ಗೋವುಗಳು ಪ್ಲಾಸ್ಟಿಕ್ ತಿಂದರೆ ಏನಾಗುತ್ತದೆ ತಿಳಿದಿದೆಯೇ?
ಆಹಾರ ಸೇವನೆ, ಶೇಖರಣೆ ಹೀಗೆ ಪ್ರತಿಯೊಂದು ಹಂತದಲ್ಲಿಯೂ ನಾವು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಜೊತೆಗೆ ಅದನ್ನು ಬಳಕೆ ಮಾಡಿ ಬಿಸಾಡುತ್ತೇವೆ. ಆದರೆ ನಾವು ಎಸೆಯುವ ಪ್ಲಾಸ್ಟಿಕ್ ನಮ್ಮ ಸುತ್ತುಮುತ್ತಲಿರುವ ಪ್ರಾಣಿಗಳ ಜೀವವನ್ನೇ ತೆಗೆಯಬಹುದು ಎಂಬುದನ್ನು ನಾವು ಮರೆಯಬಾರದು. ಅದರಲ್ಲಿಯೂ ಹಸುಗಳು ಪ್ಲಾಸ್ಟಿಕ್ ತಿಂದು, ಸಾಯುತ್ತಿರುವುದು ಹಲವು ವರ್ಷಗಳಿಂದಲೂ ಕಂಡುಬರುತ್ತಿದೆ ಆದರೆ ಅವುಗಳನ್ನು ತಡೆಯಲು ಅಥವಾ ಹಸುಗಳಿಗೆ ಇದರಿಂದ ಯಾವ ರೀತಿಯ ಅಪಾಯವಾಗುತ್ತದೆ ಎಂಬುದು ತಿಳಿದಿರುವುದಿಲ್ಲ. ಹಾಗಾ್ದರೆ ಗೋವುಗಳು ಪ್ಲಾಸ್ಟಿಕ್ ತಿಂದರೆ ಏನಾಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ಲಾಸ್ಟಿಕ್ (Plastic) ಜನರ ಆರೋಗ್ಯವನ್ನು (Health) ಹಾಳು ಮಾಡುತ್ತಿರುವುದು ಸುಳ್ಳಲ್ಲ. ಆದರೂ ಕೂಡ ನಾವು ಅದರ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಆಹಾರ (Food) ಸೇವನೆ, ಶೇಖರಣೆ ಹೀಗೆ ಪ್ರತಿಯೊಂದು ಹಂತದಲ್ಲಿಯೂ ನಾವು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಮಾತ್ರವಲ್ಲ ಅದನ್ನು ಬಳಕೆ ಮಾಡಿ ಎಸೆಯುತ್ತಿದ್ದೇವೆ. ಇದನ್ನು ನಮ್ಮ ಸುತ್ತಮುತ್ತಲಿರುವ ಪ್ರಾಣಿಗಳು ತಿಳಿಯದೆಯೇ ಸೇವನೆ ಮಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದೆ. ಇದರಲ್ಲಿ ಗೋವುಗಳ (Cow) ಸಂಖ್ಯೆಯೇ ಅಧಿಕ. ಇದು ಈಗಿನ ಮಾತಲ್ಲ, ಹಲವಾರು ವರ್ಷಗಳಿಂದಲೂ ಈ ಸಮಸ್ಯೆ ಪರಿಹಾರ ಸಿಗದ ಸಮಸ್ಯೆಯಾಗಿಯೇ ಉಳಿದಿದೆ. ಪ್ರತಿಯೊಬ್ಬರಿಗೂ ಹಸುಗಳು ಪ್ಲಾಸ್ಟಿಕ್ ತಿನ್ನುವುದು ಒಳ್ಳೆಯದಲ್ಲ ಎಂಬುದು ತಿಳಿದಿದೆ. ಆದರೆ ಅವುಗಳನ್ನು ತಡೆಯಲು ಅಥವಾ ಹಸುಗಳಿಗೆ ಇದರಿಂದ ಯಾವ ರೀತಿಯ ಅಪಾಯವಾಗುತ್ತದೆ ಎಂಬುದು ತಿಳಿದಿರುವುದಿಲ್ಲ. ಹಾಗಾ್ದರೆ ಗೋವುಗಳು ಪ್ಲಾಸ್ಟಿಕ್ ತಿಂದರೆ ಏನಾಗುತ್ತದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇಂದಿಗೂ ಎಷ್ಟೋ ಜಾನುವಾರುಗಳ ಸಾವಿಗೆ ಪ್ಲಾಸ್ಟಿಕ್ ಕಾರಣವಾಗುತ್ತಿದೆ. ಮೇವಿಗೆಂದು ಬಿಟ್ಟ ಸಮಯದಲ್ಲಿ ಹಸುಗಳು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇವಿಸುವುದು ಹೆಚ್ಚುತ್ತಲೇ ಇದೆ. ಈ ರೀತಿ ಪ್ಲಾಸ್ಟಿಕ್ ತಿಂದು ಸತ್ತ ಜಾನುವಾರುಗಳ ಶವಗಳನ್ನು ಕಾಗೆ, ಹದ್ದು ಕೂಡ ಮುಟ್ಟುವುದಿಲ್ಲ. ಅದಲ್ಲದೆ ಹಸುಗಳ ಬಳಿ ಪ್ಲಾಸ್ಟಿಕ್ ಒಳ್ಳೆಯದಲ್ಲ ತಿನ್ನಬೇಡ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ನಾವು ಅವುಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ಸಮಸ್ಯೆಯನ್ನು ತಡೆಯಬಹುದು. ಸಾಧ್ಯವಾದಷ್ಟು ಪ್ಲಾಸ್ಟಿಕ್‌ಗಳಲ್ಲಿ ಆಹಾರ ಸೇವನೆ ಮಾಡಿ ಅವುಗಳನ್ನು ಪ್ರಾಣಿಗಳಿಗೆ ಆಹಾರವಾಗುವ ಹಾಗೆ ಎಸೆಯುವುದನ್ನು ನಿಲ್ಲಸಬೇಕು. ಆಗ ಮಾತ್ರ ಈ ರೀತಿ ಸಮಸ್ಯೆಗಳಿಗೆ ಪರಿಹಾರ ಸಿಗುವುದಕ್ಕೆ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಮಕ್ಕಳಿಗೆ ಖಾರ ಪದಾರ್ಥ ನೀಡಲು ಯಾವಾಗ ಆರಂಭ ಮಾಡಬೇಕು?
ಗೋವುಗಳು ಪ್ಲಾಸ್ಟಿಕ್ ತಿಂದರೆ ಏನಾಗುತ್ತೆ ತಿಳಿದಿದೆಯೇ?
ಪ್ಲಾಸ್ಟಿಕ್‌ಗಳು ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ ಇದರಿಂದ ಜಾನುವಾರಗಳು ಸಾಯುತ್ತವೆ. ಅದರಲ್ಲಿಯೂ ಈ ರೀತಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಸಾಯುವ ಪ್ರಾಣಿಗಳ ಪೈಕಿ ಹಸುಗಳ ಸಂಖ್ಯೆಯೇ ಹೆಚ್ಚಾಗಿದೆ. ಹಸುಗಳ ದವಡೆಯ ರಚನೆ ಹೇಗಿರುತ್ತದೆ ಎಂದರೆ ಅವುಗಳಿಗೆ ತಾವು ತಿನ್ನುತ್ತಿರುವುದು ಏನು ಎಂಬುದು ತಿಳಿಯುವುದಿಲ್ಲ. ಅದರಲ್ಲಿಯೂ ಅವುಗಳು ಆಹಾರವನ್ನು ಜಗಿದು ತಿಂದರೂ ತುಟಿಗಳು ತ್ಯಾಜ್ಯವನ್ನು ಗುರುತಿಸುವಷ್ಟು ಸಂವೇದನಾಶೀಲವಾಗಿರುವುದಿಲ್ಲ. ಈ ಕಾರಣದಿಂದಾಗಿ ಹಸುಗಳಿಗೆ ಪ್ಲಾಸ್ಟಿಕ್ ಸೇವನೆ ಮಾಡುವುದು ಗೊತ್ತಾಗುವುದಿಲ್ಲ. ಅದಲ್ಲದೆ ಅವುಗಳು ವಾಂತಿ ಮಾಡುವುದಿಲ್ಲವಾದ್ದರಿಂದ ಹೊಟ್ಟೆಯಲ್ಲಿಯೇ ಉಳಿದ ಪ್ಲಾಸ್ಟಿಕ್ ತ್ಯಾಜ್ಯ ಬೇರೆ ಆಹಾರ ಸೇವಿಸಲಾಗದಂತೆ ಮಾಡುತ್ತದೆ. ಮೇವಿನಲ್ಲಿ ಪ್ಲಾಸ್ಟಿಕ್ ಮಾತ್ರವಲ್ಲ, ಹರಿತವಾದ ಕಬ್ಬಿಣದ ಚೂರು, ಮೊಳೆಗಳು ಸಹ ಮೃತಪಟ್ಟ ಹಸುಗಳ ಜಠರದಲ್ಲಿ ಪತ್ತೆಯಾಗುತ್ತವೆ. ಇಂತಹ ಲೋಹದ ತ್ಯಾಜ್ಯಗಳು ಹಸುಗಳ ಜಠರ ಮತ್ತು ಕರುಳನ್ನು ಕತ್ತರಿಸುತ್ತವೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ