AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸಲು ಸಿಎಂ ಡಿಕೆಶಿ ನಿಯೋಗ ಜಪಾನ್ ಪ್ರವಾಸ: ನ.27ರಿಂದ ಟೋಕಿಯೊ, ಒಸಾಕಾದಲ್ಲಿ ದಿಗ್ಗಜ ಕಂಪನಿಗಳೊಂದಿಗೆ ಸಭೆ

ಮುಖ್ಯಮಂತ್ರಿಗಳ ನಿಯೋಗ ಜಪಾನ್ ಪ್ರವಾಸ ಕೈಗೊಂಡಿದ್ದು, ರಾಜ್ಯಕ್ಕೆ ಬೃಹತ್ ಬಂಡವಾಳ ಆಕರ್ಷಿಸುವುದು ಇದರ ಪ್ರಮುಖ ಗುರಿ. ಜಾಗತಿಕ ಹೂಡಿಕೆದಾರರ ಸಮಾವೇಶ 2027ಕ್ಕೆ ಜಪಾನ್ ಕಂಪನಿಗಳಿಗೆ ಆಹ್ವಾನ ನೀಡಲಾಗುತ್ತದೆ. ಕೈಗಾರಿಕಾ ಅಭಿವೃದ್ಧಿ ಹಾಗೂ ಬೆಂಗಳೂರಿನ ನಗರಾಭಿವೃದ್ಧಿ ಮಾದರಿ ಅಧ್ಯಯನಕ್ಕೆ ಒತ್ತು ನೀಡಲಾಗಿದ್ದು, ತ್ಯಾಜ್ಯ ನಿರ್ವಹಣೆ, ಸಾರಿಗೆ, ನಗರ ಯೋಜನೆ ಕ್ಷೇತ್ರಗಳಲ್ಲಿ ಜಪಾನ್‌ನಿಂದ ಕಲಿಕೆ ಮುಖ್ಯವಾಗಿದೆ. ಕರ್ನಾಟಕ-ಜಪಾನ್ ಸಹಭಾಗಿತ್ವ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿದೆ.

ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸಲು ಸಿಎಂ ಡಿಕೆಶಿ ನಿಯೋಗ ಜಪಾನ್ ಪ್ರವಾಸ: ನ.27ರಿಂದ ಟೋಕಿಯೊ, ಒಸಾಕಾದಲ್ಲಿ ದಿಗ್ಗಜ ಕಂಪನಿಗಳೊಂದಿಗೆ ಸಭೆ
ಸಾಂದರ್ಭಿಕ ಚಿತ್ರ Image Credit source: Tv9 kannada
ಈರಣ್ಣಾ ಬಸವಾ
| Edited By: |

Updated on: Nov 21, 2026 | 7:30 AM

Share

ಬೆಂಗಳೂರು, ನ.21: ರಾಜ್ಯದ ಕೈಗಾರಿಕಾ ವಲಯಕ್ಕೆ ಬೃಹತ್ ಬಂಡವಾಳ ಆಕರ್ಷಿಸುವ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉನ್ನತ ಮಟ್ಟದ ನಿಯೋಗವು ಜಪಾನ್ ಪ್ರವಾಸ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದ್ದು, ನವೆಂಬರ್ 27ರವರೆಗೆ ಜಪಾನ್‌ನ ಪ್ರಮುಖ ಕೈಗಾರಿಕಾ ದಿಗ್ಗಜರು ಹಾಗೂ ನಗರಾಭಿವೃದ್ಧಿ ಸಂಸ್ಥೆಗಳೊಂದಿಗೆ ಸರಣಿ ಸಭೆಗಳು ನಡೆಯಲಿವೆ.

ಈ ಕೈಗಾರಿಕಾ ಸಭೆಗಳಲ್ಲಿ, 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರು ಅರಮನೆಯಲ್ಲಿ ಇನ್ವೆಸ್ಟ್ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ‘ಜಾಗತಿಕ ಹೂಡಿಕೆದಾರರ ಸಮಾವೇಶ 2027’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರತಿ ಜಪಾನಿ ಕಂಪನಿಗೂ ಅಧಿಕೃತ ಆಹ್ವಾನ ನೀಡಲಾಗುವುದು. ಕರ್ನಾಟಕ ಮತ್ತು ಜಪಾನ್ ಎರಡೂ ಬಲಿಷ್ಠವಾಗಿರುವ ಪ್ರಮುಖ 5 ಕ್ಷೇತ್ರಗಳ ಮೇಲೆ ಈ ಸಭೆಗಳು ಕೇಂದ್ರೀಕೃತವಾಗಿವೆ. ಒಂದು ಆಟೋಮೋಟಿವ್ ಮತ್ತು ಇವಿ ಬಿಡಿಭಾಗಗಳಿಗೆ ಟೊಯೋಟಾ (Toyota) ಮತ್ತು ಪ್ಯಾನಾಸೋನಿಕ್ ಆಟೋಮೋಟಿವ್ ಸಿಸ್ಟಮ್ಸ್, ಎರಡನೇಯದ್ದು ವಿಶೇಷ ರಾಸಾಯನಿಕಗಳು ಮತ್ತು ಸುಧಾರಿತ ಸಾಮಗ್ರಿಗಳು ಮಿತ್ಸುಬಿಷಿ ಕೆಮಿಕಲ್ ಗ್ರೂಪ್, ಮೂರನೇಯದ್ದು ಔಷಧೀಯ ಕ್ಷೇತ್ರ ಟಕೆಡಾ ಫಾರ್ಮಾಸ್ಯುಟಿಕಲ್ಸ್, 4ನೇಯದ್ದು ಕೈಗಾರಿಕಾ ಆಟೊಮೇಷನ್ ಯೊಕೊಗಾವಾ ಎಲೆಕ್ಟ್ರಿಕ್, 5ನೇಯದ್ದು ಉತ್ಪಾದನಾ ವಲಯದ ಹೂಡಿಕೆಗಳು ಸುಮಿಟೊಮೊ ಕಾರ್ಪೊರೇಷನ್ ಆಕರ್ಷಣೆ ಮಾಡಲಿದೆ.

ಪ್ರತಿ ಸಭೆಯಲ್ಲಿಯೂ ಕರ್ನಾಟಕದ ಹೂಡಿಕೆ ಸ್ನೇಹಿ ವಾತಾವರಣವನ್ನು ಮನವರಿಕೆ ಮಾಡಿಕೊಡಲಾಗುವುದು. ಇದರಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ, ಹಿಂದುಳಿದ ಮತ್ತು ಆದ್ಯತಾ ತಾಲ್ಲೂಕುಗಳಲ್ಲಿನ ಹೂಡಿಕೆಗಳಿಗೆ ಶೇ. 20ರವರೆಗಿನ ಹೆಚ್ಚುವರಿ ಬಂಡವಾಳ ಸಬ್ಸಿಡಿ, ಕೆಐಎಡಿಬಿ ಡಿಜಿಟಲ್ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್ ಹಾಗೂ ಪ್ರತಿ ಹೂಡಿಕೆ ಪ್ರಸ್ತಾವನೆಗೂ ಏಕಗವಾಕ್ಷಿ ಸೌಲಭ್ಯದ ಮಾಹಿತಿಯನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಹೂಡಿಕೆ ಮಾಡುವ ಜಪಾನ್ ಕಂಪನಿಗಳಿಗೆ ಸಾಂಸ್ಥಿಕ ಬೆಂಬಲವನ್ನು ಮತ್ತಷ್ಟು ಬಲಪಡಿಸುವ ಕುರಿತು ಜೆಟ್ರೋ ಕಾರ್ಯನಿರ್ವಾಹಕ ಉಪಾಧ್ಯಕ್ಷರೊಂದಿಗೂ ನಿಯೋಗ ಮಹತ್ವದ ಸಭೆ ನಡೆಸಲಿದೆ.

ನಗರಾಭಿವೃದ್ಧಿ: ಗ್ರೇಟರ್ ಬೆಂಗಳೂರು ಅಭಿವೃದ್ಧಿಗೆ ಜಪಾನ್ ಮಾದರಿಯಿಂದ ಕಲಿಕೆ

ಯೋಜಿತ, ಹೆಚ್ಚಿನ ಜನಸಾಂದ್ರತೆಯ ಮತ್ತು ಸುಸ್ಥಿರ ನಗರ ಬೆಳವಣಿಗೆಗೆ ಜಪಾನ್‌ನ ನಗರಗಳು ಜಗತ್ತಿಗೇ ಮಾದರಿಯಾಗಿವೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿಯೋಗವು ಬೆಂಗಳೂರು ಹಾಗೂ ಕರ್ನಾಟಕದ ಇತರ ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಅಗತ್ಯವಿರುವ ನಾಲ್ಕು ಪ್ರಮುಖ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸಲಿದೆ.

ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆ

ನಗರ ಯೋಜನೆ

ಸಮಗ್ರ ಸಾರಿಗೆ ಮತ್ತು ಸಂಚಾರ ನಿರ್ವಹಣೆ

ಆಧುನಿಕ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ

ಇದನ್ನೂ ಓದಿ; 5ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಸಿಎಂ ವಿರುದ್ಧವೂ ಆಕ್ರೋಶ, ಬೇಡಿಕೆ ಈಡೇರುವವರೆಗೂ ಹೋರಾಟದ ಎಚ್ಚರಿಕೆ

ಇದನ್ನೂ ಓದಿ: ಚಳಿಗಾಲದ ಆರಂಭದಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಏರುಪೇರು

ಟೋಕಿಯೊ ಮತ್ತು ಒಸಾಕಾ ಭೇಟಿಯ ವಿಶೇಷ ಕಾರ್ಯಕ್ರಮಗಳು

ಹೆಚ್ಚಿನ ಜನಸಾಂದ್ರತೆಯ ಮಹಾನಗರಗಳನ್ನು ಜಪಾನ್ ಹೇಗೆ ಯೋಜಿಸುತ್ತದೆ, ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದರ ನೇರ ಅನುಭವವನ್ನು ಒಸಾಕಾ ಮತ್ತು ಟೋಕಿಯೊ ಭೇಟಿಗಳು ನಿಯೋಗಕ್ಕೆ ನೀಡಲಿವೆ. ವಿಶ್ವದ ಅತಿದೊಡ್ಡ ಮಹಾನಗರಗಳಲ್ಲಿ ಒಂದಾದ ಟೋಕಿಯೊ, ಸಮಗ್ರ ಸಾರಿಗೆ ಮತ್ತು ನಿಲ್ದಾಣ-ಕೇಂದ್ರಿತ ಪುನರಾಭಿವೃದ್ಧಿಗೆ ಜಾಗತಿಕ ಮಾದರಿಯಾಗಿದ್ದರೆ, ಪಶ್ಚಿಮ ಜಪಾನ್‌ನ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾದ ಒಸಾಕಾ, ಬೃಹತ್ ಪ್ರಮಾಣದ ನಗರ ನವೀಕರಣ ಮತ್ತು ಮಹಾನಗರ ಯೋಜನೆಯಲ್ಲಿ ಉತ್ತಮ ಪಾಠಗಳನ್ನು ಒದಗಿಸಲಿದೆ.

ಜಪಾನ್‌ನ ಪ್ರಮುಖ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ ಸಂಸ್ಥೆಯಾದ ನಿಕ್ಕೆನ್ ಸೆಕ್ಕೆಯ್ ಪ್ರತಿನಿಧಿಗಳೊಂದಿಗೆ ನಿಯೋಗವು ‘ಟೋಕಿಯೊ ಮಿಡ್‌ಟೌನ್ ರೊಪ್ಪೊಂಗಿ’ಗೆ ಭೇಟಿ ನೀಡಲಿದೆ. ಈ ಬೃಹತ್ ಯೋಜನೆಯು ನಗರ ಪುನರಾಭಿವೃದ್ಧಿ, ಸಾರಿಗೆ-ಆಧಾರಿತ ಅಭಿವೃದ್ಧಿ , ಭೂ ಮರುಹೊಂದಾಣಿಕೆ, ಮಿಶ್ರ ಭೂ ಬಳಕೆ ಮತ್ತು ನಗರ ಹಸಿರು ಪ್ರದೇಶಗಳ ನಿರ್ವಹಣೆಗೆ ಉತ್ತಮ ನಿದರ್ಶನವಾಗಿದೆ. ಬೆಂಗಳೂರು ಮತ್ತು ಇತರ ಭಾರತೀಯ ನಗರಗಳು ಸಹ ಇದೇ ದಿಕ್ಕಿನಲ್ಲಿ ವಿಕಸನಗೊಳ್ಳುತ್ತಿರುವುದರಿಂದ ಈ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ.

ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಮತ್ತು ನಗರ ಮೂಲಸೌಕರ್ಯ ನಿರ್ಮಾಣದಲ್ಲಿ ಜೆಎಫ್‌ಇ ಎಂಜಿನಿಯರಿಂಗ್ ಕಾರ್ಪೊರೇಷನ್‌ನ ಸಾಮರ್ಥ್ಯ ಮತ್ತು ಪ್ರಮುಖ ಯೋಜನೆಗಳನ್ನು ಅರಿಯಲು, ಟೋಕಿಯೊದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಹಿರಿಯ ಆಡಳಿತ ಮಂಡಳಿಯೊಂದಿಗೆ ನಿಯೋಗವು ಮಹತ್ವದ ಸಭೆ ನಡೆಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?