ಬೆಂಗಳೂರಿನಲ್ಲಿ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆ: ಆರೋಗ್ಯ ಇಲಾಖೆಗೂ ಟೆನ್ಷನ್ ಶುರು
ಸಿಲಿಕಾನ್ ಸಿಟಿ ಜನರೇ ಚಳಿಗಾಲ ಮುಗಿಯುವರೆಗೂ ಕೊಂಚ ಎಚ್ಚರ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಏಕೆಂದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ಯುಟ್ ಡಯಾರಿಯಲ್ ಡಿಸೀಸ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಇದು ಆರೋಗ್ಯ ಇಲಾಖೆಗೂ ಟೆನ್ಷನ್ ಹೆಚ್ಚಿಸಿದೆ.

ಬೆಂಗಳೂರು, ಡಿಸೆಂಬರ್ 03: ಸಿಲಿಕಾನ್ ಸಿಟಿ (bangaluru) ಜನರೇ ಚಳಿಗಾಲ ಮುಗಿಯುವರೆಗೂ ಕೊಂಚ ಎಚ್ಚರ. ಬೆಂಗಳೂರು ಸೇರಿದಂತೆ ಕರ್ನಾಟಕದ (Karnataka) ಜನರನ್ನು ಅಕ್ಯುಟ್ ಡಯಾರಿಯಲ್ ಡಿಸೀಸ್ ಬಿಡದೆ ಕಾಡುತ್ತಿದೆ. ಬೇಸಿಗೆಯಲ್ಲಿ ಹೆಚ್ಚು ಕಾಡುವ ಈ ಅಕ್ಯುಟ್ ಡಯಾರಿಯಲ್ ಡಿಸೀಸ್ ಸದ್ಯ ಚಳಗಾಲದಲ್ಲಿಯೂ ಶುರುವಾಗಿದೆ. ಹೀಗಾಗಿ ಎಚ್ಚರವಹಿಸುವುದು ಅಗತ್ಯವಾಗಿದೆ.
ಸಿಲಿಕಾನ್ ಸಿಟಿ ಜನರೇ ಆರೋಗ್ಯದ ಬಗ್ಗೆ ಕೊಂಚ ಎಚ್ಚರ!
ಹೌದು.. ಹೊಟ್ಟೆ ನೋವು, ಜ್ವರ, ಕರುಳು ಬೇನೆ, ಟೈಫಾಯ್ಡ್, ವೈರಲ್ ಹೆಪಟೈಟಿಸ್ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಏಕೆಂದರೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆ ಆಗುತ್ತಿದೆ. ಇದು ಆರೋಗ್ಯ ಇಲಾಖೆಯ ಟೆನ್ಷನ್ ಹೆಚ್ಚಿಸಿದೆ.
ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಕೆಲವು ದಿನಗಳಿಂದ ಕರುಳು ಬೇನೆ, ಟೈಫಾಯ್ಡ್, ವೈರಲ್ ಹೆಪಟೈಟಿಸ್‌ನಂತಹ ಕರುಳು ಸಂಬಂಧಿ ರೋಗಗಳು ಏರಿಕೆ ಕಂಡಿವೆ. ರಾಜಧಾನಿಯಲ್ಲಿ ಬದಲಾಗುತ್ತಿರುವ ವೆದರ್ನಿಂದ ಕಲುಷಿತ ನೀರು ಹಾಗೂ ಆಹಾರ ಸೇವೆನೆ ಬಗ್ಗೆ ಎಚ್ಚರವಹಿಸಬೇಕಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಕರಳು ಬೇನೆಗೆ ಸಂಬಂಧಿಸಿದಂತೆ 3221 ಕೇಸ್ ದಾಖಲಾಗಿವೆ. ಈ ವರ್ಷದಲ್ಲಿ ಜನವರಿಯಿಂದ ಇಲ್ಲಿಯವರೆಗೆ 1 ಲಕ್ಷ 66 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ.
ಚಳಿಗಾಲ ಶುರುವಾದರೂ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮಳೆ ಕೂಡ ಸುರಿಯುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ, ಖಾಯಿಲೆ ಬಗ್ಗೆ ಹೈ ಅಲರ್ಟ್ ಆಗಿದ್ದು ಜ್ವರ, ಕರುಳು ಬೇನೆ, ಟೈಫಾಯ್ಡ್, ವೈರಲ್ ಹೆಪಟೈಟಿಸ್ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ಎಚ್ಚರಿಕೆ ನೀಡಿದೆ. ಹವಾಮಾನ ಬದಲಾವಣೆ ಹಿನ್ನಲೆ ಕರಳು ಬೇನೆ, ಗ್ಯಾಸ್ಟ್ರೋ ಎಂಟರೈಟಿಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಕೆ ಸಿ.ಜನರಲ್ ಆಸ್ಪತ್ರೆಯ ಡಾ ಮುರಳಿದರ್ ಅವರು ಸಲಹೆ ನೀಡಿದ್ದಾರೆ.
ಇನ್ನು ರಾಜಧಾನಿಯ ಜನರು ಚಳಿಗಾಲ ಮುಗಿಯುವವರೆಗೂ ಎಚ್ಚರಿಕೆ ವಹಿಸುವುದು ಅಗತ್ಯವಿದೆ. ಬೀದಿಬದಿ ಕಲುಷಿತ ಆಹಾರ ಹಾಗೂ ನೀರು ಸೇವನೆಯ ಬಗ್ಗೆಯೂ ಎಚ್ಚರಿಕೆ ಅಗತ್ಯವಿದೆ.
ಅಕ್ಯುಟ್ ಡಯಾರಿಯಲ್ ಡಿಸೀಸ್ ಲಕ್ಷಣಗಳು ಏನು?
- ಕರುಳು ಸಂಬಂಧಿ ರೋಗಗಳಲ್ಲಿ ಆಗಾಗ ಭೇದಿ
- ವಾಕರಿಕೆ ಜೊತೆಗೆ ವಾಂತಿ
- ಕಿಬ್ಬೊಟ್ಟೆಯ ಸೆಳೆತ
- ಹೊಟ್ಟೆನೋವು
- ಜ್ವರ ಮತ್ತಿತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
- ಕಲುಷಿತ ನೀರು ಅಥವಾ ಆಹಾರ ಸೇವನೆಗೆ ಬಗ್ಗೆ ಎಚ್ಚರಿಕಗೆ
- ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದ ಇದು ಹರಡುತ್ತದೆ.
- ಅಶುಚಿತ್ವ ಕೂಡ ರೋಗ ಹರಡುವಿಕೆಗೆ ಕಾರಣ
ಇದನ್ನೂ ಓದಿ: ನಾಳೆಯ ಹವಾಮಾನ: 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಬೆಳಿಗ್ಗೆ ಚಳಿ ವಾತಾವರಣ
ಒಟ್ಟಿನಲ್ಲಿ ಕರುಳುಬೇನೆ ಪ್ರಕರಣಗಳಲ್ಲಿ ರೋಗಿಗಳಿಗೆ ಸಾಕಷ್ಟು ದ್ರವಾಹಾರ ನೀಡಬೇಕಿದ್ದು, ಇಲ್ಲವಾದಲ್ಲಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು, ರಾಜಧಾನಿಯ ಜನರು ಚಳಿಗಾಲ ಮುಗಿಯುವವರೆಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



