Mohammed Siraj: ಬೆಂಕಿ ಬೌಲಿಂಗ್ನೊಂದಿಗೆ ದಾಖಲೆ ಬರೆದ ಮೊಹಮ್ಮದ್ ಸಿರಾಜ್
IPL 2025: ಮೊಹಮ್ಮದ್ ಸಿರಾಜ್ ಆರ್ಸಿಬಿ ಪರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 21 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಮ್ಮೆಯೂ ಪವರ್ಪ್ಲೇನಲ್ಲಿ ಇಬ್ಬರನ್ನು ಬೌಲ್ಡ್ ಮಾಡಿರಲಿಲ್ಲ. ಅಲ್ಲದೆ 4 ಓವರ್ಗಳಲ್ಲಿ ಒಮ್ಮೆಯೂ 20 ಕ್ಕಿಂತ ಕಡಿಮೆ ರನ್ ನೀಡಿರಲಿಲ್ಲ. ಆದರೆ ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಪರಾಕ್ರಮ ಮೆರೆದಿದ್ದಾರೆ.
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ (Mohammed Siraj) ಕಮಾಲ್ ಮಾಡಿದ್ದಾರೆ. ಅದು ಕೂಡ ಬೆಂಕಿ ಬೌಲಿಂಗ್ ಮೂಲಕ. ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ನ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
1 / 5
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ಆರ್ಸಿಬಿ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ಪವರ್ಪ್ಲೇನಲ್ಲೇ ದೇವದತ್ ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್, ಆರ್ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ವಿಕೆಟ್ ಕಬಳಿಸಿದರು.
2 / 5
ಹೀಗೆ 4 ಓವರ್ಗಳಲ್ಲಿ ಮೊಹಮ್ಮದ್ ಸಿರಾಜ್ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ವಿಶೇಷವಾಗಿತ್ತು. ಇದುವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಹಮ್ಮದ್ ಸಿರಾಜ್ ಅವರ ಬೆಸ್ಟ್ ಬೌಲಿಂಗ್ ಫಿಗರ್ ಎಂದರೆ ನಂಬಲೇಬೇಕು. ಕಳೆದ 7 ವರ್ಷಗಳ ಕಾಲ ಆರ್ಸಿಬಿ ಪರ ಆಡಿದ್ದ ಸಿರಾಜ್ ಬೆಂಗಳೂರಿನಲ್ಲಿ ಒಮ್ಮೆಯೂ ಇಂತಹದೊಂದು ಪ್ರದರ್ಶನ ನೀಡಿರಲಿಲ್ಲ.
3 / 5
ಅಂದರೆ ಇದೇ ಮೊದಲ ಬಾರಿಗೆ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿದ್ದಾರೆ. ಅಲ್ಲದೆ ಪವರ್ಪ್ಲೇನಲ್ಲಿ ಇಬ್ಬರನ್ನು ಇದೇ ಮೊದಲ ಬಾರಿಗೆ ಬೌಲ್ಡ್ ಮಾಡಿದ್ದಾರೆ. ಈ ಮೂಲಕ ಕೈ ಬಿಟ್ಟಿದ್ದ ಆರ್ಸಿಬಿ ವಿರುದ್ಧ ಮೊಹಮ್ಮದ್ ಸಿರಾಜ್ ಲೆಕ್ಕವನ್ನು ಚುಕ್ತಾ ಮಾಡಿದ್ದಾರೆ.
4 / 5
ಅಲ್ಲದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿ ಐಪಿಎಲ್ನ ಸಕ್ರಿಯ ಬೌಲರ್ ಎಂಬ ದಾಖಲೆಯನ್ನು ಸಹ ಸಿರಾಜ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ 7 ವರ್ಷಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಧ್ಯವಾಗದ ಸಾಧನೆಯನ್ನು ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯದಲ್ಲೇ ಸಾಧಿಸಿರುವುದೇ ವಿಶೇಷ.