AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?

ರಾತ್ರಿ ಹಲ್ಲುಜ್ಜದೇ ಮಲಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳಿರುವುದಾಗಿ ಡಾ. ಕುನಾಲ್ ಸೂದ್ ರೀಲ್ ಒಂದನ್ನು ಹಂಚಿಕೊಂಡಿದ್ದಾರೆ. ರಾತ್ರಿ ನಿದ್ರೆ ಬಂದುಬಿಡ್ತು ಹಾಗಾಗಿ ಹಲ್ಲುಜ್ಜಲು ಮರೆತುಹೋಯಿತು ಎಂಬುವ ಸಬೂಬು ನೀಡಬೇಡಿ ಇದು ದೀರ್ಘಾವಧಿಯಲ್ಲಿ ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡಬಹುದು, ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ಹೇಳಿದ್ದಾರೆ.

ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?
ಹಲ್ಲುಜ್ಜುವುದು Image Credit source: Dr Michael Dental Clinic
ನಯನಾ ರಾಜೀವ್
|

Updated on:Mar 17, 2025 | 8:20 AM

Share

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ನಮಗೆಲ್ಲಾ ತಿಳಿದಿರುವ ಬಾಯಿ ಸ್ವಚ್ಛತೆ ಮಂತ್ರ. ಇದು ಹಲ್ಲಿನ ಹುಳುಕು, ದುರ್ವಾಸನೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಯುತ್ತದೆ. ಹಾಗಾದರೆ ರಾತ್ರಿ ಹಲ್ಲುಜ್ಜುವುದು ಹಾಗೂ ಹೃದಯದ ಆರೋಗ್ಯ ಎರಡಕ್ಕೂ ಏನು ಸಂಬಂಧವಿದೆ ಅದಕ್ಕೆ ಉತ್ತರ ಇಲ್ಲಿದೆ. ರಾತ್ರಿ ನಿದ್ರೆ ಬಂದುಬಿಡ್ತು ಹಾಗಾಗಿ ಹಲ್ಲುಜ್ಜಲು ಮರೆತುಹೋಯಿತು ಎಂಬುವ ಸಬೂಬು ನೀಡಬೇಡಿ ಇದು ದೀರ್ಘಾವಧಿಯಲ್ಲಿ ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡಬಹುದು, ಹೃದಯಾಘಾತಕ್ಕೂ ಕಾರಣವಾಗಬಹುದು.

ಡಾ. ಕುನಾಲ್​ ಸೂದ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಒಂದು ರೀಲ್ ಹಂಚಿಕೊಂಡಿದ್ದು, ಅದರಲ್ಲಿ ನಿಮ್ಮ ಬಾಯಿಯ ಆರೋಗ್ಯ ಎಷ್ಟು ಮುಖ್ಯ ಎಂಬುದರ ಬಗ್ಗೆ ವಿವರಿಸಿದ್ದಾರೆ. ರಾತ್ರಿ ವೇಳೆ ಹಲ್ಲುಜ್ಜುವುದನ್ನು ನಿರ್ಲಕ್ಷಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ರಾತ್ರಿ ಹಲ್ಲುಜ್ಜುವುದುನ್ನು ಕೇವಲ ಹುಳುಕು ಹಲ್ಲಾಗುವುದನ್ನು ತಪ್ಪಿಸುವುದಕ್ಕಾಗಿ ಅಲ್ಲ. ಅದಕ್ಕಿಂತ ಹೆಚ್ಚು ಅಪಾಯವನ್ನು ತಂದುಕೊಳ್ಳುವ ಸಾಧ್ಯತೆ ಇದೆ.

ನಿಮ್ಮ ಬಾಯಿಯಿಂದ ಬ್ಯಾಕ್ಟೀರಿಯಾಗಳು ನಿಮ್ಮ ರಕ್ತನಾಳವನ್ನು ಪ್ರವೇಶಿಸಬಹುದು, ಇದು ಕಾಲಾನಂತರದಲ್ಲಿ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಬಹುದು. ಉರಿಯೂತ ಉಂಟು ಮಾಡಬಹುದು. ಮೌಖಿಕ ನೈರ್ಮಲ್ಯವು ನೇರವಾಗಿ ಹೃದಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸದಿದ್ದರೂ ಬಲವಾದ ಸಂಬಂಧವಿದೆ ಎಂಬುದನ್ನು ಹೇಳಿದ್ದಾರೆ.

ಇದನ್ನೂ ಓದಿ
Image
ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್​ ಕಾರಕ ಅಂಶ ಪತ್ತೆ
Image
ಮದುವೆಯಾದ ಮೇಲೆ ಗಂಡಸರಿಗೆ ಹೊಟ್ಟೆ ಭಾಗದಲ್ಲಿ ಬೊಜ್ಜು ಕಂಡು ಬರಲು ಇದೆ ಕಾರಣ
Image
ಮದ್ಯಪಾನ ತ್ಯಜಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್‌ಗೆ ಹಾನಿ!
Image
ಸಿಗರೇಟ್ ಸೇದುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂಬುದು ಸತ್ಯವೇ?

ಮತ್ತಷ್ಟು ಓದಿ: ಹೋಟೆಲ್ಅಂಗಡಿಗಳಲ್ಲಿ ಪೇಪರ್ ಕಪ್ ಗಳಲ್ಲಿ ಟೀ ಹೀರೋರು ಇನ್ಮುಂದೆ ಹುಷಾರಾಗಿರಿ!

ಅಧ್ಯಯನಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದಾರೆ. 2023ರಲ್ಲಿ ಪ್ರಕಟವಾದ ಅಧ್ಯಯನದ ವರದಿ ಬಗ್ಗೆ ಮಾತನಾಡಿರುವ ಅವರು ರಾತ್ರಿ ಹಲ್ಲುಜ್ಜದೇ ಇರುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಕೇವಲ ನಿಮ್ಮ ಮುಖದಲ್ಲಿ ನಿಮ್ಮ ನಗು ಮತ್ತು ಉತ್ತಮ ಉಸಿರಾಟ ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ. ಕೇವಲ ಎರಡು ಬಾರಿಯಲ್ಲ ಅದಕ್ಕಿಂತ ಹೆಚ್ಚು ಮಾಡಿ ಬಾಯಿಯನ್ನು ಸ್ವಚ್ಛಗೊಳಿಸಬೇಕು, ಆದರೆ ಅಧ್ಯಯನದಲ್ಲಿ ಕನಿಷ್ಠ 2 ಬಾರಿಯಾದರೂ ಹಲ್ಲುಜ್ಜುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.

ಸೂಚನೆ: ಇದು ಟಿವಿ9ನ ವೈಯಕ್ತಿಕ ಅಭಿಪ್ರಾಯವಾಗಿರುವುದಿಲ್ಲ, ಅಧ್ಯಯನ ವರದಿಯಲ್ಲಿ ಹೇಳಲಾದ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:20 am, Mon, 17 March 25

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ