ದಾರೆ. ಈ ಫೋಟೋಗಳನ್ನು ಬಾಳು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇವರನ್ನು ಒಟ್ಟಾಗಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಹನುಮಂತ ಲಮಾಣಿ ಅವರು ಹಾವೇರಿ ಅವರು. ಅವರ ಬದುಕು ಬದಲಿಸಿದ್ದು ‘ಸರಿಗಮಪ’ ವೇದಿಕೆ. ಒಂದೊಳ್ಳೆಯ ವೇದಿಕೆಯನ್ನು ಅವರು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡರು. ಬಿಗ್ ಬಾಸ್ ಗೆದ್ದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬಾಳು ಬೆಳಗುಂದಿ ಅವರು ಈಗ ‘ಸರಿಗಮಪ’ ವೇದಿಕೆ ಏರಿದ್ದಾರೆ. ಅವರು ಮೊದಲೇ ಜನಪ್ರಿಯತೆ ಪಡೆದವರು. ಈಗ ಜೀ ಕನ್ನಡ ವೇದಿಕೆ ಏರುವ ಮೂಲಕ ಅವರ ಅಭಿಮಾನಿ ಬಳಗ ಮತ್ತಷ್ಟು ಹಿರಿದಾಗಿದೆ. ಅವರ ಪರಿಚಯ ಹಲವರಿಗೆ ಆಗಿದೆ.

ಬಾಳು ಬೆಳಗುಂದಿ ಮೂಲತಃ ಹಾವೇರಿ ಜಿಲ್ಲೆಯವರು. ಇವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಜನಪದ ಹಾಡುಗಳನ್ನು ಬರೆದು, ಅವುಗಳನ್ನು ಹಾಡುತ್ತಾರೆ. ಈ ಮೂಲಕ ಅವರು ಎಲ್ಲರಿಗೂ ಇಷ್ಟ ಆಗುತ್ತಾರೆ. ಅವರು ನೂರಾರು ಹಾಡುಗಳನ್ನು ಬರೆದು ಹಾಡಿದ್ದಾರೆ.

ಹನುಮಂತ ಕೂಡ ಹಾವೇರಿ ಜಿಲ್ಲೆಯವರು. ಅವರ ಕುರಿ ಕಾಯುವ ಕಾಯಕ ಮಾಡಿಕೊಂಡಿದ್ದರು. ‘ಬಿಗ್ ಬಾಸ್’ ಅವರ ಬದುಕು ಬದಲಿಸಿದೆ. ಆ ಬಳಿಕ ‘ಬಾಯ್ಸ್ vs ಗರ್ಲ್ಸ್ ವೇದಿಕೆ ಮೇಲೆ ಅವರು ಕಾಣಿಸಿಕೊಂಡು ಗಮನ ಸೆಳೆದರು.



















