AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ರವಿ ಬಸ್ರೂರು: ತೆಲುಗು ವೇದಿಕೆಯಲ್ಲಿ ಎಮೋಷನಲ್ ಮಾತು

ವಿಶ್ವಕ್ ಸೇನ್ ನಟನೆಯ ತೆಲುಗಿನ ‘ಲಕ್ಟ್’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. 18ನೇ ವಯಸ್ಸಿನಲ್ಲಿ 2 ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ರವಿ ಬಸ್ರೂರು ಅವರು ಪ್ರಯತ್ನಿಸಿದ್ದರು.

2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ರವಿ ಬಸ್ರೂರು: ತೆಲುಗು ವೇದಿಕೆಯಲ್ಲಿ ಎಮೋಷನಲ್ ಮಾತು
Ravi Basrur
ಮದನ್​ ಕುಮಾರ್​
|

Updated on: Feb 22, 2026 | 11:51 AM

Share

ಭಾರತೀಯ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಕೆಜಿಎಫ್’, ‘ಸಲಾರ್’, ‘ಮಾರ್ಕೋ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇಂದು ಅವರು ಬಹುಬೇಡಿಕೆಯ ಸಂಗೀತ ನಿರ್ದೇಶಕ. ಬಹುಭಾಷೆಯ ಚಿತ್ರರಂಗದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆದರೆ ಹಲವು ವರ್ಷಗಳ ಹಿಂದೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು! ಆ ಘಟನೆಯನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ತೆಲುಗಿನ ‘ಕಲ್ಟ್’ (Cult) ಸಿನಿಮಾದ ವೇದಿಕೆಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ವಿಶ್ವಕ್ ಸೇನ್ ನಟನೆಯ ‘ಕಲ್ಟ್’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ಸಿನಿಮಾಗೆ ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ. ಟೀಸರ್ ಲಾಂಚ್ ವೇದಿಕೆಯಲ್ಲಿ ನಟ ವಿಶ್ವಕ್ ಸೇನ್ ಅವರು ರವಿ ಬಸ್ರೂರು ಅವರಿಗೆ 35 ಲಕ್ಷ ರೂಪಾಯಿ ಬೆಲೆಯ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿದರು. ಆ ಬಳಿಕ ಮಾತನಾಡಿದ ರವಿ ಬಸ್ರೂರು ಅವರು ಎಮೋಷನಲ್ ಆದರು.

‘ನಾನು 18ನೇ ವಯಸ್ಸಿನಲ್ಲಿ 2 ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೆ. ನನಗೆ ಈ ಜೀವನ ಬೇಕಾಗಿರಲಿಲ್ಲ. ಆದರೆ ಎರಡೂ ಬಾರಿ ನನ್ನನ್ನು ಬದುಕಿಸಿದರು. 2ನೇ ಬಾರಿ ನನ್ನನ್ನು ಬದುಕಿಸಿದವರು ನನ್ನ ಸಂಗೀತವನ್ನು ಕೇಳಿದರು. ನನಗೆ ಕೀಬೋರ್ಡ್ ಕೊಡಿಸಿದರು. 35 ಸಾವಿರ ರೂಪಾಯಿ ಹಣ ನೀಡಿದರು. ಆ ದಿನ ನಾನು ನನ್ನ ಹೆಸರನ್ನು ರವಿ ಎಂದು ಬದಲಾಯಿಸಿಕೊಂಡೆ. ನನ್ನನ್ನು ಬದುಕಿಸಿದ ವ್ಯಕ್ತಿಯ ಹೆಸರು ರವಿ’ ಎಂದು ಅವರು ಹೇಳಿದ್ದಾರೆ.

‘ನನಗೆ 25 ವರ್ಷಗಳ ಅನುಭವ ಇದೆ. ನಾನು ಯಾವಾಗಲೂ ಒಳ್ಳೆಯ ಸಂಗೀತ ನೀಡಲು ಪ್ರಯತ್ನಿಸಿದ್ದೇನೆ. ನನಗೆ ಇಂದು ವಿಶ್ವಕ್ ಸೇನ್ ಅವರು ಈ ಉಡುಗೊರೆ ನೀಡುವ ಮೂಲಕ ನನ್ನನ್ನು ಪ್ರಶಂಸಿಸಿದ್ದಾರೆ. ಸಂಗೀತದ ಬಗ್ಗೆ ನನಗೆ ಇರುವ ಬದ್ಧತೆಯನ್ನು ಮೆಚ್ಚಿದ್ದಾರೆ. ಇದು ಕೇವಲ ವಾಚ್ ಅಲ್ಲ. ಸಂಗೀತರಾರರಿಗೆ ಸಿಕ್ಕ ಮೆಚ್ಚುಗೆ’ ಎಂದು ರವಿ ಬಸ್ರೂರು ಅವರು ಹೇಳಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಬಯೋಪಿಕ್ ‘ಮಾ ವಂದೇ’ ಶೂಟಿಂಗ್ ಶುರು; ರವಿ ಬಸ್ರೂರು ಸಂಗೀತ

‘ಕಲ್ಟ್’ ಸಿನಿಮಾದ ವೇದಿಕೆಯ ಮೇಲೆ ರವಿ ಬಸ್ರೂರು ಆಡಿದ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಯಶಸ್ವಿ ಸಂಗೀತ ನಿರ್ದೇಶಕನ ಬದುಕಿನಲ್ಲಿ ಎಂಥ ನೋವಿನ ಇತಿಹಾಸ ಇದೆ ಎಂಬುದನ್ನು ತಿಳಿದು ಫ್ಯಾನ್ಸ್ ಕೂಡ ಎಮೋಷನಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.