AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆಗೆ ಟಫ್​ ಕಾಂಪಿಟೀಷನ್​ ಕೊಡೋಕೆ ಬಂದ್ರು ಮತ್ತೋರ್ವ ನಟಿ!

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟಿ ಪೂಜಾ ಹೆಗ್ಡೆ ಅವರಿಗೆ ಕರ್ನಾಟಕದ ಹಿನ್ನೆಲೆ ಇದೆ. ಈಗ ಇಬ್ಬರಿಗೂ ಕಾಂಪಿಟೇಷನ್​ ಕೊಡೋಕೇ ಮತ್ತೋರ್ವ ನಟಿ ರೆಡಿ ಆಗಿದ್ದಾರೆ.

ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆಗೆ ಟಫ್​ ಕಾಂಪಿಟೀಷನ್​ ಕೊಡೋಕೆ ಬಂದ್ರು ಮತ್ತೋರ್ವ ನಟಿ!
ಪೂಜಾ ಹೆಗ್ಡೆ-ರಶ್ಮಿಕಾ ಮಂದಣ್ಣ
ರಾಜೇಶ್ ದುಗ್ಗುಮನೆ
|

Updated on: Mar 13, 2021 | 6:45 PM

Share

ಕೊಡಗಿನ ರಶ್ಮಿಕಾ ಮಂದಣ್ಣ ಈಗ ಟಾಲಿವುಡನ್​​ ಸ್ಟಾರ್ ಹೀರೋಯಿನ್‌. ಈಗಾಗಲೇ ತೆಲುಗಿನ ಸೂಪರ್ ಸ್ಟಾರ್‌ಗಳಾದ ಮಹೇಶ್ ಬಾಬು, ನಾನಿ ಮತ್ತು ವಿಜಯ್ ದೇವರಕೊಂಡ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ. ಅವರ ನಟನೆಯ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿನಿ ಪ್ರೇಮಿಗಳ ಮನ ಗೆದ್ದಿರುವ ಮತ್ತೋರ್ವ ಟಾಲಿವುಡ್​​ನ ಸ್ಟಾರ್ ಕನ್ನಡತಿ ಅಂದ್ರೆ ಅದು ಪೂಜಾ ಹೆಗ್ಡೆ. ಇವರು ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಹವಾ ಮಾಡುತ್ತಿದ್ದಾರೆ. ಈಗ ಇವರಿಬ್ಬರಿಗೆ ಕಾಂಪಿಟೇಶನ್​ ಕೋಡಕೇ ಮತ್ತೋರ್ವ ನಟಿ ರೆಡಿ ಆಗಿದ್ದಾರೆ. ಅವರು ಬೇರಾರು ಅಲ್ಲಿ ಕೃತಿ ಶೆಟ್ಟಿ. ತೆಲುಗಿನ ‘ಉಪ್ಪೇನಾ’ ಸಿನಿಮಾ ಬಿಡುಗಡೆಗೆ ಮುಂಚಿತವಾಗಿಯೇ ತಮ್ಮ ನೋಟದಿಂದ ಎಲ್ಲರ ಗಮನ ಸೆಳೆದಿದ್ದರು ನಟಿ ಕೃತಿ ಶೆಟ್ಟಿ. ‘ಉಪ್ಪೇನಾ’ ದಲ್ಲಿನ ಅಭಿನಯವಂತೂ ಈಗ ಎಲ್ಲರ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಮೂಲಕ 17 ವರ್ಷದ ಬೆಡಗಿ ಈಗ ಎಲ್ಲರ ಮನ ಕದ್ದಿದ್ದಾರೆ. ಹೀಗಾಗಿ ಅನೇಕ ಚಿತ್ರ ನಿರ್ಮಾಪಕರು ಈಗ ಕೃತಿ ಡೇಟ್ಸ್ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ ಎನ್ನಲಾಗುತ್ತಿದೆ.

ಕೃತಿ ನಾನಿಯ ‘ಶ್ಯಾಮ್ ಸಿಂಘಾ ರಾಯ್’ ಮತ್ತು ಸುಧೀರ್ ಬಾಬು ನಟನೆಯ, ಮೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದರು. ಆದರೆ, ಇನ್ನೂ ಎ ಲಿಸ್ಟ್‌ ನಟರ ಜೊತೆ ನಟಿಸಲು ಕೃತಿಗೆ ಯಾವುದೇ ಆಫರ್‌ ಇಲ್ಲ. ಇದಕ್ಕೆ ಇನ್ನೂ ಸ್ವಲ್ಪ ಟೈಮ್‌ ಬೇಕಾಗಬಹುದು ಅಂತಿದ್ದಾರೆ ಟಾಲಿವುಡ್‌ ಮಂದಿ. ಇನ್ನೂ ಕೆಲವು ಚಿತ್ರಗಳು ಹಿಟ್‌ ಆದರೆ ಕೃತಿ ಸ್ಟಾರ್​ ನಟರ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ. ಹಾಗಾಗಿ, ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಶೀಘ್ರದಲ್ಲೇ ಕೃತಿ ಅವರಿಂದ ಟಫ್ ಕಾಂಪಿಟೇಶನ್‌ ಎದುರಿಸಬಹುದು ಅಂತಿದ್ದಾರೆ ಟಾಲಿವುಡ್‌ ಪಂಡಿತರು.

ಇದ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ನಟಿ ರಶ್ಮಿಕಾ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More