AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದಿನ ಹಲ್ಲುಜ್ಜದಿದ್ದರೆ ಏನಾಗುತ್ತೆ ಎಂದು ಅಸಡ್ಡೆ ಮಾಡಿದ್ರೆ ಬರುತ್ತೆ ಅಪಾಯಕಾರಿ ಕಾಯಿಲೆ!

ಹಲ್ಲುಜ್ಜದೇ ಇರುವುದು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದರೆ ನಂಬುತ್ತೀರಾ? ಹೌದು, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಸೋಂಕು ಮತ್ತು ಬಾಯಿಯ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ವಿಷಯ ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ ಇದು ನಿಜ. ದಿನಕ್ಕೆ ಒಮ್ಮೆ ಹಲ್ಲುಜ್ಜದೇ ಇರುವುದು ಕೂಡ ಅಪಾಯಕಾರಿ. ಹಾಗಾದರೆ ಹಲ್ಲುಜ್ಜದಿದ್ದಾಗ ಬಾಯಲ್ಲಿ ಏನೆಲ್ಲಾ ಆಗುತ್ತೆ, ಇದೆಷ್ಟು ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳಿ.

ಒಂದು ದಿನ ಹಲ್ಲುಜ್ಜದಿದ್ದರೆ ಏನಾಗುತ್ತೆ ಎಂದು ಅಸಡ್ಡೆ ಮಾಡಿದ್ರೆ ಬರುತ್ತೆ ಅಪಾಯಕಾರಿ ಕಾಯಿಲೆ!
ಒಂದು ದಿನ ಹಲ್ಲುಜ್ಜದಿದ್ದರೆ ಉಂಟಾಗುವ ಸಮಸ್ಯೆ
ಪ್ರೀತಿ ಭಟ್​, ಗುಣವಂತೆ
|

Updated on: Dec 03, 2025 | 7:47 PM

Share

ಚಳಿಗಾಲದಲ್ಲಿ ಕೆಲವರು ಹಲ್ಲುಜ್ಜುವುದನ್ನೇ (Tooth brushing) ತಪ್ಪಿಸುತ್ತಾರೆ. ಒಂದು ದಿನ ಹಲ್ಲುಜ್ಜದಿದ್ದರೆ ಏನಾಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರು ಮತ್ತು ಅಧ್ಯಯನಗಳು ಈ ಸಣ್ಣ ಅಭ್ಯಾಸ ಜೀವಕ್ಕೆ ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ. ಹೌದು ದಿನಕ್ಕೆ ಒಮ್ಮೆ ಹಲ್ಲುಜ್ಜದೇ ಇರುವುದು ಕೂಡ ಅಪಾಯಕಾರಿ. ಒಟ್ಟಾರೆ ದೇಹದ ಆರೋಗ್ಯಕ್ಕಾಗಿ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಅತ್ಯಗತ್ಯ. ತಜ್ಞರು ಹೇಳುವ ಪ್ರಕಾರ, ತಿಂದ ಕೇವಲ 20 ನಿಮಿಷಗಳಲ್ಲಿ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆ ಮತ್ತು ಪಿಷ್ಟವನ್ನು ಆಮ್ಲವಾಗಿ ಪರಿವರ್ತಿಸುತ್ತವೆ. ಈ ಆಮ್ಲವು ಹಲ್ಲಿನ ಹೊರ ಪದರವಾದ ಹಲ್ಲನ್ನು ಹಾನಿಗೊಳಿಸಲು ಪ್ರಾರಂಭಿಸುತ್ತದೆ. ಹಾಗಾದರೆ ಹಲ್ಲುಜ್ಜದಿದ್ದಾಗ ಬಾಯಲ್ಲಿ ಏನೆಲ್ಲಾ ಆಗುತ್ತೆ, ಇದೆಷ್ಟು ಅಪಾಯಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಆಹಾರ ಸೇವನೆ ಮಾಡಿದ ನಂತರ, 4 -6 ಗಂಟೆಗಳಲ್ಲಿ, ಹಲ್ಲುಗಳ ಮೇಲೆ ಪ್ಲೇಕ್ ಎಂಬ ಜಿಗುಟಾದ ಪದರವು ರೂಪುಗೊಳ್ಳಲು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ, ಈ ಪ್ಲೇಕ್ ಗಟ್ಟಿಯಾಗುತ್ತದೆ ಮತ್ತು ಟಾರ್ಟರ್ ಆಗಿ ಬದಲಾಗುತ್ತದೆ. 24 ಗಂಟೆಗಳ ನಂತರ, ಒಸಡುಗಳಲ್ಲಿ ಊತ ಉಂಟಾಗುತ್ತದೆ, ಇದು ರಕ್ತಸ್ರಾವ ಮತ್ತು ದುರ್ವಾಸನೆಗೆ ಕಾರಣವಾಗಬಹುದು. ಏಮ್ಸ್ ದಂತವೈದ್ಯರ ಪ್ರಕಾರ, ನೀವು ಒಂದು ದಿನ ಹಲ್ಲುಜ್ಜುವುದನ್ನು ಬಿಟ್ಟುಬಿಟ್ಟರೆ, ನಿಮ್ಮ ಬಾಯಿಯಲ್ಲಿ ಒಂದು ಮಿಲಿಯನ್ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಜೊತೆಗೆ ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ಸಾವಿನ ಅಪಾಯ ಹೆಚ್ಚಳ: ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಹಲ್ಲುಜ್ಜದ ಜನರಿಗೆ ಸಾವಿನ ಅಪಾಯ 25% ಹೆಚ್ಚಾಗಿರುತ್ತದೆ.

ಹೃದ್ರೋಗದ ಅಪಾಯ: ನೀವು ಒಂದು ವರ್ಷ ಹಲ್ಲುಜ್ಜದಿದ್ದರೆ, ನಿಮ್ಮ ಹೃದ್ರೋಗದ ಅಪಾಯವು ಮೂರು ಪಟ್ಟು ಹೆಚ್ಚಾಗುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತಪ್ರವಾಹಕ್ಕೆ ಪ್ರವೇಶಿಸಿ ಅಪಧಮನಿಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?

ಉಸಿರಾಟದ ಸೋಂಕುಗಳು: ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಉಸಿರಾಟದ ಸೋಂಕುಗಳು ಮತ್ತು ನ್ಯುಮೋನಿಯಾವನ್ನು ಸಹ ಉಂಟುಮಾಡಬಹುದು.

ಬಾಯಿಯ ಕ್ಯಾನ್ಸರ್: ತಂಬಾಕು ಬಳಸದಿದ್ದರೂ, ಹಲ್ಲುಜ್ಜದವರಿಗೆ ಬಾಯಿಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ.

ಹಲ್ಲು ಕೊಳೆಯುವುದು: ಒಂದು ವರ್ಷದವರೆಗೆ ಹಲ್ಲುಜ್ಜದಿದ್ದರೆ, ಸಂಪೂರ್ಣವಾಗಿ ಕೊಳೆಯಬಹುದು, ಇದು ಹಲ್ಲುಕುಳಿ, ಹುಳು ಮತ್ತು ತೀವ್ರ ಒಸಡು ನೋವಿಗೆ ಕಾರಣವಾಗಬಹುದು ಮತ್ತು ಹಲ್ಲುಗಳು ಸಡಿಲಗೊಂಡು ಬಿದ್ದುಹೋಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!