AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HIV ಪಾಸಿಟಿವಿಟಿ ರೇಟಿಂಗ್​​ನಲ್ಲಿ ಕರ್ನಾಟಕದಲ್ಲೇ ಬಾಗಲಕೋಟೆ ನಂಬರ್ 1

ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಐವಿ ಪ್ರಮಾಣ ಕಡಿಮೆಯಾಗಿದೆ. ಮೊದಲನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೆ ರಾಜ್ಯದಲ್ಲೇ ಪಾಸಿಟಿವಿಟಿ ರೇಟ್​ನಲ್ಲಿ ಇಂದಿಗೂ ಬಾಗಲಕೋಟೆ ನಂಬರ್ ಒನ್​​ ಸ್ಥಾನದಲ್ಲಿದೆ. ಸದ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳು ಜನರ ನಿದ್ದೆಗೆಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

HIV ಪಾಸಿಟಿವಿಟಿ ರೇಟಿಂಗ್​​ನಲ್ಲಿ ಕರ್ನಾಟಕದಲ್ಲೇ ಬಾಗಲಕೋಟೆ ನಂಬರ್ 1
Hiv
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Dec 03, 2025 | 6:57 PM

Share

ಬಾಗಲಕೋಟೆ, ಡಿಸೆಂಬರ್​ 03: ಜಿಲ್ಲೆಯಲ್ಲಿ ಏಡ್ಸ್ (AIDS) ಮಹಾಮಾರಿ ಸದ್ದಿಲ್ಲದೇ ವ್ಯಾಪಿಸುತ್ತಿದೆ. ಮೊದಲಿಗಿಂತ ಇವಾಗ ಹೋಲಿಸಿದರೆ ಅದರ ಸಂಖ್ಯೆ ಕಡಿಮೆಯಾಗಿದ್ದು, ಮೂರನೇ ಸ್ಥಾನಕ್ಕೆ ಇಳಿದಿದೆ. ಆದರೆ ಪಾಸಿಟಿವಿಟಿ ರೇಟ್​​ನಲ್ಲಿ ಇಂದಿಗೂ ಕರ್ನಾಟಕದಲ್ಲೇ (Karnataka) ನಂಬರ್​​ ಒನ್ ಇದ್ದು, ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಜನರ ನಿದ್ದೆಗೆಡಿಸಿದೆ.

ಹೆಚ್ಐವಿ ಪಾಸಿಟಿವಿಟಿ ರೇಟ್​ನಲ್ಲಿ ಬಾಗಲಕೋಟೆ ನಂಬರ್ ಒನ್

ಬಾಗಲಕೋಟೆ ಜಿಲ್ಲೆ ಅಂದರೆ ಕಳೆದ ಎರಡು ದಶಕಗಳ ಅವಧಿಯಲ್ಲಿ ಹೆಚ್ಐವಿ ವಿಚಾರಕ್ಕೆ ಸಂಬಂಧಪಟ್ಟಂತೆ ಜನರು ಚಕಿತರಾಗಿ ತಿರುಗಿ ನೋಡುತ್ತಾರೆ. ಇತ್ತೀಚೆಗೆ ಹೆಚ್ಐವಿ ಪ್ರಮಾಣ ಬಾಗಲಕೋಟೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಮೊದಲನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದೆ. ಇದು ಒಂದು ಕಡೆ ಸಮಾಧಾನಕರ ಸಂಗತಿಯಾದರೆ, ರಾಜ್ಯದಲ್ಲೇ ಪಾಸಿಟಿವಿಟಿ ರೇಟ್​ನಲ್ಲಿ ಇಂದಿಗೂ ಬಾಗಲಕೋಟೆ ನಂಬರ್ ಒನ್​​ ಸ್ಥಾನದಲ್ಲಿದೆ ಎಂಬುದನ್ನು ಕೇಳಿ ಜಿಲ್ಲೆಯ ಜನ ಭಯಭೀತರಾಗುವಂತೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ಯುಟ್‌ ಡಯಾರಿಯಲ್‌ ಡಿಸೀಸ್ ಏರಿಕೆ: ಆರೋಗ್ಯ ಇಲಾಖೆಗೂ ಟೆನ್ಷನ್ ಶುರು

ಜಿಲ್ಲೆಯಲ್ಲಿ ಹೆಚ್ಐವಿ ಸ್ಕ್ರೀನ್ ಟೆಸ್ಟ್​ನಲ್ಲಿ 100 ಜನರನ್ನು ಟೆಸ್ಟ್ ಮಾಡಿದರೆ, 100 ಜನರಲ್ಲಿ ಒಬ್ಬರಂತೆ ಹೆಚ್ಐವಿ ಪಾಸಿಟಿವ್ ಕಂಡುಬರುತ್ತಿದ್ದಾರೆ. ಆ ಪ್ರಕಾರ ಪಾಸಿಟಿವಿಟಿ ರೇಟ್​ನಲ್ಲಿ ಬಾಗಲಕೋಟೆ ಜಿಲ್ಲೆ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈ ಕುರಿತಾಗಿ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಿಕ ಘಟಕದ ಮುಖ್ಯಸ್ಥ ಡಾ ಸುವರ್ಣಾ ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಬರೋಬ್ಬರಿ 17,976 ಕೇಸ್​​ಗಳು ಆ್ಯಕ್ಟೀವ್​​ ಆಗಿವೆ. ಯುವಕರು, ಯುವತಿಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಎನ್ನದೇ ಯಾರೆಂದರಲ್ಲಿ ಹೆಚ್ಐವಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಅಲೈವ್ ಕೇಸಸ್ 17,976 ಗಳ ಪೈಕಿ 300 ಮಕ್ಕಳಲ್ಲಿ, 13 ಜನ ಗರ್ಭಿಣಿಯರಲ್ಲಿ, 47 ಜನ ಬಾಣಂತಿಯರಲ್ಲಿ ಕಂಡು ಬಂದಿದೆ‌. ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿಲ್ಲ.

ಮಹಾರಾಷ್ಟ್ರ ಸೇರಿ ಅಂತಾರಾಜ್ಯ ವಲಸಿಗರ ಎಫೆಕ್ಟ್

ಮಹಾರಾಷ್ಟ್ರದ ಲಿಂಕ್‌ನಿಂದ ಹೆಚ್​​ಐವಿ ಮತ್ತಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರ ಲಿಂಕ್ ಇರುವ ಜಿಲ್ಲೆಯ ಮುಧೋಳ ಮತ್ತು ಜಮಖಂಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್​​ಐವಿ ಕೇಸಗಳು ಕಂಡು ಬರುತ್ತಿವೆ. 2025-26ನೇ ಸಾಲಿನಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ 82 ಕೇಸ್ ಮತ್ತು ಮುಧೋಳ ತಾಲೂಕಿ‌ನಲ್ಲಿ 86 ಕೇಸ್ ಪತ್ತೆಯಾಗಿವೆ. ಕಬ್ಬು ಕಟಾವುಗಾಗಿ ಪ್ರತಿವರ್ಷ ಮಹಾರಾಷ್ಟ್ರದಿಂದ ಬರುವ ಕಬ್ಬಿನ ಗ್ಯಾಂಗ್ ಜೊತೆ ಬಾಗಲಕೋಟೆ ಜಿಲ್ಲೆಗೆ ಬರುವ ಸಾವಿರಾರು ಮಹಾರಾಷ್ಟ್ರೀಯರ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೂ ಕೂಡ ಒಬ್ಬರಿಂದ ಒಬ್ಬರಿಗೆ ಹೆಚ್​​ಐವಿ ಹರಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ ಎಚ್ಚರ: ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್​​!; ಬೆಚ್ಚಿ ಬೀಳಿಸುತ್ತೆ ಇತ್ತೀಚಿನ ಮಾಹಿತಿ

ಇನ್ನು ಹೆಚ್​​ಐವಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದಿ ನಾಟಕ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಹೆಚ್ಚು ಟೆಸ್ಟ್ ಮಾಡುವುದರ ಮೂಲಕ ಹೆಚ್​​ಐವಿ ನಿರ್ನಾಮಕ್ಕೆ‌ ಜಿಲ್ಲಾಡಳಿತ ಮುಂದಾಗಿದೆ.

ಒಟ್ಟಿನಲ್ಲಿ ಹೆಚ್​ಐವಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಂಕಿ-ಅಂಶ ಜಿಲ್ಲೆಯ ಜನರಲ್ಲಿ ನಡುಕ‌ ಹುಟ್ಟಿಸಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಿ ಸಹಕರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು