Divya Suresh: ಬಿಗ್​ ಬಾಸ್​ ಮನೆ ಸೇರಿರುವ ದಿವ್ಯಾ ಸುರೇಶ್​ ಹಳೆಯ ಮಾದಕ​ ವಿಡಿಯೋ ವೈರಲ್​!

ದಿವ್ಯಾ ಸುರೇಶ್​ ಮಾಡೆಲಿಂಗ್​ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಇವರು ಡಿಗ್ರೀ ಕಾಲೇಜ್​ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದರು.

Divya Suresh: ಬಿಗ್​ ಬಾಸ್​ ಮನೆ ಸೇರಿರುವ ದಿವ್ಯಾ ಸುರೇಶ್​ ಹಳೆಯ ಮಾದಕ​ ವಿಡಿಯೋ ವೈರಲ್​!
ದಿವ್ಯಾ ಸುರೇಶ್​
Follow us
ರಾಜೇಶ್ ದುಗ್ಗುಮನೆ
|

Updated on: Mar 13, 2021 | 4:48 PM

ಬಿಗ್​ ಬಾಸ್​ ಮನೆ ಸೇರಿರುವ ದಿವ್ಯಾ ಸುರೇಶ್​ ತುಂಬಾನೇ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಲ್ಯಾಗ್​ ಮಂಜು ಜತೆಗಿನ ಒಡನಾಟ. ಬಿಗ್​ ಬಾಸ್​ ಮನೆ ಸೇರಿದ ಮೊದಲ ದಿನದಿಂದಲೂ ಇಬ್ಬರೂ ತುಂಬಾನೇ ಅನ್ಯೋನ್ಯವಾಗಿದ್ದಾರೆ. ಹೀಗಾಗಿ, ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಚರ್ಚೆ ಜೋರಾಗಿದೆ. ಹೀಗಿರುವಾಗಲೇ ದಿವ್ಯಾ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ಅವರು ತುಂಬಾನೇ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ದಿವ್ಯಾ ಸುರೇಶ್​ ಮಾಡೆಲಿಂಗ್​ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಇವರು ಡಿಗ್ರೀ ಕಾಲೇಜ್​ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಪಾರ್ವತಿ ಅನ್ನೋದು ಅವರ ಪಾತ್ರದ ಹೆಸರು. ಪಾರ್ವತಿ ಪೊಲೀಸ್​ ಅಧಿಕಾರಿಯ ಮಗಳು. ಶಿವ ಎಂಬ ಕೆಳವರ್ಗದವನನ್ನು ಈಕೆ ಮದುವೆ ಆಗುತ್ತಾಳೆ. ಅವನನ್ನು ಮದುವೆ ಮಾಡಿಕೊಂಡು ಓಡಿ ಹೋಗುತ್ತಾಳೆ. ನಂತರ ಏನಾಗುತ್ತದೆ ಎನ್ನುವುದೇ ಸಿನಿಮಾದ ಕತೆ.

ಈ ಸಿನಿಮಾದಲ್ಲಿ ದಿವ್ಯಾ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಯೋ ಯೂಟ್ಯೂಬ್​ನಲ್ಲಿ ಬರೋಬ್ಬರಿ 20 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಇನ್ನು, ಈ ವಿಡಿಯೋ ನೋಡಿದ ಅನೇಕರು ಬಿಗ್​ ಬಾಸ್​ 8 ಮನೆ ಸೇರಿರುವ ದಿವ್ಯಾ ಸುರೇಶ್​ ಕಣ್ರೋ ಇವಳು ಎಂದು ಕಮೆಂಟ್​ ಮಾಡಿದ ಅಚ್ಚರಿ ಹೊರ ಹಾಕಿದ್ದಾರೆ.

ರೂಪದರ್ಶಿ, ಸಿನಿಮಾ ನಟಿ ಆಗಿರುವ ದಿವ್ಯಾ ಸುರೇಶ್, 2017ರಲ್ಲಿ ‘ಸೌತ್ ಇಂಡಿಯಾ ಮಿಸ್’ ಪಟ್ಟ ಗೆದ್ದಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ ‘ಹಿಲ್ಟನ್ ಹೌಸ್’ ಮೂಲಕ ದಿವ್ಯ ಸುರೇಶ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ನರೇಂದ್ರ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. 2019ರಲ್ಲಿ ತೆರೆಕಂಡ ‘ಡಿಗ್ರಿ ಕಾಲೇಜ್’ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲೂ ಮಿಂಚಿದ್ದರು.

ಇದನ್ನೂ ಓದಿ: BBK8: ‘ಮಂಜ ಯಾವತ್ತಿದ್ರೂ ನನ್ನವನು’: ದಿವ್ಯಾ ಉರುಡುಗಗೆ ಎಚ್ಚರಿಕೆ ನಿಡಿದ ದಿವ್ಯಾ ಸುರೇಶ್​!