AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​ಐಆರ್ ಶಾಕ್: ಬೆಂಗಳೂರು ಮತದಾರರ ಪಟ್ಟಿಯಿಂದ ಪ್ರಕಾಶ್ ರೈ ಹೆಸರು ಡಿಲೀಟ್

Prakash Raj vote: ಚುನಾವಣೆಯನ್ನು ಪಾರದರ್ಶಕವಾಗಿಸುವ ಉದ್ದೇಶದಿಂದ ಅಕ್ರಮ ಮತದಾರು, ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮತ ಹೊಂದಿರುವವರು ಇನ್ನೂ ಹಲವು ಸಮಸ್ಯಾತ್ಮಕ ಮತದಾರರನ್ನು ಗುರುತಿಸಿ ಎಸ್​​ಐಆರ್ ಪ್ರಕ್ರಿಯೆ ಮೂಲಕ ಸ್ವಚ್ಛ ಮಾಡಲಾಗುತ್ತಿದೆ. ಇದೀಗ ಖ್ಯಾತ ನಟ ಪ್ರಕಾಶ್ ರೈ ಅವರ ವೋಟನ್ನು ಸಹ ಎಸ್​​ಐಆರ್ ಪ್ರಕ್ರಿಯೆ ಅಡಿಯಲ್ಲಿ ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಖುದ್ದು ಪ್ರಕಾಶ್ ರೈ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್​​ಐಆರ್ ಶಾಕ್: ಬೆಂಗಳೂರು ಮತದಾರರ ಪಟ್ಟಿಯಿಂದ ಪ್ರಕಾಶ್ ರೈ ಹೆಸರು ಡಿಲೀಟ್
Prakash Raj
ಮಂಜುನಾಥ ಸಿ.
|

Updated on: Aug 11, 2026 | 11:02 AM

Share

ಮುಖ್ಯಾಂಶಗಳು

  • ಮತದಾರರ ಪಟ್ಟಿಯಿಂದ ಪ್ರಕಾಶ್ ರೈ ಹೆಸರು ಡಿಲೀಟ್
  • ಬೆಂಗಳೂರಿನ ಶಾಂತಿನಗರದಲ್ಲಿ ಮತದಾನದ ಹಕ್ಕು ಹೊಂದಿದ್ದ ನಟ.
  • ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಲು ಕಾರಣವೇನು?

ಕರ್ನಾಟಕದಲ್ಲಿ ಎಸ್​​ಐಆರ್ (Special Intensive Revision – SIR) ಪ್ರಕ್ರಿಯೆ ಚಾಲ್ತಿಯಲ್ಲಿದೆ. ಚುನಾವಣೆಯನ್ನು ಪಾರದರ್ಶಕವಾಗಿಸುವ ಉದ್ದೇಶದಿಂದ ಅಕ್ರಮ ಮತದಾರು, ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮತ ಹೊಂದಿರುವವರು ಇನ್ನೂ ಹಲವು ಸಮಸ್ಯಾತ್ಮಕ ಮತದಾರರನ್ನು ಗುರುತಿಸಿ ಎಸ್​​ಐಆರ್ ಪ್ರಕ್ರಿಯೆ ಮೂಲಕ ಸ್ವಚ್ಛ ಮಾಡಲಾಗುತ್ತಿದೆ. ಇದೀಗ ಖ್ಯಾತ ನಟ ಪ್ರಕಾಶ್ ರೈ ಅವರ ವೋಟನ್ನು ಸಹ ಎಸ್​​ಐಆರ್ ಪ್ರಕ್ರಿಯೆ ಅಡಿಯಲ್ಲಿ ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಖುದ್ದು ಪ್ರಕಾಶ್ ರೈ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಪ್ರಕಾಶ್ ರೈ, ‘ಎಸ್​​ಐಆರ್ ಕಾರಣಕ್ಕೆ ಬೆಂಗಳೂರಿನಿಂದ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ನಾನೂ ಸಹ ಒಬ್ಬ. ನಾನು ಹುಟ್ಟಿ, ಬೆಳೆದ ಕ್ಷೇತ್ರದಿಂದಲೇ ನನ್ನ ಮತವನ್ನು ತೆಗೆದು ಹಾಕಲಾಗಿದೆ. ನಾನು ಅದೇ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸಹ ಸ್ಪರ್ಧಿಸಿದ್ದೆ. ಆದರೂ ಸಹ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದು ಜೋಕ್ ಅಲ್ಲದೆ ಮತ್ತೇನು?’ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದ್ದಾರೆ.

2024 ರಲ್ಲಿ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದ, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್​​ನಲ್ಲಿ ಮತದಾನ ಸಹ ಮಾಡಿದರು. ಆದರೆ ಪ್ರಕಾಶ್ ರೈ ಅವರು ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದು ಕೆಲ ವರ್ಷಗಳ ಹಿಂದೆಯೇ ದೂರು ದಾಖಲಾಗಿತ್ತು. 2019ರಲ್ಲಿಯೇ ಪ್ರಕಾಶ್ ರೈ ವಿರುದ್ಧ, ಒಂದಕ್ಕಿಂತಲೂ ಹೆಚ್ಚು ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಕ್ಕೆ ದೂರು ದಾಖಲಾಗಿತ್ತು. ಅದರ ವಿಚಾರಣೆಯೂ ಚಾಲ್ತಿಯಲ್ಲಿತ್ತು. ಪ್ರಕಾಶ್ ರೈ ಅವರು ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಒಂದು, ಚೆನ್ನೈನ ವಲಚೆರಿಯಲ್ಲಿ ಎರಡು, ತೆಲಂಗಾಣದ ಸೆರಿಲಿಂಗಪಲ್ಲಿಯ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಗೈರು ಹಾಜರಾದ ಕಾರಣ, ವಿಚಾರಣೆಯಲ್ಲಿ ಪಾಲ್ಗೊಳ್ಳದ ಕಾರಣ ಪ್ರಕಾಶ್ ರೈ ವಿರುದ್ಧ 2025ರಲ್ಲಿ ನ್ಯಾಯಾಲಯವು ವಾರೆಂಟ್ ಹೊರಡಿಸಿತು. ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10, 2026ಕ್ಕೆ ನಟ ಪ್ರಕಾಶ್ ರೈ ಷರತ್ತುಬದ್ಧ ಜಾಮೀನು ಪಡೆದು ಕೊಂಡರು. ಪ್ರಕರಣ ಈಗಲೂ ವಿಚಾರಣೆಯ ಹಂತದಲ್ಲಿದೆ. ಒಂದಕ್ಕಿಂತಲೂ ಹೆಚ್ಚು ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿರುವ ಕಾರಣಕ್ಕೆ ಈಗ ಎಸ್​​ಐಆರ್ ಪ್ರಕ್ರಿಯೆಯಲ್ಲಿ ಪ್ರಕಾಶ್ ರೈ ವೋಟು ಡಿಲೀಟ್ ಆಗಿರುವ ಸಾಧ್ಯತೆ ಇದೆ.

ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ಮಾತನಾಡಿರುವ ಪ್ರಕಾಶ್ ರೈ, ‘ನನ್ನ ಮತ ಡಿಲೀಟ್ ಆಗಿದೆ. ಅದನ್ನು ಮರಳಿ ಪಡೆಯಲು ಏನೇನು ಮಾಡಬೇಕೊ ಅದೆಲ್ಲವನ್ನೂ ಮಾಡುತ್ತೇನೆ. ಎಷ್ಟು ದಾಖಲೆಗಳನ್ನು ತೋರಿಸಬೇಕಾಗುತ್ತದೆಯೋ ನೋಡೋಣ. ನೀವು ನಿಮಗೆ ಮತಹಾಕದವ ಮತವನ್ನು ಡಿಲೀಟ್ ಮಾಡಿಬಿಡಬಹುದು ಆದರೆ ನಾವು ಸುಮ್ಮನೆ ಕೂರುವವರಲ್ಲ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?