ಸುಮ್ಮನಿರಲಾರದೆ ಸಿಂಹದ ಮರಿ ಜತೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡ ದಂಪತಿ; ಕ್ರಿಯೇಟಿವಿಟಿ ತೋರಿಸೋಕೆ ಹೋಗಿ ಸಂಕಷ್ಟ ತಂದುಕೊಂಡ್ರು.. !
ಹೀಗೆ ಸಿಂಹದ ಮರಿಯೊಟ್ಟಿಗೆ ಜೋಡಿಯ ಫೋಟೋ ತೆಗೆದುಕೊಟ್ಟ ಸ್ಟುಡಿಯೋ ಹೆಸರು ಸ್ಟುಡಿಯೋ ಅಫ್ಜಲ್ ಎಂದಾಗಿದ್ದು, ಇನ್ಸ್ಟಾಗ್ರಾಂನಲ್ಲಿ 1,20,000 ಫಾಲೋವರ್ಸ್ನ್ನು ಹೊಂದಿದೆ. ದಂಪತಿಯ ಫೋಟೋವನ್ನು #SherdiRani (Lioness Queen) ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಶೇರ್ ಮಾಡಿಕೊಂಡಿದೆ.
ಮದುವೆ ಎಂದಮೇಲೆ ಅಲ್ಲಿ ಫೋಟೋಶೂಟ್ ಇರಲೇಬೇಕು..ಜಗತ್ತಿನಾದ್ಯಂತ ಹೀಗೊಂದು ಸಂಪ್ರದಾಯ ಬಲವಾಗಿ ಬೆಳೆದುನಿಂತಿದೆ. ಈಗಂತೂ ಪ್ರೀವೆಡ್ಡಿಂಗ್ ಫೋಟೋಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ಎನ್ನುತ್ತ ತರಹೇವಾರಿ ಫೋಟೋಶೂಟ್ಗಳು ಶುರುವಾಗಿಬಿಟ್ಟಿವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಂತೂ ಜೋಡಿಗಳು ಏನಾದರೂ ಹೊಸದಾಗಿ, ಕ್ರಿಯೇಟಿವ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳಬೇಕು.. ಈ ಮೂಲಕ ತಮ್ಮ ಮದುವೆಯನ್ನು ಸ್ಪೆಶಲ್ ಆಗಿಸಿಕೊಳ್ಳಬೇಕು ಎಂದೇ ಯೋಚಿಸುತ್ತಾರೆ. ಈಗಾಗಲೇ ಕೆಲವು ಅಪರೂಪ ಎನ್ನಿಸುವ ಫೋಟೋಶೂಟ್ ಬಗ್ಗೆ ನಾವೀಗಲೇ ಓದಿದ್ದೇವೆ. ಹಾಗೇ ಇಲ್ಲೊಂದು ದಂಪತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಂಹದ ಮರಿಯೊಟ್ಟಿಗೆ ಫೋಟೋ ಶೂಟ್ ಮಾಡಿಸಿಕೊಂಡು, ಇದೀಗ ಸಂಕಷ್ಟಕ್ಕೀಡಾಗಿದ್ದಾರೆ.
ಇದು ನಮ್ಮ ದೇಶದಲ್ಲಿ ಆಗಿದ್ದಲ್ಲ.. ಬದಲಿಗೆ ಪಕ್ಕದ ದೇಶ ಪಾಕಿಸ್ತಾನದಲ್ಲಿ ನಡೆದ ವಿಚಿತ್ರ ಫೋಟೋಶೂಟ್. ಲಾಹೋರ್ನ ಜೋಡಿಯೊಂದು ಹೀಗೆ ವಿಭಿನ್ನವಾಗಿ ಏನೋ ಮಾಡಲು ಹೋಗಿ ಈಗ ಸಿಕ್ಕಾಪಟೆ ಟೀಕೆಗೆ ಗುರಿಯಾಗಿದೆ. ದಂಪತಿ ಸಿಂಹದ ಮರಿಯೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ. ಇದು ಪ್ರಾಣಿ ಮೇಲಿನ ದೌರ್ಜನ್ಯ, ಹಿಂಸೆ ಎಂದು ಹೇಳಿದ್ದಾರೆ.
ಸಿಂಹದ ಮರಿ ತುಂಬ ಪುಟ್ಟಗಿದ್ದು, ಅದು ಬಹುತೇಕ ನಿದ್ದೆ ಮೂಡ್ನಲ್ಲಿಯೇ ಇರುವುದು ವೈರಲ್ ಆದ ಫೋಟೋಗಳಿಂದ ಸ್ಪಷ್ಟವಾಗುತ್ತಿದೆ. ಹೀಗೆ ನೆಲದ ಮೇಲೆ ಮಲಗಿದ ಸಿಂಹದ ಮರಿಯ ಅಕ್ಕಪಕ್ಕ ಕುಳಿತು ಫೋಟೋ ತೆಗೆಸಿಕೊಂಡ ದಂಪತಿ ಬಗ್ಗೆ ಪ್ರಾಣಿ ದಯಾ ಸಂಘಟನೆ, ಪ್ರಾಣಿ ಹಕ್ಕು ರಕ್ಷಣಾ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಅಲ್ಲದೆ, ಈ ಪುಟ್ಟ ಸಿಂಹದ ಮರಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ತುಣುಕೊಂದನ್ನು ಪಾಕಿಸ್ತಾನದ ಸೇವ್ ದಿ ವೈಲ್ಡ್ ಎಂಬ ಎನ್ಜಿಒ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇನ್ನೂ ಸರಿಯಾಗಿ ಕಣ್ಣುಬಿಡಲಾಗದ ಮರಿಯನ್ನು ಎದುರಿಗಿಟ್ಟುಕೊಂಡು ಈ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ಇದು ಲಾಹೋರ್ನ ಸ್ಟುಡಿಯೋವೊಂದರಲ್ಲೇ ಮಾಡಲಾದ ಫೋಟೋಶೂಟ್. ಸಿಂಹದ ಮರಿಯನ್ನು ಅಲ್ಲೇ ಇಟ್ಟುಕೊಳ್ಳಲಾಗಿದೆ. ಯಾರಾದರೂ ಹೋಗಿ ಕಾಪಾಡಬೇಕು ಎಂದೂ ಬರೆದುಕೊಂಡಿದೆ.
ಹೀಗೆ ಸಿಂಹದ ಮರಿಯೊಟ್ಟಿಗೆ ಜೋಡಿಯ ಫೋಟೋ ತೆಗೆದುಕೊಟ್ಟ ಸ್ಟುಡಿಯೋ ಹೆಸರು ಸ್ಟುಡಿಯೋ ಅಫ್ಜಲ್ ಎಂದಾಗಿದ್ದು, ಇನ್ಸ್ಟಾಗ್ರಾಂನಲ್ಲಿ 1,20,000 ಫಾಲೋವರ್ಸ್ನ್ನು ಹೊಂದಿದೆ. ದಂಪತಿಯ ಫೋಟೋವನ್ನು #SherdiRani (Lioness Queen) ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಶೇರ್ ಮಾಡಿಕೊಂಡಿದೆ. ಇದನ್ನು ನೋಡಿದ ಮೇಲೆ ಪ್ರಾಣಿಪ್ರಿಯರು ಕೆಂಡಾಮಂಡಲರಾಗಿದ್ದಾರೆ. ಪ್ರಾಣಿರಕ್ಷಣಾ ಸಂಘ-ಸಂಸ್ಥೆಗಳಂತೂ ಫೋಟೋ-ವಿಡಿಯೋ ಶೇರ್ ಮಾಡಿಕೊಂಡು ಖಂಡನೆ ವ್ಯಕ್ತಪಡಿಸುತ್ತಿವೆ. ಇನ್ನು ಸಾಮಾನ್ಯ ಜನರೂ ಕೂಡ ಇದು ಇಷ್ಟವಾಗುತ್ತಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು
Published On - 2:51 pm, Sun, 14 March 21