AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammed Siraj: ಬೆಂಕಿ ಬೌಲಿಂಗ್​ನೊಂದಿಗೆ ದಾಖಲೆ ಬರೆದ ಮೊಹಮ್ಮದ್ ಸಿರಾಜ್

IPL 2025: ಮೊಹಮ್ಮದ್ ಸಿರಾಜ್ ಆರ್​ಸಿಬಿ ಪರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 21 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಮ್ಮೆಯೂ ಪವರ್​ಪ್ಲೇನಲ್ಲಿ ಇಬ್ಬರನ್ನು ಬೌಲ್ಡ್ ಮಾಡಿರಲಿಲ್ಲ. ಅಲ್ಲದೆ 4 ಓವರ್​ಗಳಲ್ಲಿ ಒಮ್ಮೆಯೂ 20 ಕ್ಕಿಂತ ಕಡಿಮೆ ರನ್ ನೀಡಿರಲಿಲ್ಲ. ಆದರೆ ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಪರಾಕ್ರಮ ಮೆರೆದಿದ್ದಾರೆ.

ಝಾಹಿರ್ ಯೂಸುಫ್
|

Updated on:Apr 03, 2025 | 7:39 AM

Share
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ (Mohammed Siraj) ಕಮಾಲ್ ಮಾಡಿದ್ದಾರೆ. ಅದು ಕೂಡ ಬೆಂಕಿ ಬೌಲಿಂಗ್ ಮೂಲಕ. ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್​ನ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

1 / 5
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ಆರ್​ಸಿಬಿ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ಪವರ್​ಪ್ಲೇನಲ್ಲೇ ದೇವದತ್ ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್, ಆರ್​ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಆ ಬಳಿಕ ಲಿಯಾಮ್ ಲಿವಿಂಗ್​ಸ್ಟೋನ್ ವಿಕೆಟ್ ಕಬಳಿಸಿದರು.

2 / 5
ಹೀಗೆ 4 ಓವರ್​ಗಳಲ್ಲಿ ಮೊಹಮ್ಮದ್ ಸಿರಾಜ್ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ವಿಶೇಷವಾಗಿತ್ತು. ಇದುವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಹಮ್ಮದ್ ಸಿರಾಜ್ ಅವರ ಬೆಸ್ಟ್ ಬೌಲಿಂಗ್ ಫಿಗರ್ ಎಂದರೆ ನಂಬಲೇಬೇಕು. ಕಳೆದ 7 ವರ್ಷಗಳ ಕಾಲ ಆರ್​ಸಿಬಿ ಪರ ಆಡಿದ್ದ ಸಿರಾಜ್ ಬೆಂಗಳೂರಿನಲ್ಲಿ ಒಮ್ಮೆಯೂ ಇಂತಹದೊಂದು ಪ್ರದರ್ಶನ ನೀಡಿರಲಿಲ್ಲ.

3 / 5
ಅಂದರೆ ಇದೇ ಮೊದಲ ಬಾರಿಗೆ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್​ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿದ್ದಾರೆ. ಅಲ್ಲದೆ ಪವರ್​ಪ್ಲೇನಲ್ಲಿ ಇಬ್ಬರನ್ನು ಇದೇ ಮೊದಲ ಬಾರಿಗೆ ಬೌಲ್ಡ್ ಮಾಡಿದ್ದಾರೆ. ಈ ಮೂಲಕ ಕೈ ಬಿಟ್ಟಿದ್ದ ಆರ್​ಸಿಬಿ ವಿರುದ್ಧ ಮೊಹಮ್ಮದ್ ಸಿರಾಜ್ ಲೆಕ್ಕವನ್ನು ಚುಕ್ತಾ ಮಾಡಿದ್ದಾರೆ.

4 / 5
ಅಲ್ಲದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್​ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿ ಐಪಿಎಲ್​ನ ಸಕ್ರಿಯ ಬೌಲರ್ ಎಂಬ ದಾಖಲೆಯನ್ನು ಸಹ ಸಿರಾಜ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ 7 ವರ್ಷಗಳಲ್ಲಿ ಆರ್​ಸಿಬಿ ಪರ ಕಣಕ್ಕಿಳಿದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಧ್ಯವಾಗದ ಸಾಧನೆಯನ್ನು ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯದಲ್ಲೇ ಸಾಧಿಸಿರುವುದೇ ವಿಶೇಷ.

5 / 5

Published On - 7:31 am, Thu, 3 April 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ