ಕರ್ನಾಟಕದಲ್ಲಿ ಹೊಸ ಹೈಟೆಕ್ ರೂಪದಲ್ಲಿ RC, DL: ಏನಿದರ ವಿಶೇಷ? ಬೆಲೆ ಎಷ್ಟು?
ಕರ್ನಾಟಕದಲ್ಲಿ ಇಂದಿನಿಂದ ಚಾಲನಾ ಪರವಾನಗಿ(ಡಿಎಲ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತಷ್ಟು ಸ್ಮಾರ್ಟ್ ಆಗಲಿದೆ. ಹೌದು...ಸಾರಿಗೆ ಇಲಾಖೆಯಿಂದ ಇಂದು (ಡಿಸೆಂಬರ್ 03) ಆಯೋಜಿಸಲಾಗಿದ್ದ ಆರ್ಸಿ ಹೊಸ ಸ್ಮಾರ್ಟ್ ಕಾರ್ಡ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದವರಿಗೆ ಹೊಸ ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಹೊಸ ಕಾರ್ಡ್ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದ್ದು. ಸ್ಕ್ಯಾನ್ ಮಾಡಿ ಕಾರ್ಡ್ ಮಾಹಿತಿ ಪಡೆಯಬಹುದು. ಒಂದು ಕಾರ್ಡ್ ಗೆ 200 ರೂ ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ 135 ರೂ ಸರ್ಕಾರಕ್ಕೆ 64.46.ಸೇವಾದಾರರ ಪಾಲು ಎಂದು ಮಾಹಿತಿ ನೀಡಿದರು.
ಬೆಂಗಳೂರು, (ಡಿಸೆಂಬರ್ 03): ಕರ್ನಾಟಕದಲ್ಲಿ ಇಂದಿನಿಂದ ಚಾಲನಾ ಪರವಾನಗಿ(ಡಿಎಲ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತಷ್ಟು ಸ್ಮಾರ್ಟ್ ಆಗಲಿದೆ. ಹೌದು…ಸಾರಿಗೆ ಇಲಾಖೆಯಿಂದ ಇಂದು (ಡಿಸೆಂಬರ್ 03) ಆಯೋಜಿಸಲಾಗಿದ್ದ ಆರ್ಸಿ ಹೊಸ ಸ್ಮಾರ್ಟ್ ಕಾರ್ಡ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದವರಿಗೆ ಹೊಸ ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಹೊಸ ಕಾರ್ಡ್ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದ್ದು. ಸ್ಕ್ಯಾನ್ ಮಾಡಿ ಕಾರ್ಡ್ ಮಾಹಿತಿ ಪಡೆಯಬಹುದು. ಒಂದು ಕಾರ್ಡ್ ಗೆ 200 ರೂ ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ 135 ರೂ ಸರ್ಕಾರಕ್ಕೆ 64.46.ಸೇವಾದಾರರ ಪಾಲು ಎಂದು ಮಾಹಿತಿ ನೀಡಿದರು.
ಒಂದು ಗಂಟೆಗೆ 500ರಿಂದ 600 ಕಾರ್ಡ್ ಪ್ರಿಂಟಿಂಗ್ ಆಗುತ್ತಿದ್ದು, ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗುತ್ತಿದೆ. ಪ್ರತಿದಿನ ಹದಿನೈದು ಸಾವಿರ ಕಾರ್ಡ್ ಗಳು ಪ್ರಿಂಟ್ ಆಗಲಿದೆ. ಇಟಲಿ ಮೂಲದ ಎರಡು ಪ್ರಿಂಟಿಂಗ್ ಮಿಷನ್ ನಿಂದ ಸ್ನಾರ್ಟ್ ಕಾರ್ಡ್ ಪ್ರಿಂಟ್ ಮಾಡಲಾಗುತ್ತಿದ್ದು, ಶಾಂತಿನಗರದಿಂದ ಕೇಂದ್ರ ಕಛೇರಿಯಿಂದ ಸ್ಮಾರ್ಟ್ ಕಾರ್ಡ್ ಗಳು ಎಲ್ಲಾ ಜಿಲ್ಲೆಗಳಿಗೆ ರವಾನೆಯಾಗಲಿವೆ. ಇನ್ನು ಹಳೆ ಕಾರ್ಡ್ ಗಳು ಎಂದಿನಂತೆ ಚಲಾವಣೆಯಲ್ಲಿರುತ್ತೆ ಎಂದು ಹೇಳಿದರು.
ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಸಿಗಲಿರುವ ಹೊಸ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತೆ. ಈಗಾಗಲೇ ಕಾರ್ಡ್ ಇರುವವರು ಹೊಸ ಸ್ಮಾರ್ಟ್ ಕಾರ್ಡ್ ಬಯಸಿದ್ದಲ್ಲಿ 200 ರೂ. ಪಾವತಿಸಬೇಕು. ಡಿಸೆಂಬರ್ 15ರಿಂದ ಹೊಸ ಡಿಎಲ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತೆ. ರೋಸ್ ಸ್ಮಾರ್ಟ್ ಸಂಸ್ಥೆ 5 ವರ್ಷಗಳ ಕಾಲ ಯೋಜನೆಯ ಟೆಂಡರ್ ಪಡೆದಿದೆ ಎಂದು ತಿಳಿಸಿದರು.
ಚಿನ್ನದಂಗಡಿ ದೋಚಿ ಬಸ್ ಸ್ಟ್ಯಾಂಡ್ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ

