AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liver Health: ಲಿವರ್ ಚೆನ್ನಾಗಿರಬೇಕು ಅಂದರೆ ಈ ಹಣ್ಣುಗಳನ್ನು ತಪ್ಪದೆ ತಿನ್ನಿ

ನಾವು ಸೇವಿಸುವ ಆಹಾರ ನಮ್ಮ ಯಕೃತ್ತಿನ ಅಥವಾ ಲಿವರ್ ನ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಕೆಲವು ಹಣ್ಣುಗಳು ಪಿತ್ತಜನಕಾಂಗವನ್ನು ಶುದ್ಧೀಕರಿಸಲು ಮತ್ತು ಅದರ ಕೆಲಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾದರೆ ನಮ್ಮ ಲಿವರ್ ಹಾಳಾಗದಂತೆ ಮತ್ತು ಫ್ಯಾಟಿ ಲಿವರ್ ಸಮಸ್ಯೆ ಕಡಿಮೆ ಮಾಡಲು ಯಾವ ಹಣ್ಣುಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Liver Health: ಲಿವರ್ ಚೆನ್ನಾಗಿರಬೇಕು ಅಂದರೆ ಈ ಹಣ್ಣುಗಳನ್ನು ತಪ್ಪದೆ ತಿನ್ನಿ
ಲಿವರ್Image Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Apr 29, 2025 | 4:10 PM

Share

ಯಕೃತ್ತು ಅಥವಾ ಲಿವರ್ (Liver) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಆರೋಗ್ಯವಾಗಿದ್ದಾಗ ಮಾತ್ರ ನಮ್ಮ ದೇಹ ಚೆನ್ನಾಗಿರಲು ಸಾಧ್ಯ. ಹಾಗಾಗಿ ಇದನ್ನು ಆರೋಗ್ಯವಾಗಿಟ್ಟುಕೊಳ್ಳಲು ನಮ್ಮ ಆಹಾರ ಪದ್ದತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ನಾವು ತಿನ್ನುವ ಆಹಾರ ಸರಿಯಾಗಿದ್ದಾಗ ಮಾತ್ರ ನಮ್ಮ ಲಿವರ್ ಚೆನ್ನಾಗಿರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ನಮ್ಮ ಜೀವನಶೈಲಿ (Lifestyle) ಮತ್ತು ನಾವು ಅನುಸರಿಸುವ ಆಹಾರ ಪದ್ಧತಿ (Diet) ಸರಿಯಾಗಿ ಇರಬೇಕಾಗುತ್ತದೆ. ಹಾಗಾದರೆ ನಮ್ಮ ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳು (Fruits) ಯಾವವು? ಫ್ಯಾಟಿ ಲಿವರ್ ಸಮಸ್ಯೆ ಕಡಿಮೆ ಮಾಡಲು ಯಾವ ಹಣ್ಣುಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಈ ಹಣ್ಣು ನಿಮ್ಮ ಲಿವರ್ ಗೆ ಒಳ್ಳೆಯದು:

  • ನಿಂಬೆ ರಸದಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಬೆಳಿಗ್ಗೆ ಸ್ವಲ್ಪ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಪಿತ್ತಜನಕಾಂಗ ಸ್ವಚ್ಛವಾಗುತ್ತದೆ. ನಿಯಮಿತವಾಗಿ ಮಾಡುವ ಈ ಅಭ್ಯಾಸವು ನಿಮ್ಮ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ.
  • ಕಿತ್ತಳೆ ಹಣ್ಣಿನಲ್ಲಿಯೂ ವಿಟಮಿನ್ ಸಿ ಹೇರಳವಾಗಿದ್ದು ಅವು ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಪ್ರತಿದಿನ ಕಿತ್ತಳೆ ಹಣ್ಣನ್ನು ತಿನ್ನುವುದು ಯಕೃತ್ತಿನಿಂದ ಹಾನಿಕಾರಕ ಅಂಶವನ್ನು ಹೊರಹಾಕಲು ಸಹಾಯ ಮಾಡುವುದಲ್ಲದೆ ಲಿವರ್ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
  • ದ್ರಾಕ್ಷಿ ನಮ್ಮ ಲಿವರ್ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಅದರಲ್ಲಿಯೂ ಕಪ್ಪು ದ್ರಾಕ್ಷಿ, ಯಕೃತ್ತಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ.
  • ಸೇಬುಗಳಲ್ಲಿರುವ ಫೈಬರ್ ಅಂಶವು ಪಿತ್ತಜನಕಾಂಗದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಫ್ರೀ ರಾಡಿಕಲ್ ಗಳಿಂದ ಮುಕ್ತಿ ನೀಡಿ ನಮ್ಮ ಯಕೃತ್ತನ್ನು ಆರೋಗ್ಯವಾಗಿಡುತ್ತದೆ.
  • ಅನಾನಸ್ ನಲ್ಲಿ ಬ್ರೊಮೆಲೈನ್ ಎಂಬ ನೈಸರ್ಗಿಕ ಕಿಣ್ವವಿದೆ. ಇದು ದೇಹದಲ್ಲಿನ ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲಿವರ್ ನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅದರ ಕಾರ್ಯವನ್ನು ಸುಧಾರಿಸಲು ಈ ಹಣ್ಣು ಉಪಯುಕ್ತವಾಗಿದೆ.
  • ಪಪ್ಪಾಯಿಯಲ್ಲಿ ಪಪೈನ್ ಎಂಬ ಪ್ರಮುಖ ಕಿಣ್ವವಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಪಿತ್ತಜನಕಾಂಗವನ್ನು ಸ್ವಚ್ಛವಾಗಿಡಲು ಈ ಹಣ್ಣು ಸಹಾಯ ಮಾಡುತ್ತದೆ.
  • ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿರುತ್ತದೆ. ಅವು ನಮ್ಮ ಲಿವರ್ ಅನ್ನು ರಕ್ಷಿಸಲು ಮತ್ತು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಾವಿನಹಣ್ಣನ್ನು ಮಿತವಾಗಿ ತೆಗೆದುಕೊಂಡರೆ ದೇಹಕ್ಕೆ ಉತ್ತಮ ಪ್ರಯೋಜನಗಳಿವೆ.
  • ಕಲ್ಲಂಗಡಿಯಲ್ಲಿ ನೀರು ಸಮೃದ್ಧವಾಗಿದ್ದು ಇದರಲ್ಲಿರುವ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕ ಯಕೃತ್ತನ್ನು ಹಾನಿಕಾರಕ ಆಹಾರಗಳಿಂದ ರಕ್ಷಿಸುತ್ತದೆ. ಅದರಲ್ಲಿಯೂ ಈ ಹಣ್ಣು ಬೇಸಿಗೆಯ ದಿನಗಳಲ್ಲಿ ಯಕೃತ್ತನ್ನು ತಂಪಾಗಿಸುತ್ತದೆ.
  • ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಯಕೃತ್ತಿನ ಆರೋಗ್ಯವನ್ನು ಸುಧಾರಿಸುವುದಲ್ಲದೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಬ್ಬಿನ ಯಕೃತ್ತಿನಂತಹ ಸಮಸ್ಯೆಗಳನ್ನು ಅಂದರೆ ಫ್ಯಾಟಿ ಲಿವರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ನಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಲಿವರ್ ಚೆನ್ನಾಗಿರುವುದು ಮಾತ್ರವಲ್ಲ ನಮ್ಮ ಪೂರ್ತಿ ದೇಹ ಆರೋಗ್ಯವಾಗಿರುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
Image
ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ! ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ
Image
ಅತಿಯಾಗಿ ತಿಂದರೆ ಲಿವರ್ ಹಾಳಾಗುತ್ತಾ?
Image
ಹೆಂಡತಿ ಗರ್ಭಿಣಿ ಇರುವಾಗ ಗಂಡ ಈ ವಿಷಯವನ್ನು ತಿಳಿದಿರಬೇಕು
Image
ಬೇರೊಬ್ಬರು ಬಳಸಿದ ಲೋಟದಲ್ಲಿ ನೀರು ಕುಡಿಯುವ ಮುನ್ನ ಎಚ್ಚರ!

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!