ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ಸ್ಫೋಟಕ ಅಂಶ ಪತ್ತೆ.. ಮೂವರಿಗಾಗಿ ಎಸ್​ಐಟಿ ಹುಡುಕಾಟ

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ದೂರು ಕೊಡೋ ಬಗ್ಗೆ ಚಿಂತನೆ ನಡೆಸ್ತಿದ್ದ ಸಾಹುಕಾರ್ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ಸ್ಫೋಟಕ ಅಂಶ ಪತ್ತೆ.. ಮೂವರಿಗಾಗಿ ಎಸ್​ಐಟಿ ಹುಡುಕಾಟ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ಐಟಿ ತನಿಖೆ ಬಹುತೇಕ ಮುಕ್ತಾಯ: ಬಿ ರಿಪೋರ್ಟ್ ಯಾರ ಪರವಾಗಿ?
Follow us
ಆಯೇಷಾ ಬಾನು
|

Updated on: Mar 14, 2021 | 8:37 AM

ಬೆಂಗಳೂರು: ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮೇಶ್ ನೀಡಿರೋ ದೂರಿನಲ್ಲಿ ಹೊಸ ಸ್ಫೋಟಕ ಅಂಶ ಬಯಲಾಗಿದೆ. ಅದೇನಂದ್ರೆ ಸದಾಶಿವನಗರದಲ್ಲೇ 3 ತಿಂಗಳಿನಿಂದ ನನ್ನ ವಿರುದ್ಧ ಮಸಲತ್ತು ನಡೆದಿದೆ. ನಕಲಿ ಸಿಡಿ ಸೃಷ್ಟಿಸಿ ಮಾನಸಿಕವಾಗಿ ಹಿಂಸೆ ಮಾಡಿ, ರಾಜಕೀಯವಾಗಿ ಮಾನಹಾನಿ ಮಾಡಲು ನನ್ನಿಂದ ಹಣವನ್ನೂ ಪಡೆಯಲು ಯತ್ನಿಸಲಾಗ್ತಿದೆ ಅಂತಾ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ಇದ್ರ ಹಿಂದೆ ಹಲವಾರು ಜನ ಇದ್ದು, ನಕಲಿ ಸಿಡಿ ತಯಾರಿಸಲು ಭಾಗಿಯಾಗಿಯಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ ಅಂತಾ ಉಲ್ಲೇಖಿಸಿದ್ದಾರೆ.

ಸದಾಶಿವನಗರ ಪೊಲೀಸರು, ಐಪಿಸಿ ಸೆಕ್ಷನ್, 34, 120ಬಿ, 385, 465, 469ನಡಿ ದೂರು ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 34ರಲ್ಲಿ ಒಂದೇ ದುರುದ್ದೇಶದಿಂದ ಹಲವರ ಕೃತ್ಯ ಎಸಗಿರೋದು, 120ಬಿಯಲ್ಲಿ ಅಪರಾಧ ಕೃತ್ಯ ನಡೆಸಲು ಒಳಸಂಚು ರೂಪಿಸಿರೋದು, 385 ಐಪಿಸಿ ಸೆಕ್ಷನ್‌ನಡಿ, ಭಯ ಹುಟ್ಟಿಸಿ ಸುಲಿಗೆ ಮಾಡುವ ಪ್ರಯತ್ನ, ಇದರ ಜೊತೆಗೆ 465ರ ಅಡಿ ನಕಲಿ ಕೃತ್ಯ, 469ರಡಿ ಖೊಟ್ಟಿ ದಾಖಲೆ ಮೂಲಕ ಮಾನಹಾನಿ ನಡೆಸುವ ಯತ್ನ ಅಂತಾ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಎಫ್​ಐಆರ್ ಆಗಿರೋ ವಿಚಾರವನ್ನ ಠಾಣಾಧಿಕಾರಿ ಕಮಿಷನರ್​ ಗಮನಕ್ಕೆ ತಂದಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಕರಣ ಎಸ್​ಐಟಿಗೆ ವರ್ಗಾವಣೆ ಇನ್ನು ರಮೇಶ್ ಜಾರಕಿಹೊಳಿ ನೀಡಿದ್ದ ದೂರನ್ನು ಎಸ್​ಐಟಿಗೆ ವರ್ಗಾಯಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್ ಆದೇಶ ಹೊರಡಿಸಿದ್ದಾರೆ. ಎಸ್​ಐಟಿಗೆ ಪ್ರಕರಣ ವರ್ಗಾವಣೆ ಆಗ್ತಿದ್ದಂತೆ ​​ಕಬ್ಬನ್​ಪಾರ್ಕ್​​ ಪೊಲೀಸರು ಬಸವನ ಬಾಗೇವಾಡಿಯ ಸಿಡಿ ಲೇಡಿ ಮನೆಗೆ, ​ಪಿಜಿ ಓನರ್​, ಸಿಡಿ ಲೇಡಿ ಸ್ನೇಹಿತರಿಗೆ ನೋಟಿಸ್ ಕಳಿಸಿದೆ ಎಂಬ ಮಾಹಿತಿ ಸಿಕ್ಕಿದೆ.

ರಮೇಶ್ ಜಾರಕಿಹೊಳಿ ದೂರು ನೀಡಿದ್ದರಿಂದ ಎಸ್​ಐಟಿಗೆ ಆನೆಬಲ ಬಂದಂತಾಗಿದೆ. ಇಷ್ಟು ದಿನ ಎಫ್​ಐಆರ್​ ಇಲ್ಲದೇ ಎಸ್​ಐಟಿ ತನಿಖೆ ನಡೆಸಿತ್ತು. ಪ್ರಕರಣದ ಬಗ್ಗೆ ಹಲವರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹ ಮಾಡಿತ್ತು. ಈಗಾಗಲೇ ಪ್ರಕರಣ ಸಂಬಂಧ ಐವರ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ. ಆದ್ರೆ ಈಗ FIR ದಾಖಲಾಗಿರುವ ಕಾರಣ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.

ಮೂವರಿಗಾಗಿ ಎಸ್​ಐಟಿ ಹುಡುಕಾಟ ಇನ್ನು ಕೇಸ್ ವರ್ಗಾವಣೆ ಬಳಿಕ ಅಧಿಕೃತವಾಗಿ ಎಸ್​ಐಟಿ ವಿಚಾರಣೆಗೆ ಮುಂದಾಗಿದೆ. ಎಸ್​ಐಟಿ ಅಧಿಕಾರಿಗಳ ಟೀಂ ಯುವತಿ ಸೇರಿದಂತೆ ಮೂವರಿಗಾಗಿ ಬಲೆ ಬೀಸಿದೆ. ವಿಡಿಯೋದಲ್ಲಿರುವ ಯುವತಿ, ಇಬ್ಬರು ಪುರುಷರಿಗೆ ಹುಡುಕಾಟ ಮುಂದುವರೆದಿದೆ. ತುಮಕೂರು, ದೇವನಹಳ್ಳಿ ಮೂಲದವರ ಬಳಿ ಸ್ಫೋಟಕ ಸತ್ಯ?ಇದೆ ಎಂಬ ಮಾಹಿತಿ ಸಿಕ್ಕಿದೆ. ಈಗ ಸಿಕ್ಕಿರುವ ಆರೋಪಿಗಳ ಹೇಳಿಕೆ ಆಧರಿಸಿ ತನಿಖೆ ಚುರುಕುಗೊಳಿಸಲಾಗುತ್ತಿದೆ.

ಇದನ್ನೂ ಓದಿ: ಸಿಡಿ ಯುವತಿಯಿಂದ ಲೇಟೆಸ್ಟ್​ ವಿಡಿಯೋ ಬಿಡುಗಡೆ: ರಮೇಶ್​ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿದೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ