AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಪಿ ಕಡಿಮೆಯಾದ್ರೂ ಹೃದಯಾಘಾತವಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ?

ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದ ವಿಚಾರ. ಆದರೆ ಹೊಸ ಅಧ್ಯಯನವು ಕಡಿಮೆ ರಕ್ತದೊತ್ತಡವು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಕೂಡ ಹೃದಯಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದೆ. ಹಾಗಾಗಿ ಹೃದಯ ಸಂಬಂಧಿತ ಸಮಸ್ಯೆ ಇರುವವರು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಜೊತೆಗೆ ಈ ರೀತಿ ಆಗುವುದಕ್ಕೆ ಕಾರಣವೇನು, ಕಡಿಮೆ ರಕ್ತದೊತ್ತಡ ಎಷ್ಟು ಅಪಾಯಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಿಪಿ ಕಡಿಮೆಯಾದ್ರೂ ಹೃದಯಾಘಾತವಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ?
Low Blood Pressure And Heart Attack Risk
ಪ್ರೀತಿ ಭಟ್​, ಗುಣವಂತೆ
|

Updated on: Feb 27, 2026 | 9:18 PM

Share

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಬುದು ತಿಳಿದ ವಿಚಾರ, ಆದರೆ ಹೊಸ ಸಂಶೋಧನೆಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ, ಕಡಿಮೆ ರಕ್ತದೊತ್ತಡ (Low Blood Pressure) ಕೂಡ ಹೃದಯಾಘಾತದ (Heart Attack) ಅಪಾಯವನ್ನು ಹೆಚ್ಚಿಸುತ್ತದೆ. ಹೌದು, ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಸೇರಿದಂತೆ ಅಂತರಾಷ್ಟ್ರೀಯ ಸಂಸ್ಥೆಗಳ ತಂಡ ಈ ಅಧ್ಯಯನ ನಡೆಸಿದ್ದು, ರಕ್ತದೊತ್ತಡ 100/80 ಎಂಎಂಎಚ್‌ಜಿ (mmHg) ಗಿಂತ ಕಡಿಮೆಯಿದ್ದವರಲ್ಲಿ, ಹೃದಯಾಘಾತದ ಅಪಾಯ ಹೆಚ್ಚಾಗಿ ಕಂಡುಬಂದಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದು, ಹೃದಯ ಸಂಬಂಧಿತ ಸಮಸ್ಯೆ ಇರುವವರು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಜೊತೆಗೆ ಈ ರೀತಿ ಆಗುವುದಕ್ಕೆ ಕಾರಣವೇನು, ಕಡಿಮೆ ರಕ್ತದೊತ್ತಡ ಎಷ್ಟು ಅಪಾಯಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯ ರಕ್ತದೊತ್ತಡ ಹೇಗಿರಬೇಕು?

ಸಂಶೋಧನೆಯು ರಕ್ತದೊತ್ತಡ ಸುಮಾರು 120/80 ಎಂಎಂಎಚ್‌ಜಿ ಆಗಿರಬೇಕು. ರಕ್ತದೊತ್ತಡ 90/60 ಕ್ಕಿಂತ ಕಡಿಮೆಯಿದ್ದರೆ, ಅದನ್ನು ಕಡಿಮೆ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಈ ಮಟ್ಟದ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ರಕ್ತದೊತ್ತಡ ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಅವರು ಹೇಳುವ ಪ್ರಕಾರ, ಕಡಿಮೆ ರಕ್ತದೊತ್ತಡವು ಒಂದು ಪ್ರಮುಖ ಸಮಸ್ಯೆಯಾಗಿದ್ದು ಜನ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯ ಮಿತಿಗಿಂತ ಹೆಚ್ಚಿನ ಅಥವಾ ಕಡಿಮೆ ರಕ್ತದೊತ್ತಡವಿದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೈಬಿಪಿ, ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತದೆಯೇ? ನೀವು ತಿಳಿಯಬೇಕಾದ ವಿಷಯಗಳಿವು!

ಕಡಿಮೆ ರಕ್ತದೊತ್ತಡ ಎಷ್ಟು ಅಪಾಯಕಾರಿ?

ರಕ್ತದೊತ್ತಡ ಕಡಿಮೆಯಾಗಲು ಪ್ರಾರಂಭಿಸಿದಾಗ, ಆಮ್ಲಜನಕ ಮೆದುಳಿಗೆ ಸರಿಯಾಗಿ ತಲುಪುವುದಿಲ್ಲ, ಇದು ಮೆದುಳಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ, ಆಮ್ಲಜನಕ ಹೃದಯವನ್ನು ತಲುಪದಿದ್ದರೆ, ಅದು ಹೃದಯದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಯಾವುದೇ ಕಾರಣವಿರಲಿ, ಆಮ್ಲಜನಕದ ಪೂರೈಕೆ ಇದ್ದಕ್ಕಿದ್ದಂತೆ ಕಡಿಮೆಯಾದರೆ, ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸಬಹುದು, ಅದು ಸಾವಿಗೆ ಕಾರಣವಾಗಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ