AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆಯ ಕೊರತೆ ಮಹಿಳೆಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತಜ್ಞರಿಂದ ಮಹತ್ವದ ಮಾಹಿತಿ

ಮಹಿಳೆಯರಿಗೆ ಪುರುಷರಿಗಿಂತ ಸ್ವಲ್ಪ ಹೆಚ್ಚು ನಿದ್ರೆ ಬೇಕಾಗಬಹುದು. ಆದರೆ ನಿದ್ರೆಯ ಅವಧಿಗಿಂತ ಅದರ ಗುಣಮಟ್ಟ ಮತ್ತು ನಿರಂತರತೆ ಹೆಚ್ಚು ಮುಖ್ಯ. ಆರೋಗ್ಯಕರ ಜೀವನಶೈಲಿ, ನಿಯಮಿತ ದಿನಚರಿ ಮತ್ತು ಉತ್ತಮ ನಿದ್ರೆಯ ಅಭ್ಯಾಸಗಳು ಮಹಿಳೆಯರ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಬಹುದು. ಆದರೆ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ನಿದ್ರೆ ಬೇಕು ಎನ್ನುವುದಕ್ಕೆ ಕಾರಣವೇನು, ಮಹಿಳೆಯರ ನಿದ್ರೆಯ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ನಿದ್ರೆಯ ಕೊರತೆ ಮಹಿಳೆಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತಜ್ಞರಿಂದ ಮಹತ್ವದ ಮಾಹಿತಿ
Women Need More Sleep Than MenImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 10, 2026 | 8:22 PM

Share

ಆರೋಗ್ಯಕ್ಕೆ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಒಳ್ಳೆಯ ನಿದ್ರೆ ಕೂಡ ಅಷ್ಟೇ ಮುಖ್ಯ. ಆದರೆ ಮಹಿಳೆಯರು ಮತ್ತು ಪುರುಷರ ನಿದ್ರೆಯ ಅಗತ್ಯ ಒಂದೇ ರೀತಿಯಾಗಿರುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗಿಂತ ಸ್ವಲ್ಪ ಹೆಚ್ಚು ನಿದ್ರೆ ಬೇಕಾಗಬಹುದು. ಇದಕ್ಕೆ ಕೇವಲ ದೈಹಿಕ ಶ್ರಮವಲ್ಲ, ಹಾರ್ಮೋನ್‌ಗಳ ಬದಲಾವಣೆ, ಮಾನಸಿಕ ಒತ್ತಡ, ಗರ್ಭಾವಸ್ಥೆ, ಮುಟ್ಟಿನ ಅವಧಿ ಮತ್ತು ಮೆನೋಪಾಸ್‌ನಂತಹ ಹಲವು ಕಾರಣಗಳಿವೆ. ಸಾಕಷ್ಟು ಗಂಟೆ ಹಾಸಿಗೆಯಲ್ಲಿ ಮಲಗುವುದಷ್ಟೇ ನಿದ್ರೆಯ ಆರೋಗ್ಯಕ್ಕೆ ಸಾಕಾಗುವುದಿಲ್ಲ. ನಿದ್ರೆ ಪದೇಪದೇ ಕದಡುತ್ತಿದ್ದರೆ ಅಥವಾ ನಿದ್ರೆಯ ಗುಣಮಟ್ಟ ಕಡಿಮೆಯಾಗಿದ್ದರೆ, ಬೆಳಗ್ಗೆ ಎದ್ದ ನಂತರವೂ ಆಯಾಸ ಕಂಡುಬರಬಹುದು. ಹಾಗಾದರೆ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ನಿದ್ರೆ ಬೇಕು ಎನ್ನುವುದಕ್ಕೆ ಕಾರಣವೇನು, ಮಹಿಳೆಯರ ನಿದ್ರೆಯ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ನಿದ್ರೆ ಏಕೆ ಬೇಕು?

Cleveland Clinic ಪ್ರಕಾರ, ಮಹಿಳೆಯರಿಗೆ ಪುರುಷರಿಗಿಂತ ಸ್ವಲ್ಪ ಹೆಚ್ಚು ನಿದ್ರೆ ಬೇಕಾಗಲು ಹಾರ್ಮೋನ್‌ಗಳ ಬದಲಾವಣೆ ಮತ್ತು ನಿದ್ರೆಯ ಮಾದರಿಯಲ್ಲಿನ ವ್ಯತ್ಯಾಸ ಪ್ರಮುಖ ಕಾರಣಗಳಾಗಿರಬಹುದು. ಮಹಿಳೆಯರಲ್ಲಿ ಮುಟ್ಟಿನ ಅವಧಿ, ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಂದರ್ಭದಲ್ಲಿ ಹಾರ್ಮೋನ್‌ಗಳಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತವೆ. ಇವು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರ ಜೊತೆಗೆ ಮಕ್ಕಳ ಆರೈಕೆ, ರಾತ್ರಿ ಪದೇಪದೇ ಎಚ್ಚರಗೊಳ್ಳುವುದು ಮತ್ತು ದಿನನಿತ್ಯದ ಜವಾಬ್ದಾರಿಗಳೂ ನಿದ್ರೆಯ ಅವಧಿಯನ್ನು ಕಡಿಮೆ ಮಾಡಬಹುದು. ಕೆಲವು ಅಂದಾಜುಗಳ ಪ್ರಕಾರ, ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ ಸುಮಾರು 11 ನಿಮಿಷ ಹೆಚ್ಚು ನಿದ್ರೆ ಬೇಕಾಗಬಹುದು.

ಹಾರ್ಮೋನ್‌ಗಳು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಮುಟ್ಟಿನ ಸಮಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದ ಕೆಲ ಮಹಿಳೆಯರಿಗೆ ನಿದ್ರೆ ಸರಿಯಾಗಿ ಬಾರದಿರಬಹುದು. ಗರ್ಭಾವಸ್ಥೆಯಲ್ಲಿಯೂ ಪದೇಪದೇ ಮೂತ್ರ ವಿಸರ್ಜನೆ ಮತ್ತು ಇತರ ಬದಲಾವಣೆಗಳಿಂದ ನಿದ್ರೆ ಹಾಳಾಗಬಹುದು. ಮೆನೋಪಾಸ್ ಸಮಯದಲ್ಲಿ ಹಾಟ್ ಫ್ಲ್ಯಾಶ್, ರಾತ್ರಿ ಬೆವರುವುದು ಮತ್ತು ಹಾರ್ಮೋನ್‌ಗಳ ಬದಲಾವಣೆಗಳಿಂದಾಗಿ ನಿದ್ರೆ ಪದೇಪದೇ ಹಾಳಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿದ್ರೆ ಮಾಡುವಾಗ ಈ ಸ್ಲೀಪಿಂಗ್ ಪೊಸಿಷನ್ ಆಯ್ಕೆ ಮಾಡಿಕೊಳ್ಳಿ! ಗೊತ್ತಿರಬೇಕಾದ ಆರೋಗ್ಯದ ಮಾಹಿತಿ

ನಿದ್ರೆ ಕಡಿಮೆಯಾದರೆ ಏನಾಗಬಹುದು?

ಸರಿಯಾಗಿ ನಿದ್ರೆ ಆಗದಿದ್ದರೆ ದಿನವಿಡೀ ಆಯಾಸ, ಗಮನ ಕೇಂದ್ರೀಕರಿಸಲು ಕಷ್ಟ, ಮೂಡ್ ಬದಲಾವಣೆ ಮತ್ತು ಕೆಲಸದ ಸಾಮರ್ಥ್ಯದಲ್ಲಿ ಇಳಿಕೆ ಕಾಣಿಸಿಕೊಳ್ಳಬಹುದು. ನಿದ್ರೆಯ ಗುಣಮಟ್ಟ ಸರಿಯಾಗಿ ಆಗದಿದ್ದರೆ ಅದರ ಮೂಲ ಕಾರಣವನ್ನು ಗುರುತಿಸುವುದು ಮುಖ್ಯ. ಕೇವಲ ಹೆಚ್ಚು ಸಮಯ ಹಾಸಿಗೆಯಲ್ಲಿ ಕಳೆಯುವುದಕ್ಕಿಂತ ನಿರಂತರ ಮತ್ತು ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಬೇಕು.

ಮಹಿಳೆಯರು ಚೆನ್ನಾಗಿ ನಿದ್ರೆ ಮಾಡಲು ಏನು ಮಾಡಬೇಕು?

ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಸ್ಕ್ರೀನ್‌ಗಳ ಬಳಕೆಯನ್ನು ಕಡಿಮೆ ಮಾಡಿ. ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು ಮತ್ತು ಶಬ್ದ ಇರದಂತೆ ನೋಡಿಕೊಳ್ಳಿ. ಸಂಜೆಯ ನಂತರ ಚಹಾ, ಕಾಫಿ ಸೇರಿದಂತೆ ಹೆಚ್ಚು ಕ್ಯಾಫೀನ್ ಇರುವ ಪಾನೀಯಗಳನ್ನು ಕಡಿಮೆ ಮಾಡುವುದು ಉತ್ತಮ. ಹಗಲಿನಲ್ಲಿ ನಿಯಮಿತವಾಗಿ ದೈಹಿಕ ಚಟುವಟಿಕೆ ನಡೆಸಿ. ಆದರೆ ಮಲಗುವ ಸಮಯಕ್ಕೆ ಮುನ್ನ ಅತಿಯಾದ ವ್ಯಾಯಾಮ ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ